ಹತ್ರಾಸ್: ಶಾಂತಿ ಸುವ್ಯವಸ್ಥೆ ಕದಡುವ ಅನುಮಾನದ ಮೇಲೆ ಪಿಎಫ್‌ಐ ಲಿಂಕ್‌ ಹೊಂದಿರುವ ನಾಲ್ವರ ಬಂಧನ!

19 ವರ್ಷದ ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂಬ ಆಕ್ರೋಶದ ಮಧ್ಯೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಥವಾ ಪಿಎಫ್‌ಐಗೆ ಸಂಬಂಧ ಹೊಂದಿದ್ದ ನಾಲ್ವರು ಪುರುಷರನ್ನು ನಿನ್ನೆ ರಾತ್ರಿ ಮಥುರಾದಿಂದ ಬಂಧಿಸಲಾಗಿದೆ. ಪುರುಷರು ರಾಷ್ಟ್ರ ರಾಜಧಾನಿಯಿಂದ ಕಾರಿನಲ್ಲಿ ಹತ್ರಾಸ್‌ಗೆ ತೆರಳುತ್ತಿದ್ದಾಗ ಅವರನ್ನು ತಡೆದು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತೀಕ್-ಉರ್ ರೆಹಮಾನ್, ಸಿದ್ದೀಕ್, ಮಸೂದ್ ಅಹ್ಮದ್ ಮತ್ತು ಆಲಂ ಎಂದು ಗುರುತಿಸಲ್ಪಟ್ಟ ನಾಲ್ವರನ್ನು “ದೆಹಲಿಯಿಂದ ಹತ್ರಾಸ್‌ಗೆ ತೆರಳುತ್ತಿರುವ ಕೆಲವು ಅನುಮಾನಾಸ್ಪದ ಜನರು” ಎಂಬ ಕಾರಣಕ್ಕೆ ಸುಂಕ ವಸೂಲಾತಿ ಕೇಂದ್ರದಲ್ಲಿ ನಿಲ್ಲಿಸಲಾಯಿತು. ಪೊಲೀಸರು ಅವರ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ಹತ್ರಾಸ್ ಶಾಂತಿಯ ಮೇಲೆ ಪರಿಣಾಮ ಬೀರಬಹುದು ಎನ್ನುವ ಅನುಮಾನದ ಮೇಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇವರನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆ ವೇಳೆ ಪುರುಷರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಸಹವರ್ತಿ ಸಂಸ್ಥೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಯೊಂದಿಗೆ ತಾವು ಸಂಪರ್ಕ ಹೊಂದಿರುವುದನ್ನು ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights