ಕಾಬೂಲ್ ಆತ್ಮಾಹುತಿ ದಾಳಿ : ಐಎಸ್​-ಕೆ ಮೇಲೆ ಅಮೇರಿಕಾ ಪ್ರತೀಕಾರ!

ಕಾಬೂಲ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿಯ ಬೆನ್ನಲ್ಲೆ ಐಎಸ್​-ಕೆ ಮೇಲೆ ಅಮೇರಿಕಾ ಪ್ರತೀಕಾರ ತೀರಿಸಿಕೊಂಡಿದೆ.

ಆಫ್ಘಾನಿಸ್ತಾನದ ನಂಗಹಾರ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ನೆಲೆಯ ಮೇಲೆ ಅಮೇರಿಕಾ ಸೇನೆ ಡ್ರೋನ್ ದಾಳಿ ಮಾಡಿದೆ. ಮೇಲ್ನೋಟಕ್ಕೆ ದಾಳಿಯಲ್ಲಿ ಓರ್ವ ಉಗ್ರ ಹತರಾಗಿದ್ದಾರೆಂದು ಯುಎಸ್ ಸೇನೆ ಹೇಳಿಕೊಂಡಿದೆ. ಜೊತೆಗೆ ಡ್ರೋನ್ ದಾಳಿಯಿಂದ ಆಫ್ಘಾನ್ ರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಯುಎಸ್ ಸೇನೆ ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅನುಮತಿಯ ಮೇರೆಗೆ ಖೋರಸಾನ್ ಘಟಕದ ಇಸ್ಲಾಮಿಕ್ ಸ್ಟೇಟ್ ಸಂಘಟನೆ ನೆಲೆಯ ಮೇಲೆ ಈ ಡ್ರೋನ್ ದಾಳಿ ನಡೆದಿದೆ.

ಮೊನ್ನೆಯಷ್ಟೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟದಿಂದಾಗಿ ನೂರಾರು ಜನ ಪ್ರಾಣಕಳೆದುಕೊಂಡಿದ್ದರು. ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಮಾತ್ರವಲ್ಲದೇ ಯುಎಸ್ ನ ಹತ್ತಕ್ಕೂ ಹೆಚ್ಚು ಸೈನಿಕರು ಅಸುನೀಗಿದ್ರು. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಖೊರಸಾನ್ ಸಂಘಟನೆ ಹೊತ್ತಿತ್ತು. ಈ ಸ್ಪೋಟದ ರುವಾರಿಯನ್ನು ಯುಎಸ್ ಸೈನ್ಯ ಿಂದು ಡ್ರೋನ್ ದಾಳಿಯ ಮೂಲಕ ಕೊಂದಿದೆ ಎನ್ನಲಾಗುತ್ತಿದೆ.

ಮೂರು ದಿನ ಮೊದಲೇ ಅಮೆರಿಕ ಕಾಬೂಲ್ ಏರ್ ಪೋರ್ಟ್ ಬ್ಲಾಸ್ಟ್ ಘಟನೆ ಆಗುವ ಬಗ್ಗೆ ಸುಳಿವು ನೀಡಿತ್ತು. ಆದರೂ ಬಾಂಬ್ ಸ್ಫೋಟವನ್ನು ತಪ್ಪಿಸಲು ಆಗಲಿಲ್ಲ. ಕುತೂಹಲವೆಂದರೆ, ಕಾಬೂಲ್​ನಲ್ಲಿ ಉಗ್ರರಿಂದ ಮತ್ತೊಂದು ಬಾಂಬ್ ಸ್ಫೋಟ ದಾಳಿ ಆಗುವ ಸಾಧ್ಯತೆ ಇದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.

ಇಸ್ಲಾಮಿಕ್ ಸ್ಟೇಟ್ ಸಂಘಟನೆ ಅಫ್ಘಾನಿಸ್ತಾನದಲ್ಲಿ ದಿನೇ ದಿನೇ ಶಕ್ತಿ ವೃದ್ಧಿಸಿಕೊಳ್ಳುತ್ತಿರುವುದು ತಾಲಿಬಾನ್​ ಗೆ ದೊಡ್ಡ ತಲೆನೋವಾಗಿದೆ. ಬೇರೆ ದೇಶಗಳ ಮೇಲೆ ದಾಳಿ ನಡೆಸಲು ಯಾವುದೇ ಉಗ್ರ ಸಂಘಟನೆಗಳಿಗೆ ಅಫ್ಘನ್ ನೆಲವನ್ನು ಉಪಯೋಗಿಸಿಕೊಳ್ಳಲು ಬಿಡುವುದಿಲ್ಲ ಎಂದು ಅನೇಕ ಬಾರಿ ತಾಲಿಬಾನ್ ಸ್ಪಷ್ಟಪಡಿಸಿದೆ. ಅದು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಉದ್ದೇಶಿಸಿ ನೀಡಿದ ಎಚ್ಚರಿಕೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಸ್ಥಾಪಿಸಿದ ಬೆನ್ನಲ್ಲೇ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೆಚ್ಚು ಚುರುಕು ಕಂಡಿದೆ. ಹೀಗಾಗಿ, ಇಸ್ಲಾಮಿಕ್ ಸ್ಟೇಟ್ ಸಂಘಟನೆಯನ್ನ ಅಫ್ಘಾನಿಸ್ತಾನದಲ್ಲಿ ಹತ್ತಿಕ್ಕುವುದು ಅಮೆರಿಕ ಮತ್ತು ತಾಲಿಬಾನ್ ಎರಡಕ್ಕೂ ಬಹಳ ಮುಖ್ಯ.

ಇದೇ ವೇಳೆ, ಕಾಬೂಲ್ ಏರ್ ಪೋರ್ಟ್ ಬಳಿ ಅಮೆರಿಕದ ಸೈನಿಕರು ಇನ್ನೂ ಇದ್ದಾರೆ. ಅಫ್ಘಾನಿಸ್ತಾದಲ್ಲಿರುವ ತನ್ನ ದೇಶದ ಎಲ್ಲಾ ನಾಗರಿಕರನ್ನ ಹೊರಸಾಗಿಸಲು ಅಮೆರಿಕದ ಸೈನಿಕರು ನೆರವಾಗುತ್ತಿದ್ದಾರೆ. ಈ ತಿಂಗಳಾಂತ್ಯದವರೆಗೆ ಅಮೆರಿಕ ಗಡುವು ಪಡೆದಿದೆ. ಇದೇ ವೇಳೆ, ಕಾಬೂಲ್ ಏರ್ ಪೋರ್ಟ್​ನ ಸಂಪೂರ್ಣ ನಿಯಂತ್ರಣ ಪಡೆಯಲು ತಾಲಿಬಾನ್ ಪ್ರಯತ್ನಿಸುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.