ನನ್ನನ್ನು ಯಾರು ತಬ್ಬಿಕೊಂಡು ಮುತ್ತುಕೊಟ್ಟಿಲ್ಲ: ಸಚಿವ ಮಾಧುಸ್ವಾಮಿ

ಕಾನೂನು ಸಚಿವ ಮಾಧುಸ್ವಾಮಿಯವರು ನಿನ್ನೆ ಕೊಲಾರ ಜಿಲ್ಲೆಯಲ್ಲಿ ರೈತ ಮಹಿಳೆಯೊಬ್ಬರಿಗೆ ಸಾರ್ವಜನಿಕವಾಗಿ ನಿಂದಿಸಿದ್ದರು. ಮಾಧುಸ್ವಾಮಿಯವರ ನಡೆಯ ವಿರುದ್ಧ ರಾಜ್ಯದ್ಯಾಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರೈತ ಮಹಿಳೆಯ ಕ್ಷಮೆ ಕೇಳಿದ್ದಾರೆ.

ಸಣ್ಣ ನೀರಾವರಿಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ ರೈತ ಮಹಿಳೆಗೆ ಸಚಿವ ಮಾಧುಸ್ವಾಮಿಯವರು ಆವೇಶದಿಂದ ನಿಂದಿಸಿದ್ದರು. ಮಾಧುಸ್ವಾಮಿಯವರ ನಿಂದನೆಯನ್ನು ಖಂಡಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಸಿದ್ದರಾಮಯ್ಯನವರು ಮಾಧುಸ್ವಾಮಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಯಡಿಯೂರಪ್ಪನವರು ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟು ಸರ್ಕಾರ ಮಾನ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.

ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಧುಸ್ವಾಮಿಯವರು, ನನ್ನನ್ನು ಸಿದ್ದರಾಮಯ್ಯನವರು ಸಚಿವರನ್ನಾಗಿ ಮಾಡಿಲ್ಲ. ನನಗೆ ಯಾರೂ ತಬ್ಬಿಕೊಂಡು ಮುತ್ತುಕೊಟ್ಟಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಅಲ್ಲದೆ, ರೈತ ಮಹಿಳೆಯಲ್ಲಿ ಕ್ಷಮೆ ಕೋರುತ್ತೇನೆ ಎಂದಿರುವ ಸಚಿವ ಮಾಧುಸ್ವಾಮಿ ಆಕೆ ಯಾವಾಗಲೂ ಅದೇ ರೀತಿ ನಡೆದುಕೊಳ್ಳುತ್ತಾಳಂತೆ, ಎಲ್ಲಾ ಅಧಿಕಾರಿಗಳನ್ನು ಅದೇ ರೀತಿ ಪ್ರಶ್ನೆ ಮಾಡುತ್ತಾಳಂತೆ ಎಂದು ಮತ್ತೊಂದು ವಿವಾದ ಸೃಷ್ಟಿಸಿಕೊಂಡಿದ್ದಾರೆ.

ಜನರ ಸಂಕಷ್ಟಗಳನ್ನು ಆಲಿಸದಿದ್ದರೆ, ಸಮಸ್ಯೆಗಳನ್ನು ಪರಿಹರಿಸದಿದ್ದರೆ ಎಷ್ಟು ಸಾರಿಯಾದರೂ ಪ್ರಶ್ನೆಕೇಳಬೇಕಾಗುತ್ತದೆ. ಸರಿಯಾದ ರೀತಿಯಲ್ಲಿ ಕೆಲಸ ಮಾಡಿ ಎಂದು ಮತ್ತೆ ಮಾಧುಸ್ವಾಮಿ ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ನನ್ನನ್ನು ಯಾರು ತಬ್ಬಿಕೊಂಡು ಮುತ್ತುಕೊಟ್ಟಿಲ್ಲ: ಸಚಿವ ಮಾಧುಸ್ವಾಮಿ”

  • November 21, 2020 at 9:32 pm
    Permalink

    Achei bastante legal a sua forma de expressar. Gostei de tudo em seu
    sítio.

    Reply

Leave a Reply

Your email address will not be published.

Verified by MonsterInsights