ಅಪರೂಪದ ಘಟನೆ : 7 ಜನರಿಗೆ ಜೀವ ನೀಡಿದ ಎರಡೂವರೆ ವರ್ಷದ ಮಗು..!
ದಾನದಲ್ಲಿ ಅಂಗಾಂಗ ದಾನವನ್ನು ಅತ್ಯಂತ ದೊಡ್ಡ ದಾನವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ವ್ಯಕ್ತಿಯ ಅಂಗಾಂಗ ದಾನ ಅನೇಕ ಜೀವಗಳನ್ನು ಉಳಿಸುತ್ತದೆ. ಗುಜರಾತ್‌ನ ಸೂರತ್‌ನಲ್ಲಿ ಎರಡೂವರೆ ವರ್ಷದ ಮಗು ಜಶ್ ಓಜಾ ನೀಡಿದ ಅಂಗಾಂಗ ದಾನದಿಂದ 7 ಜನರಿಗೆ ಹೊಸ ಜೀವನ ಸಿಕ್ಕಿದೆ.
ಹೌದು… ಗುಜರಾತ್‌ನ ಸೂರತ್‌ನಲ್ಲಿ ಎರಡೂವರೆ ವರ್ಷದ ಮಗು ಎತ್ತರ ಕಟ್ಟಡದ ಮೇಲಿನಿಂದ ಆಕಸ್ಮಿಕವಾಗಿ ಬಿದ್ದು ಆಸ್ಪತ್ರೆಗೆ ಕರೆದೊಯ್ದ ವೇಳಿಗಾಗಲೇ ಪ್ರಾಣ ಬಿಟ್ಟಿದೆ. ಆಮಗುವನ್ನು ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಆತನನ್ನು ಮೆದುಳು ಡೆಡ್ ಆಗಿದೆ ಎಂದು ಘೋಷಿಸಿದರು. ವೈದ್ಯರ ಮಾತು ಕೇಳಿದ ಜಾಶ್ ಪೋಷಕರಿಗೆ ಭೇಟಿಯಾದ ಸೂರತ್‌ನ ಸಾಮಾಜಿಕ ಕಾರ್ಯಕರ್ತ ಸಂಸ್ಥೆಯಾದ ಡೊನೇಟ್ ಲೈಫ್‌ನ ನಿಲೇಶ್ ಮಾಂಡಲ್ವಾಲಾ ಅವರು ಜಾಶ್ ಅವರ ಅಂಗಾಂಗಗಳನ್ನು ದಾನ ಮಾಡಲು ಹೇಳಿದ್ದಾರೆ.
ಜಾಶ್ ಓಜಾ ಅವರ ಕುಟುಂಬ ಮಗುವನ್ನು ಕಳೆದುಕೊಂಡ ದು:ಖದಲ್ಲಿದ್ದರೂ ಒಂದೊಳ್ಳೆ ತೀರ್ಮಾನಕ್ಕೆ ಬಂದು ಮಗುವಿನ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಮಗುವಿನ ಹೃದಯ, ಶ್ವಾಸಕೋಶ, ಮೂತ್ರಪಿಂಡ, ಯಕೃತ್ತು ಮತ್ತು ಕಣ್ಣುಗಳನ್ನು ದಾನ ಮಾಡಲಾಗಿದೆ. ಜಶ್ ದಾನ ಮಾಡಿದ ಅಂಗಗಳಿಂದ ಏಳು ಜನರಿಗೆ ಹೊಸ ಜೀವನ ಸಿಕ್ಕಿದೆ. ಸೂರತ್‌ನಿಂದ ಹಸಿರು ಕಾರಿಡಾರ್ ಮೂಲಕ ಜಾಶ್‌ನ ಹೃದಯ ಮತ್ತು ಶ್ವಾಸಕೋಶವನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ತರಲಾಯಿತು. ಚೆನ್ನೈ ಮತ್ತು ಸೂರತ್ ನಡುವೆ 1,615 ಕಿಲೋಮೀಟರ್ ದೂರವಿದ್ದು 160 ನಿಮಿಷ ಪ್ರಯಾಣದ ಅವಧಿ ತೆಗೆದುಕೊಂಡಿದೆ.
ಇನ್ನೂ ಜಶ್ ಅವರ ಹೃದಯವನ್ನು ರಷ್ಯಾದ 4 ವರ್ಷದ ಮಗುವಿಗೆ ಮತ್ತು ಅವರ ಶ್ವಾಸಕೋಶವನ್ನು ಉಕ್ರೇನ್‌ನಲ್ಲಿ 4 ವರ್ಷದ ಮಗುವಿಗೆ ದಾನ ಮಾಡಲಾಗಿದೆ. ಜಾಶ್ ತನ್ನ ಮೂತ್ರಪಿಂಡ, ಯಕೃತ್ತು ಮತ್ತು ಕಣ್ಣುಗಳನ್ನು ದಾನ ಮಾಡುವುದರೊಂದಿಗೆ ಇಂದು 7 ವ್ಯಕ್ತಿಗಳಲ್ಲಿ ಜೀವಂತವಾಗಿದ್ದಾನೆ. ಅವನು ಇವತ್ತು ಜಗತ್ತಿನಲ್ಲಿಲ್ಲದಿದ್ದರೂ ಹೊಸ ಜೀವನವನ್ನು ಹೊಂದಿದ ಜನರಲ್ಲಿ ಅವನು ಯಾವಾಗಲೂ ಜೀವಂತವಾಗಿರುತ್ತಾನೆ.