ಡಿಕೆಶಿ ಆಸ್ತಿ ಮೌಲ್ಯ 5 ವರ್ಷದಲ್ಲಿ 128 ಕೋಟಿ ಹೆಚ್ಚಳ; ಸಮರ್ಪಕ ದಾಖಲೆಗಳಿಲ್ಲ: ಸಿಬಿಐ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಆಸ್ತಿಯ ಮೌಲ್ಯ ಐದು ವರ್ಷಗಳಲ್ಲಿ 128.60 ಕೋಟಿ ರೂ.ಗೆ ಹೆಚ್ಚಳವಾಗಿದೆ. ಅಲ್ಲದೆ, ಖರ್ಚು ವೆಚ್ಚಗಳನ್ನು ಕಳೆದರೂ ಶೇ.44ರಷ್ಟು ಹೆಚ್ಚಿನ ಆಸ್ತಿಯನ್ನು ಡಿಕೆಶಿ ಹೊಂದಿದ್ದಾರೆ ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.

ಆಸ್ತಿ ಹೆಚ್ಚಳದ ಬಗ್ಗೆ ಸಮರ್ಪಕ ದಾಖಲೆಗಳನ್ನು ಒದಗಿಸಲು ಡಿಕೆ ಶಿವಕುಮಾರ್ ವಿಫಲರಾಗಿದ್ದು, ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದಾಗಿ ಸಿಬಿಐ ಹೇಳಿದೆ.

60ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ನಿವಾಸ, ರಾಮನಗರದ ದೊಡ್ಡ ಆಲದಹಳ್ಳಿಯಲ್ಲಿರುವ ಅವರ ಮನೆ, ​ದೆಹಲಿ ಮತ್ತು ಮುಂಬೈಗಳಲ್ಲಿರುವ ಅವರ ನಿವಾಸಗಳು ಸೇರಿದಂತೆ 16ಕ್ಕೂ ಹೆಚ್ಚು ಕಡೆಗಳಲ್ಲಿ ಏಕಾಏಕಿ ದಾಳಿ ನಡೆಸಿದ್ದಾರೆ.

ದಾಳಿ ವೇಳೆ 57 ಲಕ್ಷ ರೂಪಾಯಿ ನಗದು, ಹಾರ್ಡ್ ಡಿಸ್ಕ್ ಮತ್ತು ಆಸ್ತಿ ಪತ್ರಗಳು ಸೇರಿ ಕೆಲ ದಾಖಲೆಗಳನ್ನ ಸಿಬಿಐ ಜಪ್ತಿ ಮಾಡಲಾಗಿದೆ.

ಡಿ ಕೆ ಶಿವಕುಮಾರ್​ ಅವರ ಮೇಲೆ ಸುಮಾರು 74.93 ಕೋಟಿ ಅಕ್ರಮ ಆದಾಯ ಗಳಿಕೆ ಆರೋಪವಿದ್ದು, ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಬಿಐಗೆ ಆದೇಶಿಸಿತ್ತು. ಈ ಹಿನ್ನಲೆ  U/s 6 Delhi special police establishment ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮಾರ್ಚ್ 2020 ರಲ್ಲಿ ಪ್ರಾಥಮಿಕ ತನಿಖೆಯನ್ನ ಆರಂಭಿಸಲಾಗಿತ್ತು ಎಂದು ಸಿಬಿಐ ಉಲ್ಲೇಖಿಸಿದೆ.

ಇದನ್ನೂ ಓದಿ: ಲಾಕ್‌ಡೌನ್‌ ಎಫೆಕ್ಟ್‌: ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಮಾಡುತ್ತಿದ್ದಾರೆ ರೈತರು!

2017ರ ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ, ವಿಚಾರಣೆ ಹಾಗೂ ತನಿಖೆ  ಕೈಗೊಂಡಿರುವುದಾಗಿ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿತ್ತು.

ಆದಾಯ ತೆರಿಗೆ ಕಾಯ್ದೆ 1961ರ ಕಲಂ 276ಸಿ(1), 277 ಮತ್ತು 278, ಭಾರತೀಯ ದಂಡ ಸಂಹಿತೆ ಕಲಂ 193, 199 ಮತ್ತು 120(ಬಿ)ಗಳ ಉಲ್ಲಂಘನೆ ಜೊತೆಗೆ ಭ್ರಷ್ಟಾಚಾರ ಕಾಯಿದೆ 1988 ಉಲ್ಲಂಘಿಸಿರುವುದನ್ನು ತನಿಖೆಯಲ್ಲಿ ಪತ್ತೆ ಹಚ್ಚಿತ್ತು. ಅಲ್ಲದೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತನಿಖೆಯ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ರವಾನಿಸಿತ್ತು.

ಸಿಬಿಐ ದಾಳಿಗೆ ತಾನು ಹೆದರುವ ಮಗ ಇಲ್ಲ. ನಾನು ನಂಬಿರುವ ದೇವರು ಹಾಗೂ ಜನರ ಆಶೀರ್ವಾದ ಇರುವವರೆಗೂ ಯಾರೂ ನನ್ನನ್ನ ಏನನ್ನ ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.


ಇದನ್ನೂ ಓದಿ: ಹತ್ರಾಸ್‌ ಘಟನೆಗೆ ನೀವು ದನಿಯೆತ್ತದಿದ್ದರೆ, ದೇಶಕ್ಕೆ ಬಹುದೊಡ್ಡ ಅಪಕಾರ ಮಾಡಿದಂತೆ: ನಟಿ ರಮ್ಯಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights