ಸಲಾಮ್ ಹೇಳದ ಕಾರಣಕ್ಕೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಶಾಸಕ; ಪೊಲೀಸ್‌ ದೂರು ದಾಖಲು!

ತೆಲಂಗಾಣದ ಚಾರ್ಮಿನಾರ್ ಕ್ಷೇತ್ರದ ಎಐಎಂಐಎಂ ಶಾಸಕ ಮುಮ್ತಾಜ್ ಅಹ್ಮದ್ ಖಾನ್ ಅವರು ಶನಿವಾರ ರಾತ್ರಿ ಪಂಚ್ ಮೊಹಲ್ಲಾದಲ್ಲಿರುವ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ನೆರೆಹೊರೆಯವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದ್ದು, ಪೊಲೀಸರು ದೂರುದಾರನ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ದೂರುದಾರ ಗುಲಾಂ ಘೌಸ್ ಜೀಲಾನಿ (35) ಅವರು ಹುಸೇನಿ ಆಲಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಅವರು ಶಾಸಕರ ಹೆಸರನ್ನು ಹೇಳದೇ ದೂರು ನೀಡಿದ್ದಾರೆ. ಅವರು ನೀಡಿದ ವಿವರಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ನಂತರ, ಘಟನೆ ಕೋಲಾಹಲ ಸೃಷ್ಟಿಸಿದೆ ಎಂದು ವರದಿಯಾಗಿದೆ.

ಶಾಸಕರು ವಾಹನದಿಂದ ಇಳಿದು ತಮ್ಮ ನಿವಾಸದ ಕಡೆಗೆ ತೆರಳುತ್ತಿದ್ದಾಗ ಅವರಿಗೆ ಸಲಾಮ್‌ ಹೇಳಲಿಲ್ಲ ಎಂದು ಶಾಸಕರು ತನಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಜೀಲಾನಿ ಹೇಳಿದ್ದಾರೆ.

ಭಾನುವಾರ, ಪೊಲೀಸರು ಜೀಲಾನಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದರು. ವರದಿಯಲ್ಲಿ, ಶಾಸಕರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಪಷ್ಟವಾಗಿ ಕಂಡುಬಂದಿದೆ.

“ಚಾರ್ಮಿನಾರ್ ಬಸ್ ನಿಲ್ದಾಣದಲ್ಲಿ ಮಧ್ಯರಾತ್ರಿ 12.20ಕ್ಕೆ ಮುಮ್ತಾಜ್ (ಶಾಸಕ) ಜೀಲಾನಿ ಮೇಲೆ ಹಲ್ಲೆ ನಡೆಸಿದ್ದು, ಕಿವಿಯ ಎಡಭಾಗದಲ್ಲಿ ಮತ್ತು ಕೆಳಗಿನ ದವಡೆಯ ಮೇಲೆ ಪೆಟ್ಟು ಬಿದ್ದಿದೆ” ಎಂದು ಒಜಿಹೆಚ್ ನೀಡಿದ ಒಪಿ ಟಿಕೆಟ್‌ನಲ್ಲಿ ವಿವರಿಸಲಾಗಿದೆ.

ಜೀಲಾನಿ ಹೇಳಿಕೆಯನ್ನು ಪರಿಶೀಲಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಜೀಲಾನಿ ಅವರ ಆರೋಪಕ್ಕೆ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಗೋವಾ ಚುನಾವಣೆ: ವಿಪಕ್ಷಗಳ ಮೈತ್ರಿಗೆ ಕಾಂಗ್ರೆಸ್‌ ಪ್ರಯತ್ನ; ಇಲ್ಲವಾದರೆ ಬಿಜೆಪಿಗೆ ಮತ್ತೆ ಅಧಿಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights