ಕರುನಾಡಿಗೆ ಕೊರೊನಾ ಕಂಟಕ : ರಾಜ್ಯದಲ್ಲಿಂದು ಹೊಸದಾಗಿ 116 ಕೇಸ್ ಪತ್ತೆ!
ಕರುನಾಡಿಗೆ ಇಂದು ಕೊರೊನಾ ಕಂಟಕ ಶುರುವಾಗಿದ್ದು ರಾಜ್ಯದಲ್ಲಿಂದು ಹೊಸದಾಗಿ 116 ಕೊರೊನಾ ಕೇಸ್ ದಾಖಲಾಗಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1578 ಕ್ಕೇರಿಕೆಯಾಗಿದೆ.
ಹೌದು…. ದಿನ ಕಳೆದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಿನ್ನೆ ಬೆಳಗಿನ ವರದಿಯಲ್ಲಿ ಹೊಸದಾಗಿ 63 ಸೋಂಕಿತರು ಸಂಜೆ ವೇಳೆಗೆ 4 ಜನ ಸೋಂಕಿತರು ದಾಖಲಾಗಿದ್ದರು. ಆದರೆ ನಿನ್ನೆ ಸಂಝೆಯಿಂದ ಇಂದು ಮದ್ಯಾಹ್ನದ ವರದಿಯಲ್ಲಿ 116 ಜನ ಸೋಂಕಿತರು ದಾಖಲಾಗಿದ್ದಾರೆ. ಸಂಜೆ ವೇಳೆ ಈ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ.
ಇಂದು ಕೊರೊನಾದಿಂದ ಗುಣಮುಖರಾಗಿ 14 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 1578 ಸೋಂಕಿರ ಪೈಕಿ 612 ಜನ ಗುಣಮುಖರಾಗಿದ್ದು, 966 ಮಂದಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಗುರುವಾರ ಬೆಂಗಳೂರು ನಗರದಲ್ಲಿ 7, ಹಾಸನದಲ್ಲಿ 19, ಮಂಡ್ಯದಲ್ಲಿ 14, ದಕ್ಷಿಣ ಕನ್ನಡದಲ್ಲಿ 5, ಚಿಕ್ಕಬಳ್ಳಾಪುರದಲ್ಲಿ 2, ದಾವಣಗೆರೆಯಲ್ಲಿ 3, ಬೆಳಗಾವಿಯಲ್ಲಿ 6, ವಿಜಯಪುರದಲ್ಲಿ 1, ಬೆಳಗಾವಿಯಲ್ಲಿ 2, ಶಿವಮೊಗ್ಗದಲ್ಲಿ 6, ಧಾರವಾಡದಲ್ಲಿ 5, ಮೈಸೂರಿನಲ್ಲಿ 1, ಉತ್ತರ ಕನ್ನಡದಲ್ಲಿ 9, ಉಡುಪಿಯಲ್ಲಿ 27, ಬಳ್ಳಾರಿಯಲ್ಲಿ 7, ತುಮಕೂರಿನಲ್ಲಿ 1, ಗದಗ 2 ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಕೋವಿಡ್19: ಮಧ್ಯಾಹ್ನದ ವರದಿ
ಒಟ್ಟು ಪ್ರಕರಣಗಳು: 1578
ಮೃತಪಟ್ಟವರು: 41
ಗುಣಮುಖರಾದವರು: 570
ಹೊಸ ಪ್ರಕರಣಗಳು: 1161/2 pic.twitter.com/kriUi7ZwCM
— CM of Karnataka (@CMofKarnataka) May 21, 2020
ಇಂದು ಪತ್ತೆಯಾದ ಬಹುತೇಕ ಸೋಂಕಿತರು ಮುಂಬೈ ಸೇರಿದಂತೆ ಹಲವಾರು ರಾಜ್ಯಗಳಿಂದ ಬಂದವರಾಗಿದ್ದಾರೆ. ದಕ್ಷಿಣ ಕನ್ನಡಕ್ಕೆ ದುಬೈಯಿಂದ ಆಗಮಿಸಿದವರಿಗೆ ಸೋಂಕು ತಗಲಿದೆ. ಉಳಿದಂತೆ ರಾಯಘಡ, ತಮಿಳುನಾಡು, ತೆಲಂಗಾಣ, ರಾಯಘಡ, ಥಾಣೆ, ಜಾರ್ಖಂಡ್, ಅಜ್ಮೀರ್ ನಿಂದ ಆಗಮಿಸಿದ್ದವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಇದರಿಂದ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ನಿಂದ ಬರುವ ಎಲ್ಲಾ ಸಾರಿಗೆ ಬಂದ್ ಮಾಡಲಾಗಿದ್ದು, ಯಾವ ಪ್ರಯಾಣಿಕರು ರಾಜ್ಯಗಳಿಗೆ ಬರುವಂತಿಲ್ಲ ಎಂದು ರಾಜ್ಯ ಸರ್ಕಾರ ಸೂಚಿಸಿದೆ.

