Fact Check : ರಾಜಸ್ಥಾನದನಲ್ಲಿ ನರ್ಸ್‌ಗಳ ರಾಜೀನಾಮೆಗೆ ಜಮಾತಿಗಳು ಕಾರಣವಾ..?

ಏಪ್ರಿಲ್ 28ರಂದು, ಟ್ವಿಟ್ಟರ್ ಬಳಕೆದಾರ ರಿಷಿ ರಜಪೂತ್‍ ಹಿಂದಿ ಸುದ್ದಿ ಚಾನೆಲ್ ನ್ಯೂಸ್ ನೇಷನ್‍ನ ಸ್ಕ್ರೀನ್ ಗ್ರಾಬ್‍ನ್ನು ಪೋಸ್ಟ್ ಮಾಡಿದ್ದರು. ರಾಜಸ್ಥಾನದ ಝಾಲಾವರದಲ್ಲಿ 100ಕ್ಕೂ ಹೆಚ್ಚು ದಾದಿಯರು ರಾಜೀನಾಮೆ ನೀಡಿದ್ದಾರೆ. ಕಾರಣ, ತಬ್ಲೀಘಿ ಜಮಾತ್ ಸದಸ್ಯರು ಅವರ ಮೇಲೆ ಉಗುಳುತ್ತಿದ್ದಾರೆಂದು ಹೇಳಲಾಗಿದೆ. ಸ್ಕ್ರೀನ್‍ ಗ್ರಾಬ್‍ನೊಂದಿಗೆ ಪೋಸ್ಟ್ ಮಾಡಿದ ಸಂದೇಶವು ಬಿರಿಯಾನಿಯ ಬೇಡಿಕೆ ಈಡೇರದಿದ್ದಾಗ ಆಸ್ಪತ್ರೆಯಲ್ಲಿ ವಾರ್ಡ್ ಹುಡುಗರನ್ನು ಜಮಾತಿಗಳು ನಿಂದಿಸಿದ್ದಾರೆ ಎಂದು ಹೇಳಿದೆ. ಈ ಟ್ವೀಟ್‍ ಇದುವರೆಗೆ 1,200 ಬಾರಿ ಮರು ಟ್ವೀಟ್ ಅಗಿದೆ.

ಇದೇ ಹೇಳಿಕೆಯೊಂದಿಗೆ ಮತ್ತೊಂದು ಟ್ವೀಟ್‍ಅನ್ನುಯೋಗಿದೇವನಾಥ್‍ ಅವರು ಪೋಸ್ಟ್ ಮಾಡಿದ್ದಾರೆ ಮತ್ತು ಅದು 500ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ.

ಫ್ಯಾಕ್ಟ್-ಚೆಕ್

ಗೂಗಲ್‍ನಲ್ಲಿ ಕೀವರ್ಡ್ ಹುಡುಕಾಟದೊಂದಿಗೆ, ಆಲ್ಟ್ ನ್ಯೂಸ್ 2020ರ ಏಪ್ರಿಲ್ 27ರಂದು ನ್ಯೂಸ್ ನೇಷನ್‍ನ ವೆಬ್‍ಸೈಟ್‍ನಲ್ಲಿ ಪ್ರಕಟವಾದ ವರದಿಯನ್ನುಕಂಡುಹಿಡಿದಿದೆ. ಕಡಿಮೆ ವೇತನದಿಂದಾಗಿ ಝಾಲಾವರ್‍ ಆಸ್ಪತ್ರೆಯಲ್ಲಿ 100ಕ್ಕೂ ಹೆಚ್ಚು ಜನ ನರ್ಸಿಂಗ್ ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ ಎಂದು ವರದಿ ಹೇಳುತ್ತದೆ. ವರದಿಯ ಪ್ರಕಾರ ಸಿಬ್ಬಂದಿಗೆ ಪಿಪಿಇ ಕಿಟ್‍ಗಳನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ. ವರದಿಯಲ್ಲಿ ‘ಜಮಾತಿ’ಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಗಮನಿಸಬಹುದು.

ಝಾಲಾವರ್‍ ಆಸ್ಪತ್ರೆಯಲ್ಲಿ 100ಕ್ಕೂ ಹೆಚ್ಚು ನರ್ಸಿಂಗ್ ಸಿಬ್ಬಂದಿಗಳ ಸಾಮೂಹಿಕ ರಾಜೀನಾಮೆ ಬಗ್ಗೆ ಸ್ಥಳೀಯ ಸುದ್ದಿ ಸಂಸ್ಥೆ ಫಸ್ಟ್ ಇಂಡಿಯಾ ನ್ಯೂಸ್‍ ರಾಜಸ್ಥಾನ ವರದಿ ಮಾಡಿದೆ. ಸಹೋದ್ಯೋಗಿಗಳನ್ನು ಕರೋನವೈರಸ್‍ಗೆ ಪರೀಕ್ಷಿಸಿದರೆ ಮತ್ತುಅವರಿಗೆ ಮುಖ್ಯವಾಗಿ ಪಿಪಿಇ ಕಿಟ್‍ಗಳನ್ನು ಒದಗಿಸಿದರೆ ಕೆಲಸ ಮತ್ತೆಆರಂಭಿಸುವುದಾಗಿ ಸಿಬ್ಬಂದಿ ಭರವಸೆ ನೀಡಿದರು. ದಿ ಲಲ್ಲನ್‍ಟಾಪ್‍ ಜೊತೆ ಮಾತನಾಡಿದ ಝಾಲಾವರ್ ವೈದ್ಯಕೀಯ ಕಾಲೇಜಿನ ಡೀನ್ ದೀಪಕ್ ಗುಪ್ತಾ ಅವರು ‘ಜಮಾತಿ’ಗಳ ಕೆಟ್ಟ ನಡವಳಿಕೆಯಿಂದಾಗಿ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸಾಮಾಜಿಕ ಮಾಧ್ಯಮಗಳ ಹೇಳಿಕೆಗ ಅಸಂಬದ್ಧವೆಂದು ತಳ್ಳಿಹಾಕಿದ್ದಾರೆ. ತಬ್ಲಿಘಿ ಜಮಾತ್‍ಗೆ ಸಂಬಂಧಿಸಿದ ಯಾವುದೇ ಪ್ರಕರಣ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ ಎಂದು ಅವರು ಹೇಳಿದರು.

ರಾಜಸ್ಥಾನದ ಝಾಲಾವರ್‍ನಲ್ಲಿನ ವೈದ್ಯಕೀಯ ಸೌಲಭ್ಯವೊಂದರ ಸಿಬ್ಬಂದಿ ಸಾಮೂಹಿಕ ರಾಜೀನಾಮೆ ಕುರಿತು ನ್ಯೂಸ್‍ಚಾನೆಲ್‍ನ ವರದಿಯ ಸ್ಕ್ರೀನ್‍ಗ್ರಾಬ್‍ ಅನ್ನು ತಬ್ಲೀಘಿ ಜಮಾತ್ ಸದಸ್ಯರ ದುಷ್ಕೃತ್ಯದಿಂದ ಬೇಸತ್ತು ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

(ಕೃಪೆ): ಅಲ್ಟ್ ನ್ಯೂಸ್

(ಕನ್ನಡಕ್ಕೆ): ದಿವ್ಯ ಶರ್ಮ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights