Bigg Boss : ಮನೆಯಿಂದ ಹೊರನಡೆದ ಪ್ರಿಯಾಂಕಾಗೆ ಕೆಟ್ಟದಾಗಿ ಸನ್ನೆ ಮಾಡಿದ ಚಕ್ರವರ್ತಿ!
ಈ ಬಾರಿ ಬಿಗ್ ಬಾಸ್ ಮನೆಯಿಂದ ಪ್ರಿಯಾಂಕಾ ತಿಮ್ಮೇಶ್ ಹೊರನಡೆದಿದ್ದಾರೆ. ಪ್ರಿಯಾಂಕ ಹಾಗೂ ಪ್ರಶಾಂತ್ ಸಂಬರಗಿ, ವೈಷ್ಣವಿ ಇವರೊಂದಿಗೆ ಶುಭಾ ಪೂಂಜಾ ಈ ವಾರದ ನಾಮಿನೇಷನ್ ನಲ್ಲಿದ್ದರು. ಈ ಮೂವರಲ್ಲಿ ಪ್ರಿಯಾಂಕಾ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.
ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆಗೆ ಆಗಮಿಸಿದ ಪ್ರಿಯಾಂಕಾ ತಿಮ್ಮೇಶ ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಂಡರು. ನಂತರ ಚಕ್ರವರ್ತಿ ಯೊಂದಿಗೆ ಏರು ಧ್ವನಿಯಲ್ಲಿ ಪ್ರಿಯಾಂಕಾ ಮಾತನಾಡಿರುವುದು ಉಂಟು. ಮನೆಯ ಕೆಲ ಸದಸ್ಯರೊಂದಿಗೆ ಮನಸ್ತಾಪಗಳಾದರೂ ಇತ್ತೀಚೆಗೆ ಮನೆಯ ಎಲ್ಲಾ ಸದಸ್ಯರೊಂದಿಗೆ ಪ್ರಿಯಾಂಕಾ ಚನ್ನಾಗೇ ಇದ್ದರು. ಆದರೆ ಚಕ್ರವರ್ತಿ ಅವರೊಂದಿಗೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಈ ಬಾರಿ ಬಿಗ್ ಬಾಸ್ ಮನೆಯಿಂದ ಹೊರನಡೆದರು.
ದೊಡ್ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರ ಒಂದನ್ನು ನೀಡಿದ್ದರು. ಅದರನ್ವಯ ಒಬ್ಬರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಬೇಕು. ಆಗ ಪ್ರಿಯಾಂಕಾ ತೆಗೆದುಕೊಂಡ ಹೆಸರು ಚಕ್ರವರ್ತಿ ಚಂದ್ರಚೂಡ್ ಅವರದ್ದು. ಇದು ಚಕ್ರವರ್ತಿ ಚಂದ್ರಚೂಡ್ಗೆ ಅಸಮಾಧಾನ ತರಿಸಿದೆ. ಹೀಗಾಗಿ, ಪ್ರಿಯಾಂಕಾಗೆ ಅವರು ಅಶ್ಲೀಲ ಸನ್ನೆ ತೋರಿಸಿದ್ದಾರೆ.
ಸುದೀಪ್ ಅವರು ಪದೇಪದೇ ಹೇಳಿದರೂ ಚಕ್ರವರ್ತಿ ಇದೇ ತಪ್ಪನ್ನು ಮಾಡುತ್ತಿದ್ದಾರೆ. ಇದಕ್ಕೆ ಬಿಗ್ ಬಾಸ್ ಯಾವುದೇ ಶಿಕ್ಷೆ ನೀಡದೇ ಇರಬಹುದು. ಆದರೆ, ಈ ವಾರದ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ. ಇನ್ನು, ಚಕ್ರವರ್ತಿ ಈ ನಡೆ ಅನೇಕರಿಗೆ ಅಸಮಾಧಾನ ತರಿಸಿದೆ. ನೇರವಾಗಿ ನಾಮಿನೇಟ್ ಆಗಿರುವ ಚಕ್ರವರ್ತಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಕಳಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಹೀಗಾಗಿ ಈ ಬಾರಿ ಅವರಿಗೆ ಕಡಿಮೆ ವೋಟ್ ಬಿದ್ದು ಹೊರನಡೆದರೂ ಅಚ್ಚರಿ ಇಲ್ಲ.