ಇನ್ನೂ ಜೀವಂತವಾಗಿರುವ ಅಸ್ಪೃಶ್ಯತೆ ಪಿಡುಗು : ದಲಿತರಿಗೆ ಪ್ರತ್ಯೇಕ ಗ್ಲಾಸ್, ತಟ್ಟೆ

ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಎಷ್ಟೇ ಮುಂದುವರೆದರೂ ಕೂಡ ಜಾತಿ ತಾರತಮ್ಯ ನಮ್ಮ ಸಮಾಜದಲ್ಲಿ ಇನ್ನೂ ಕೂಡ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಕೊಪ್ಪಳದಲ್ಲಿ ನಡೆದು ಘಟನೆ.

ಹೌದು.. ಕೊಪ್ಪಳದಲ್ಲಿ ಇನ್ನೂ ಜೀವಂತವಾಗಿದೆ ಅಸ್ಪೃಶ್ಯತೆ ಪಿಡುಗು. ತಿಗರಿ ಗ್ರಾಮದ ಫಕಿರೇಶ್ವರ ಜಾತ್ರೆಯಲ್ಲಿ ಹೊಟೇಲ್ ಮಾಲೀಕರು ದಲಿತ ಯುವಕರಿಗೆ ಮಗ್ಗನ್ನು ಮೇಲೆತ್ತಿ ನೀರು ಹಾಕಿದ್ದಾರೆ. ಜೊತೆಗೆ ದಲಿತರಿಗೆ ಪ್ರತ್ಯೇಕ ಗ್ಲಾಸ್ ತಟ್ಟೆ , ಪ್ರತ್ಯೇಕ ಸ್ಥಳ ಇರಿಸಿದ್ದು ಭಾರೀ ವಿರೋಧಕ್ಕೆ ಕಾರಣವಾಗಿದೆ. ನಿನ್ನೆ ಸಾಮೂಹಿಕ ವಿವಾಹದಲ್ಲಿ ದಲಿತರಿಗೆ ಅವಕಾಶ ನೀಡದ ಸವರ್ಣೀಯರು, ಅದೇ ಜಾತ್ರೆಯಲ್ಲಿ ಹೊಟೇಲ್ ಗಳಲ್ಲಿ ದಲಿತರಿಗೆ ನಡೆಯುತ್ತಿರುವ ಶೋಷಣೆ ಮೊಬೈಲ್ ನಲ್ಲಿ ಸೆರೆಯಾಗಿದೆ.

ಅಧಿಕಾರಿಗಳು ಬಂದು ಹೋದ್ರು ಮತ್ತೆ ಸವರ್ಣೀಯರ ಅದೇ ಆಟ ಮುಂದುವರೆಸಿದ್ದಾರೆ. ಶಾಂತಿ ಸಭೆಗಳನ್ನು ನಡೆಸಿದರೂ ದಲಿತರಿಗೆ ಸ್ವಾತಂತ್ರ್ಯ ಸಿಗುತ್ತಿಲ್ಲ. ಕೊಪ್ಪಳದ ಹಲವು ಗ್ರಾಮಗಳಲ್ಲಿ ಇಂದಿಗೂ ದಲಿತರು ಶೋಷಣೆಗೆ ಒಳಾಗುತ್ತಿದ್ದಾರೆ. ಜಾತ್ರೆಯಲ್ಲಿ ಪೊಲೀಸ್ ಸಿಬ್ಬಂದಿ ಇದ್ರೂ ನಡೆದ ಘಟನೆ ನಡೆದಿದೆ. ಾದರೂ ಕೂಡ ಪ್ರಶ್ನೆ ಮಾಡಲಾಗಿಲ್ಲ. ಕೊಪ್ಪಳದ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ ಎಂದು ಪ್ರಶ್ನೆ ಮಾಡಲಾಗುತ್ತಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights