ಭಾರತದಲ್ಲಿ 61,871 ಹೊಸ ಕೊರೊನಾ ಕೇಸ್ : ಮಹಾಮಾರಿಯಿಂದ 1033 ಜನ ಸಾವು..!

ಭಾರತದಲ್ಲಿ ಕೊರೊನಾ ರೌದ್ರನರ್ತನ ಜನರ ನೆಮ್ಮದಿಯನ್ನೇ ಹಾಳುಮಾಡಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೆಗೆ ತೆಗೆದುಕೊಂಡರೆ ಪ್ರಕರಣಗಳು ಕಡಿಮೆಯಾಗುವ ಲಕ್ಷಣಗಳೇ ಕಾಣಸಿಗುತ್ತಿಲ್ಲ. ಪ್ರತಿನಿತ್ಯ 60 ಸಾವಿರಕ್ಕೂ ಹೆಚ್ಚು ಜನ ಸೋಂಕಿಗೆ ಒಳಗಾಗುತ್ತಿದ್ದಾರೆ.

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 61,871 ಹೊಸ ಕೊರೊನಾ ಕೇಸ್ ದಾಖಲಾಗಿದ್ದು 1033 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ದೇಶದ ಒಟ್ಟು 74,94,552 ಪ್ರಕರಣಗಳ ಪೈಕಿ,  7,83,311 ಸಕ್ರಿಯ ಪ್ರಕರಣಗಳಿದ್ದು , 65,97,210 ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು 1,14,031 ಸಾವುಗಳು ಸಂಭವಿಸಿವೆ.

ನವರಾತ್ರಿ ಮತ್ತು ದಾಸರ ಹಬ್ಬದ ಎರಡನೇ ದಿನದಂದು ಪ್ರಾರ್ಥನೆ ಸಲ್ಲಿಸಲು ಭಕ್ತರು, ಹೆಚ್ಚಾಗಿ ಮುಖವಾಡಗಳಿಲ್ಲದೆ ಭಾರತದಾದ್ಯಂತ ದೇವಾಲಯಗಳಿಗೆ ಸೇರುತ್ತಿದ್ದಾರೆ. ಇದು ಸೋಂಕು ಹರಡಲು ಇನ್ನಷ್ಟು ಹಾದಿ ಮಾಡಿಕೊಡುವಂತೆ ಕಾಣುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights