ದೇಶಾದ್ಯಂತ ಕೊರೊನಾ ರಣಕೇಕೆ : 2 ದಿನದಲ್ಲಿ 11,220 ಹೊಸ ಕೇಸ್ – 1 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ಕೊರೊನಾ ವೈರಸ್ ಗೆ ಇಡೀ ದೇಶವೇ ಹೈರಾಣಾಗಿ ಹೋಗಿದೆ. ಈವರೆಗೆ ಕೊರೊನಾ ಪೀಡಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಮೃತರ ಪ್ರಮಾಣ ಕೂಡ 3 ಸಾವಿರದ ಗಡಿ ದಾಟಿದೆ.

ಹೌದು…  ವೈರಸ್ ಪ್ರಭಾವ ದಿನೇ ದಿನೇ ಏರುಗತಿಯಲ್ಲಿ ಸಾಗಿದ್ದು ಸುಮಾರು 1.12 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದಾರೆ.  ಕೊರೋನಾಗೆ ರಣಕೇಕೆಗೆ ಮಹಾರಾಷ್ಟ್ರ ಕಂಗಾಲಾಗಿದ್ದು  41, 642 ಮಂದಿ ವೈರಾಣು ಪೀಡಿತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,345  ಹೊಸ ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಗುಜರಾತ್  ಮೂರನೇ ಸ್ಥಾನದಲ್ಲಿ ಇದೆ. ರಾಷ್ಟ್ರ ರಾಜಧಾನಿ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ.

ಒಟ್ಟಾರೆಯಾಗಿ ಭಾರತದಲ್ಲಿ ಕಳೆದ 48 ಗಂಟೆಗಳಲ್ಲಿ  11,220 ಹೊಸ ಪ್ರಕರಣಗಳು ದಾಖಲಾಗಿವೆ ಎಂದು  ಇಂಡಿಯಾ ಟುಡೇ ವರದಿ ತಿಳಿಸಿದೆ. 2 ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಇಲ್ಲಿಯಾವರೆಗೆ ದೇಶಾದ್ಯಂತ 1.12 ಲಕ್ಷ ಸೋಂಕಿತರಿದ್ದು, 3,435 ಜನರು ಈ ಮಹಾಮಾರಿಗೆ ಬಲಿಯಾಗಿದ್ದು, 45,300 ಜನರು ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರ ದಲ್ಲಿ  ಹೊಸದಾಗಿ 2,345 ಒಟ್ಟು 41,642 ಪ್ರಕರಣಗಳು ದಾಖಲಾಗಿವೆ. ತಮಿಳುನಾಡು 776 ಹೊಸ ಪ್ರಕರಣಗಳು ಒಟ್ಟು 13,967, ಗುಜರಾತ್ 371 ಹೊಸ ಪ್ರಕರಣಗಳು ಒಟ್ಟು 12,910, ರಾಜಸ್ಥಾನದಲ್ಲಿ 212 ಹೊಸ ಪ್ರಕರಣಗಳು ಒಟ್ಟು 6,227, ಮಾಧ್ಯಪ್ರದೇಶ 248 ಹೊಸ ಪ್ರಕರಣಗಳು ಒಟ್ಟು 5,981, ಉತ್ತರ ಪ್ರದೇಶ 340 ಹೊಸ ಪ್ರಕರಣಗಳು ಒಟ್ಟು 5,515, ಪಶ್ಚಿಮ‌ಬಂಗಾಳ 94 ಹೊಸ ಪ್ರಕರಣಗಳು ಒಟ್ಟು 3,197, ಪಂಜಾಬ್ 23 ಹೊಸ ಪ್ರಕರಣಗಳು ಒಟ್ಟು 2,028, ಬಿಹಾರ 7 ಹೊಸ ಪ್ರಕರಣಗಳು ಒಟ್ಟು 1,987, ತೆಲಂಗಾಣ 38 ಹೊಸ ಪ್ರಕರಣಗಳು 1,699 ದಾಖಲಾಗಿವೆ.
ಕರ್ನಾಟಕ 143 ಹೊಸ ಪ್ರಕರಣಗಳು ಒಟ್ಟು 1,605,ಜಮ್ಮು ಕಾಶ್ಮೀರ 59 ಹೊಸ ಪ್ರಕರಣಗಳು ಒಟ್ಟು 1,449,ಹರಿಯಾಣ 38 ಹೊಸ ಪ್ರಕರಣಗಳು ಒಟ್ಟು 1,031,ಒಡಿಶಾ 703 ಸಕ್ರಿಯ ಪ್ರಕರಣಗಳು ಒಟ್ಟು 1,103,ಕೇರಳ 24 ಹೊಸ ಪ್ರಕರಣಗಳು ಒಟ್ಟು 690,ಜಾರ್ಖಂಡ್ 9 ಹೊಸ ಪ್ರಕರಣಗಳು ಒಟ್ಟು 303,ಚಂಡೀಗ 37 ಸಕ್ರಿಯ ಪ್ರಕರಣಗಳು ಒಟ್ಟು 218,ಅಸ್ಸಾಂ 4 ಹೊಸ ಪ್ರಕರಣಗಳು ಒಟ್ಟು 203,ಉತ್ತರಾಖಂಡ 24 ಹೊಸ ಪ್ರಕರಣಗಳು ಒಟ್ಟು 146,
ಹಿಮಾಚಲ ಪ್ರದೇಶ 31 ಹೊಸ ಪ್ರಕರಣಗಳು ಒಟ್ಟು 141, ಗೋವಾ 2 ಹೊಸ ಪ್ರಕರಣಗಳು ಒಟ್ಟು 52 ಪ್ರಕರಣಗಳು ದಾಖಲಾಗಿವೆ.
ಇನ್ನೂ ಕಳೆದ 24 ಗಂಟೆಗಳಲ್ಲಿ ಕೋವಿಡ್ ಮಹಾಮಾರಿಗೆ ಅಮೆರಿಕಾದಲ್ಲಿ 1, 255 ಜನರು ಬಲಿಯಾಗಿದ್ದು, ಮೃತರ ಪ್ರಮಾಣ 94,702ಕ್ಕೆ ಏರಿಕೆಯಾಗಿದೆ. ಸುಮಾರು 15 ಲಕ್ಷಕ್ಕಿಂತ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
 ಮತ್ತೊಂದೆಡೆ ಬ್ರೆಜಿಲ್ ನಲ್ಲಿ ಕೋವಿಡ್ ಅಟ್ಟಹಾಸ ಮೆರೆಯುತ್ತಿದ್ದು ಗುರುವಾರ ಒಂದೇ ದಿನ 1,188 ಜನರು ಮೃತರಾಗಿ, 18 ಸಾವಿರ ಹೊಸ ಪ್ರಕರಣಗಳು ದಾಖಲಾಗಿವೆ.  ಈ ದೇಶ ಶೀಘ್ರವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ರಷ್ಯಾವನ್ನು ಮೀರಿಸಿ 2ನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇಲ್ಲಿ ಈವರೆಗೂ 20 ಸಾವಿರಕ್ಕಿಂತ ಹೆಚ್ಚು ಜನರು ಮೃತರಾಗಿದ್ದು, 3ಲಕ್ಷಕ್ಕಿಂತ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದಾರೆ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights