ಬೆಳಗಾವಿ: ಎಂಇಎಸ್ ನಾಯಕ ದೀಪಕ್ ದಳ್ವಿ ಮುಖಕ್ಕೆ ಮಸಿ ಎರಚಿದ ಕನ್ನಡ ಕಾರ್ಯಕರ್ತರು; ಬಂದ್‌ಗೆ ಕರೆ!

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಿರಿಯ ಮುಖಂಡ ದೀಪಕ್ ದಳವಿ ಅವರ ಮುಖಕ್ಕೆ ಕೆಲವು ಕನ್ನಡ ಕಾರ್ಯಕರ್ತರು ಕಪ್ಪು ಮಸಿ ಬಳಿದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಸೋಮವಾರ ಬೆಳಗ್ಗೆ ಬೆಳಗಾವಿಯ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದ ಬಳಿ ಮಹಾಮೇಳವಾ ನಡೆಸಲು ಎಂಇಎಸ್ ಮುಂದಾಗಿತ್ತು. ಇದಕ್ಕಾಗಿ ಮೈದಾನಕ್ಕೆ ಬಂದ ದೀಪಕ್‌ ದಳವಿ ಅವರ ಮುಖಕ್ಕೆ ಮಸಿ ಎರಚಲಾಗಿದೆ. ಇದರಿಂದಾಗಿ, ಸ್ಥಳದಲ್ಲಿ ಉದ್ವಿಘ್ನತೆ ಉಂಟಾಗಿದ್ದು, ಬೆಳಗಾವಿ ಬಂದ್‌ಗೆ ರೆ ನೀಡಲಾಗಿದೆ.

ಡಿಸೆಂಬರ್ 14 (ಮಂಗಳವಾರ) ರಂದು ಬೆಳಗಾವಿ ಬಂದ್‌ಗೆ ಎಂಇಎಸ್ ನಾಯಕರು ಕರೆ ನೀಡಿದ್ದಾರೆ. ಹೀಗಾಗಿ, ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಡಿ.14ರಂದು ಖಾನಾಪುರ ಮತ್ತು ನಿಪಾಣಿ ಮುಖಂಡರು ಬಂದ್ ಆಚರಿಸುವುದಾಗಿ ಘೋಷಿಸಿದ್ದಾರೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುತ್ತಿರುವ ಸರ್ಕಾರದ ವಿರುದ್ಧ ಎಂಇಎಸ್ ಪ್ರತಿಭಟನೆ ನಡೆಸಲು ಎಂಇಎಸ್ ಸಂಘಟನೆ ಮಹಾಮೇಳವನ್ನು ಹಮ್ಮಿಕೊಂಡಿತ್ತು.

ಇದನ್ನೂ ಓದಿ: ನಾನೂ ಹಿಂದೂ; ಆದರೆ ಹಿಂದೂತ್ವವಾದಿ ಅಲ್ಲ: ರಾಹುಲ್‌ ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights