“ಕೋವಿಡ್ ಬಗ್ಗೆ ಭಯಪಡಬೇಡಿ” – ಮಾಸ್ಕ್ ತೆಗೆದು ಶ್ವೇತಭವನಕ್ಕೆ ಬಂದ ಟ್ರಂಪ್!
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೋವಿಡ್ -19 ಗೆ ನಾಲ್ಕು ದಿನಗಳ ತುರ್ತು ಚಿಕಿತ್ಸೆಯ ನಂತರ ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲಿಂದ ನೇರವಾಗಿ ಶ್ವೇತಭವನಕ್ಕೆ ತೆರಳಿದ ಟ್ರಂಪ್ ಮಾಸ್ಕ್ ತೆಗೆದು ಪ್ರಚಾರಕ್ಕೆ ಶೀಘ್ರದಲ್ಲೇ ಮರಳುವ ಶಪಥ ಮಾಡಿದ್ದಾರೆ.
ಟ್ರಂಪ್ ಈ ಮೊಂಡುತನದಿಂದಲೇ ಈಗಾಗಲೇ ಅಮೇರಿಕಾ ಸುಮಾರು 2,10,000 ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಆದರೂ ಅಮೆರಿಕನ್ನರಿಗೆ ಎಚ್ಚರಿಯಿಂದಿರಲು ಸೂಚಿಸುವ ಬದಲಿಗೆ ಟ್ರಂಪ್ ಕೊರೊನಾಕ್ಕೆ ಭಯಪಡಬೇಕಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ನವೆಂಬರ್ 3 ರ ಚುನಾವಣಾಗೆ ಪ್ರಚಾರ ಕೈಗೊಳ್ಳಬೇಕಾದ ಟ್ರಂಪ್ ಕೊರೊನಾದಿಂದ ಇಷ್ಟು ಬೇಗ ಚೇತರಿಸಿಕೊಂಡರಾ? ಅಥವಾ ಪ್ರಚಾರಕ್ಕಾಗಿ ಬೇಗ ಗುಣಮುಖರಾಗಿದ್ದಾರೆನ್ನುವ ನಾಟಕವಾಡುತ್ತಿದ್ದಾರಾ? ಅನ್ನೋ ಪ್ರಶ್ನೆ ಮೂಡಿದೆ. ಕೊರೊನಾ ಆರಂಭದ ದಿನಗಳಿಂದಲೂ ಟ್ರಂಪ್ ಮಾಸ್ಕ್ ಬಗ್ಗೆ ಜನರಲ್ಲಿ ನಿರ್ಲಕ್ಷ್ಯದ ಭಾವನೆ ಮೂಡಿಸಿದ್ದಾರೆ. ಈಗಲೂ ಅದನ್ನೇ ಪ್ರದರ್ಶಿಸುತ್ತಿರುವಂತೆ ಕಾಣುತ್ತಿದೆ. ಮಾತ್ರವಲ್ಲೇ ಚುನಾವಣೆಗೂ ಮುನ್ನ ಕೊರೊನಾ ಪರೀಕ್ಷೆ ಮುಖ್ಯವಾಗಿದೆ. ವರದಿ ನೀಡಿದ ಬಳಿಕವಷ್ಟೇ ಪ್ರಚಾರಕ್ಕೂ ಅನುಮತಿಸಲಾಗುತ್ತದೆ. ಆದರೆ ಅವರು ಶ್ವೇತಭವನಕ್ಕೆ ಮರಳಿರುವುದು ಅವರು ದೈಹಿಕವಾಗಿ ಸದೃಢರಾಗಿದ್ದಾರೆಂದು ತೋರಿಸುತ್ತದೆ. ಆದರೆ ಸರಣಿಯ ಗಮನಾರ್ಹ ಟ್ವೀಟ್‌ಗಳು ಟ್ರಂಪ್‌ರ ರಾಜಕೀಯ ದಾಳಿಯ ಕೋನವನ್ನು ಪ್ರದರ್ಶಿಸುತ್ತವೆ.
“ಕೋವಿಡ್ಗೆ ಹೆದರಬೇಡಿ” ಎಂದು ಅವರು ಹೇಳಿದರೂ ಅಮೇರಿಕಾದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಸಾವಿನ ಪ್ರಕರಣಗಳು ಹೆಚ್ಚಿವೆ. ಹೀಗಾಗಿ ಜನರಿಗೆ ಕನಿಷ್ಟ ಜಾಗೃತೆಯನ್ನು ಮೂಡಿಸಬೇಕಾದ ಟ್ರಂಪ್ ಕೊರೊನಾ ವಿಚಾರದಲ್ಲಿ ಅಮೇರಿಕನ್ನರನ್ನ ದಾರಿ ತಪ್ಪಿಸುತ್ತಲೇ ಇದ್ದಾರೆ.