ಅಪೌಷ್ಠಿಕತೆ ಮತ್ತು ರೋಗನಿರೋಧಕ ಶಕ್ತಿಯ ಕೊರತೆಯಿಂದ ಕಾರ್ಮಿಕರು ಸೋಂಕಿಗೆ ತುತ್ತಾಗುತ್ತಾರೆ

ಭಾರತದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿರುವವರಲ್ಲಿ ಶೇ.20 ಜನರು ವಲಸೆ ಕಾರ್ಮಿಕರಾಗಿದ್ದಾರೆ. ರೋಗನಿರೋಧಕ ಶಕ್ತಿಯ ಕೊರತೆ ಮತ್ತು ಅಪೌಷ್ಟಿಕತೆಯ ಕಾರಣದಿಂದಾಗಿ ಕಾರ್ಮಿಕರಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಪೌಷ್ಠಿಕತೆಯು ಸಮಾಜದ ಹಿಂದುಳಿದ ವರ್ಗಗಳಲ್ಲಿ ಸದಾ ಇರುವ ಸಮಸ್ಯೆಯಾಗಿದ್ದು, ಪೌಷ್ಠಿಕ ಆಹಾರದ ಸಮಸ್ಯೆ ಮುಂದುವರೆಯುತ್ತಲೇ ಇದೆ.

ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಸೋಂಕಿತ ಕಾರ್ಮಿಕರ ಪ್ರಮಾಣ ಶೇಕಡಾ 26 ರಷ್ಟಿದ್ದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಶೇಕಡಾ 3 ರಿಂದ 4 ರಷ್ಟಿದೆ.

ವಲಸೆ ಕಾರ್ಮಿಕರು ದುಡಿಯುವ ಅಲ್ಪ ಸಂಬಳದ ಬಹುಪಾಲು ಅವರ ವಸತಿಗಾಗಿ ಮೀಸಲಾಗುತ್ತದೆ. 10-15 ಜನರನ್ನು ಒಂದೇ ಮನೆಯಲ್ಲಿ ವಾಸಿಸುತ್ತಾರೆ. ಸಾಮಾಜಿಕ ಅಂತರವನ್ನೂ ಪಾಲಿಸಲಾಗದಂತಹ ಇಕ್ಕಟ್ಟಿನ ಪ್ರದೇಶದಲ್ಲಿಯೇ ವಾಸಿಸುವ ಅನಿವಾರ್ಯತೆಯೂ ಇವರಿಗಿದೆ.

ಹಾಗಾಗಿ ಅಂತಹ ಇಕ್ಕಟ್ಟಿನ ಪ್ರದೇಶದಲ್ಲಿಯೇ ಕಾರ್ಮಿಕರು ವಾಸಿಸುತ್ತಾರೆ, ತಿನ್ನುತ್ತಾರೆ, ಮಲಗುತ್ತಾರೆ. ಸೋಂಕನ್ನು ನಿಯಂತ್ರಿಸಲು ಸಾಮಾಜಿಕವಾಗಿ ದೂರವಿರುವುದು ಪ್ರಮುಖ ಅಂಶವಾಗಿದ್ದರೂ, ಲಾಕ್‌ಡೌನ್‌ನಿಂದಾಗಿ ಹೊರಗೆ ಕುಳಿತುಕೊಳ್ಳಲು ಅವಕಾಶವಿಲ್ಲದ್ದಿದ್ದಾಗ ಇಕ್ಕಟ್ಟಿನ ಜಾಗದಲ್ಲಿ ಮತ್ತಷ್ಟು ಸಮಸ್ಯೆಗಳಿಗೆ ಕಾರ್ಮಿಕರು ಸಿಲುಕಿದ್ದನ್ನು ನಗರ ಪ್ರದೇಶಗಳಲ್ಲಿ ಗಮನಿಸಬುದು.

ವಲಸೆ ಕಾರ್ಮಿಕರು ನಗರ ಪ್ರದೇಶಗಳಲ್ಲಿ ಇಕ್ಕಟ್ಟಿನಿಂದ ಸಾಮುದಾಯಿಕವಾಗಿ ವಾಸಿಸುತ್ತಿದ್ದಾರೆ. ಅವರಲ್ಲಿ ಕೊರೊನಾ ಲಕ್ಷಣಗಳು ಇರುವ ಸಾಧ್ಯತೆಗೂ ಇರಬಹುದು ಎಂದು ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ಕೆ.ಕೆ.ಅಗರ್‌ವಾಲ್ ಹೇಳಿದ್ದಾರೆ.

“ಸೋಂಕು ಮತ್ತಷ್ಟು ಹರಡದಂತೆ ಅವರನ್ನು ಪರೀಕ್ಷಿಸುವುದು ಮತ್ತು ಪ್ರತ್ಯೇಕಿಸುವುದು ಮುಖ್ಯ. ಅವರಲ್ಲಿ ಹಲವರು ಕೆಲವು ಸೊಂಕಿನ ಲಕ್ಷಣಗಳನ್ನು ಮಾತ್ರ ಹೊಂದಿರುತ್ತಾರೆ ಮತ್ತು ಅವರಿಗೆ ಆಸ್ಪತ್ರೆಗೆ ಅಗತ್ಯವಿರುವುದಿಲ್ಲ. ಅವರು ಹೆಚ್ಚು ದುರ್ಬಲರಾಗಿರುತ್ತಾರೆ, ಅವರನ್ನು ಸರಿಯಾಗಿ ರಕ್ಷಿಸಬೇಕು ಮತ್ತು ಗೌರವಿಸಬೇಕು” ಎಂದು ಡಾ ಅಗರ್‌ವಾಲ್ ಹೇಳಿದರು.

“ಹೆಚ್ಚಿನ ಕಾರ್ಮಿಕರು ಲಕ್ಷಣರಹಿತರಾಗಿದ್ದಾರೆ. ಆದರೆ, ಇದೂ ಸೋಂಕಿನ ಮುಖ್ಯ ಕಾರಣವಾಗಿದೆ. ಸರಿಯಾದ ಆಹಾರ ಮತ್ತು ನೀರಿಲ್ಲದೆ ಅವರು ಬಹಳ ದೂರ ನಡೆದಿದ್ದಾರೆ. ಹೆದ್ದಾರಿಗಳು ಅಥವಾ ರೈಲ್ವೆ ಹಳಿಗಳ ಹತ್ತಿರ ವಾಸಿಸಿದ್ದಾರೆ. ಅವರಲ್ಲಿ ಹಲವರು ಮಧ್ಯವಯಸ್ಕರು. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ವೈದ್ಯಕೀಯ ಸ್ಥಿತಿಯನ್ನು ಹೊಂದಿರುವ ಬಗ್ಗೆ ಅವರು ತಿಳಿದಿಲ್ಲದಿರಬಹುದು. ಒಮ್ಮೆ ಸೋಂಕಿಗೆ ಒಳಗಾದ ನಂತರ ಈ ಅಂಶಗಳು ಈಗ ಮುನ್ನೆಲೆಗೆ ಬರುತ್ತಿವೆ. ಆದ್ದರಿಂದ ಅವರಲ್ಲಿ ಸೋಂಕು ದೃಢಪಡಬಹುದಾದ ಪ್ರಮಾಣ ಹೆಚ್ಚು” ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ.ಮಸ್ತುಫಾ ಅಫ್ಜಲ್ ಹೇಳುತ್ತಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights