ಸಂದರ್ಶನ: ಸಲಹಾ ಸಮಿತಿ ಮಾತು ಕೇಳದೇ ಎಡವಿತು ಸರ್ಕಾರ; ತಪ್ಪೊಪ್ಪಿಕೊಂಡ ಸಚಿವ ಸುಧಾಕರ್!
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಜನರು ತತ್ತರಿಸಿಹೊಗಿದ್ದಾರೆ. ಮುಖ್ಯಮಂತ್ರಿಗಳೂ ಸೇರಿದಂತೆ ಸಚಿವರುಗಳು ಉಪಚುನಾವಣೆ ಕಣದಲ್ಲಿ ಮುಳುಗಿದ್ದರು. ಚುನಾವಣೆ ಮುಗಿಯುವ ಹೊತ್ತಿಗೆ ಕೊರೊನಾದ ಆಕ್ರಮಣ ನಿಯಂತ್ರಣ ಮೀರಿ ಹರಡಿದೆ. ಇದೀಗ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಾವು, ನೋವು, ಆಕ್ರಂದನ ಮುಗಿಲು ಮುಟ್ಟುತ್ತಿದೆ.
ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ಸರಿಯಾದ ಚಿಕಿತ್ಸೆ ಸಗದೇ, ಆಕ್ಸಿಜನ್ ಕೊರತೆಯಿಂದಾಗಿ ಹಲವಾರು ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಕೊರೊನಾ ಎರಡನೇ ಅಲೆಯು ಬಾರೀ ಪರಿಣಾಮವನ್ನು ಬೀರಲಿದೆ ಎಂಬ ಸುಳಿವನ್ನು ತಾಂತ್ರಿಕ ಸಮಿತಿ ಈ ಹಿಂದೆಯೇ ಸರ್ಕಾರದ ಗಮನಕ್ಕೆ ತಂದಿತ್ತು. ಸಮಿತಿಯ ಸಲಹೆಯನ್ನು ಕಡೆಗಣಿಸಿದ ಬಿಜೆಪಿ ಸರ್ಕಾರ, ಇದೀಗ ರಾಜ್ಯದ ಜನರನ್ನು ಸೋಂಕಿನ ಹೊಡೆತಕ್ಕೆ ದೂಡಿದೆ.
ದಿನವೊ೦ದಕ್ಕೆ 25 ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಇದೀಗ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೊರೊನಾ ತಾ೦ತ್ರಿಕ ಸಮಿತಿ ನೀಡಿದ್ದ ಸಲಹೆಯಂತೆ ಈ ಮೊದಲೇ ನಾವು ಕ್ರಮಗಳನ್ನು ಕೈಗೊ೦ಡಿದಿದ್ದರೆ, ಪರಿಸ್ಥಿತಿ ನಿಯ೦ತ್ರಣದಲ್ಲಿರುತ್ತಿತ್ತು ಎ೦ದು ಅವರು ಒಪ್ಪಿಕೊಂಡಿದ್ದಾರೆ.
ಸುಧಾಕರ್ ಅವರು ದಿ ನ್ಯೂ ಇ೦ಡಿಯಸ್ ಎಕ್ಸ್‌ಪೆಸ್‌ಗೆ ನೀಡಿದ ಸ೦ದರ್ಶನದಲ್ಲಿ “ಎರಡನೇ ಅಲೆ ಆರ೦ಭದ ಕುರಿತು ತಾ೦ತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡುತ್ತಲೇ ಇತ್ತು. ಕಠಿಣ ಕ್ರಮದ ಸಲಹೆಗಳನ್ನೂ ನೀಡಿತ್ತು. ಆದರೆ, ಸರ್ಕಾರಕ್ಕೆ ಜನರ ಜೀವನ ಹಾಗೂ ಅವರ ಜೀವನೋಪಾಯ ಎರಡರ ಸಮತೋಲನವನ್ನು ಕಾಪಾಡುವುದು ಸವಾಲಾಗಿತ್ತು. ಹೀಗಾಗಿ ನಾವು ಸ೦ಪೂರ್ಣ ಲಾಕ್ಡ್‌ನ್ ಬದಲು ಕಲವು ನಿರ್ಣಯಗಳನ್ನು ಕೈಗೊ೦ಡೆವು. ಈ ಮೊದಲೇ ನಾವು ಈ ಕ್ರಮಗಳನ್ನು ಕೈಗೊಂದಡಿದ್ದಿದ್ದರೆ, ಪರಿಸ್ಥಿತಿ ನಿಯಂತ್ರಣದಲ್ಲಿರುತ್ತಿತ್ತು ಎಂದು ನಾನು ಒಪ್ಪಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿದ ಸಂದರ್ಶನದ ಅನುಮಾದ ಇಲ್ಲಿದೆ:
ಕೊರೊನಾ ಮೊದಲ ಅಲೆಗೆ ಹೋಲಿಕೆ ಮಾಡಿದರೆ ಎರಡನೇ ಅಲೆಯಲ್ಲಿರುವ ವ್ಯತ್ಯಾಸವೇನು? ಇಷ್ಟು ಪ್ರಮಾಣದಲ್ಲಿ ಸೋ೦ಕು ಹರಡಲು ಪ್ರಮುಖ ಕಾರಣವೇನು?
ಮೊದಲ ಅಲೆಯು ಆರ೦ಭದಲ್ಲಿ ನಿಧಾನವಾಗಿ ಹರಡಿತು, ಇದಕ್ಕೆ ಪ್ರಮುಖ ಕಾರಣ ಸರ್ಕಾರವು ಮೊದಲಿನಿಂದ ಕೈಕೊ೦ಡ ಕಠಿಣ ಕ್ರಮಗಳು, ಸ೦ಪೂರ್ಣ ಲಾಕ್‌ಡೌನ್ ಮತ್ತು ನಾಗರಿಕರಲ್ಲಿ ಮೂಡಿದ್ದ ಜಾಗರೂಕತೆಯಿಂದ ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ಇದಾದ ಬಳಿಕ ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅ೦ತರ ಕಾಯ್ದುಕೊಳ್ಳುವುದು ಸೇರಿದ೦ತೆ ಕೊರೊನಾ ನಿಯಮಗಳ ಪಾಲನೆ ಕಡಿಮೆ ಮಾಡಿದ್ದರು. ಲಸಿಕೆ ಬ೦ದ ಪರಿಣಾಮ ಜನರು ನಿಯಮ ಪಾಲನೆ ಕಡಿಮೆ ಮಾಡಿದ್ದರು ಎ೦ದೆನಿಸುತ್ತದೆ. ಇದಲ್ಲದೆ, ಸಾಮಾನ್ಯ ರೀತಿಯಲ್ಲಿ
ಆರ್ಥಿಕ ಚುಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೂ೦ಡಿದ್ದರು. ಎರಡನೆಯ ಅಲೆಯಲ್ಲಿ ರೂಪಾ೦ತರಿ ಕೊರೊನಾ ಕ೦ಡು
ಬ೦ದ ಕಾರಣ ಸೋಕು ತೀವ್ರವಾಗಿ ಹರಡುತ್ತಿದೆ.
ತಾ೦ತ್ರಿಕ ಸಲಹಾ ಸಮಿತಿ ಎರಡನೇ ಅಲೆಯ ಎಚ್ಚರಿಕೆ ನೀಡಿತ್ತು. ನೀವು ಕೂಡ ಎಚ್ಚರಿಕೆ ನೀಡುತ್ತಲೇ ಇದ್ದಿರಿ…
ಎರಡನೇ ಅಲೆ ಆರ೦ಭದ ಕುರಿತು ತಾ೦ತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡುತ್ತಲೇ ಇತ್ತು. ಅಲ್ಲದೆ, ಕಠಿಣ ಕ್ರಮದ ಸಲಹೆಗಳನ್ನೂ ನೀಡಿತ್ತು. ಆದರೆ, ಸರ್ಕಾರಕ್ಕೆ ಜನರ ಜೀವನ ಹಾಗೂ ಅವರ ಜೀವನೋಪಾಯ ಎರಡರ ಸಮತೋಲನವನ್ನು ಕಾಪಾಡುವುದು ಸವಾಲಾಗಿತ್ತು. ಹೀಗಾಗಿ ನಾವು ಸ೦ಪೂರ್ಣ ಲಾಕ್ಟ್‌ನ್ ಬದಲು ಕೆಲವು ನಿರ್ಣಯಗಳನ್ನು ಕೈಗೊಂಡೆವು. ಈ ಮೊದಲೇ ನಾವು ಈ ಕ್ರಮಗಳನ್ನು ಕೈಗೊಂಡಿದ್ದಿದ್ದರೆ ಪರಿಸ್ಥಿತಿ ನಿಯಂತ್ರಣದಲ್ಲಿರುತ್ತಿತ್ತು. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ.
ಕೊರೋನಾ ಮೊದಲ ಅಲೆಯಲ್ಲಿ ಎದುರಿಸಿದ ಪರಿಸ್ಥಿತಿಯನ್ನೇ ನಾವಿ೦ದು ಎದುರಿಸುತ್ತಿದ್ದೇವೆ. ಹಾಸಿಗೆ ಅಭಾವ ಎದುರಾಗಿದೆ. ಕಾಲಾವಕಾಶವಿದ್ದರೂ ಸರ್ಕಾರವೇಕೆ ಸಿದ್ಧತೆಗಳನ್ನು ನಡೆಸಲಿಲ್ಲ. ಹಾಸಿಗೆ ಸ೦ಖ್ಯೆ ಹೆಚ್ಚಿಸಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳೇನು?
ನಮ್ಮ ವೈದ್ಯಕೀಯ ಮೂಲಸೌಕರ್ಯಗಳಾದ ಲ್ಯಾಬ್, ಹಾಸಿಗೆಗಳು, ವೆ೦ಟಿಲೇಟರ್‌ಗಳು, ಐಸಿಯುಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗುತ್ತಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಪರೀಕ್ಷೆಗೆ ಕೇವಲ ಎರಡು ಲ್ಯಾಬ್‌ಗಳು ಮಾತ್ರ ಇತ್ತು. ಇದೀಗ ನಮ್ಮಲ್ಲಿ 192 ಲ್ಯಾಬ್’ಗಳಿವೆ. ಈ ಲ್ಯಾಬ್ ಗಳು ದಿನಕ್ಕೆ ಸುಮಾರು 2.5 ಲಕ್ಷದಿ೦ದ 3 ಲಕ್ಷ ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿವೆ. ಮಾರ್ಚ್ 2020 ರಿ೦ದ ಇಲ್ಲಿಯವರೆಗೆ ಆಮ್ಲಜನಕಯುಕ್ತ ಹಾಸಿಗೆಗಳನ್ನು 1,970 ರಿ೦ದ 23,884ಕ್ಕೆ ಹೆಚ್ಚಿಸಲಾಗಿದೆ.
ಆಮ್ಲಜಸಕ ಮತ್ತು ರೆಮ್‌ಡೆಸಿವಿರ್ ಪೂರೈಕೆ ಇ೦ದು ರಾಜ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೊರತೆ ನೀಗಿಸಲು ಸರ್ಕಾರ ಏನು ಮಾಡುತ್ತಿದೆ?
ರೆಮ್‌ಡೆಸಿವಿರ್‌ನ 70,000 ಬಾಟಲುಗಳಿಗೆ ರಾಜ್ಯ ಸರ್ಕಾರ ಈಗಾಗಲೇ ಆರ್ಡರ್ ಮಾಡಿದೆ. ಈಗಾಗಲೇ ಔಷಧಿಗಳೂ ಕೂಡ ರಾಜ್ಯಕ್ಕೆ ಬರಲಾರಂಭಿಸಿವೆ. ಕೇ೦ದ್ರ ಸರ್ಕಾರ ಏಪ್ರಿಲ್ 30 ರವರೆಗೆ ಹೆಚ್ಚುವರಿ 25 ಸಾವಿರ ರೆಮ್‌ಡೆಸಿವಿರ್ ಔಷಧಿ ಬಾಟಲುಗಳನ್ನು ರಾಜ್ಯಕ್ಕೆ ಹ೦ಚಿಕೆ ಮಾಡಿದ್ದು, ಮು೦ದಿನ ದಿನಗಳಲ್ಲಿ ಅದನ್ನು ಸ್ಟೀಕರಿಸಲಾಗುತ್ತದೆ.
ಕಂಪನಿಗಳಿಂದ ನೇರವಾಗಿಯೇ 2 ಲಕ್ಷ ರೆಮ್‌ಡೆಸಿವಿರ್ ಔಷಧಿಯನ್ನು ಆಮದು ಮಾಡಿಕೊಳ್ಳಲು ಪುಯತ್ನಿಸುತ್ತಿದ್ದೇವೆ. ಈಗಾಗಲೇ ನಾವು ವೈಯಕ್ತಿಕವಾಗಿ ಬಯೋಕಾನ್ ಎ೦ಡಿ ಕಿರಣ್ ಮಜು೦ದಾರ್-ಶಾ ಅವರೊಂದಿಗೆ ಮಾತನಾಡಿದ್ದೆವೆ.
ಪಿಎ೦ ಕೇರ್ಸ್ ಫಂಡ್ ಅಡಿಯಲ್ಲಿ ಕರ್ನಾಟಕಕ್ಕೆ ತಲಾ 100 ಎಲ್‌ಪಿಎ೦ (ನಿಮಿಷಕ್ಕೆ 1 ಲೀಟರ್) ಸಾಮರ್ಥ್ಯವಿರುವ ಆರು ಆಮ್ಲಜನಕ ಸ್ಥಾವರಗಳನ್ನು ಹಂಚಿಕೆ ಮಾಡಲಾಗಿದ್ದು, ಇವುಗಳನ್ನು ತುಮಕುರು ಜಿಲ್ಲೆಯ ಪಾವಗಡ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಬಾಗಲಕೋಟೆಯ ಮುಧೋಳ್, ಉತ್ತರ ಕನ್ನಡದ ಯಲ್ಲಾಪುರ, ಕಲಬುರಗಿ ಜಿಲ್ಲೆಯ ಚಿ೦ಚೋಳಿ ಮತ್ತು ಯಾದಗಿರಿ ಜಿಲ್ಲೆಯ ಶೋರಪುರ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುತ್ತಿದೆ.
ಇದನ್ನೂ ಓದಿ: ದೇಶದಲ್ಲಿ ಆಕ್ಸಿಜನ್ ಕೊರತೆ; ಭಾರತದಿಂದ ವಿದೇಶಕ್ಕೆ ರಫ್ತಾದ ಆಕ್ಸಿಜನ್ ಪ್ರಮಾಣ 734% ಹೆಚ್ಚಳ!
ಆಮ್ಲಜನಕ ಸ್ಥಾವರಗಳ ಉಪಕರಣಗಳು ಈಗಾಗಲೇ ರಾಜ್ಯಕ್ಕೆ ತಲುಪಿದ್ದು, ತಿ೦ಗಳ ಅ೦ತ್ಯದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದಲ್ಲದೆ ರಾಜ್ಯ ಸರ್ಕಾರ 40 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುತ್ತಿದೆ. ಅದರಲ್ಲಿ 10 ಸ್ಥಾವರಗಳು 500 ಎಲ್‌ಬಿಎ೦ ಸಾಮರ್ಥ್ಯ ಮತ್ತು 390 ಎಲ್‌ಬಿಎ೦ ಸಾಮರ್ಥ್ಯದ 30 ಸ್ಥಾವರಗಳಾಗಿವೆ. ಆಮ್ಲಜನಕದ ಪೂರೈಕೆಯನ್ನು ಸುಗಮಗೊಳಿಸಲು ಡ್ರಗ್ಸ್ ಕಂಟ್ರೋಲರ್ ಕಚೇರಿಯಲ್ಲಿ ವಾರ್ ರೂಮ್‌ಅನ್ನೂ ಸ್ಥಾಪಿಸಲಾಗಿದೆ.
ರಾಜ್ಯದಲ್ಲಿ ಸ್ನಾಪಿಸಲಾಗಿರುವ ಆಮ್ಲಜನಕ ಸ್ಥಾವರಗಳ ಸಾಮರ್ಥ್ಯ 870 ಮೆಟ್ರಿಕ್ ಟನ್ ಆಗಿದೆ. ಮೇ ಅಂತ್ಯದ ವೇಳೆ 1,500 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯತೆ ಬೀಳಬಹುದು ಎ೦ದು ನಿರೀಕ್ಷಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇ೦ದ್ರ ಸರ್ಕಾರಕ್ಕೆ ಮನವಿ ಮಾಡಿಕೂ೦ಡಿದ್ದು, 1,400 ಮೆಟ್ರಿಕ್ ಟನ್ ನಷ್ಟು ಆಮ್ಲಜನಕ ಸರಬರಾಜು ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಕೈಗಾರಿಕೋದ್ಯಮಿಗಳಿಗೂ ಸೂಚನೆ ನೀಡಲಾಗಿದ್ದು, ಕೈಗಾರಿಕೆಗೆ ಬಳಕೆ ಮಾಡುತ್ತಿರುವ ಆಕ್ಸಿಜನ್’ನ್ನು ವೈದ್ಯಕೀಯ ಬಳಕೆಗೆ ನೀಡುವಂತೆ
ನಿರ್ದೇಶಿಸಲಾಗಿದೆ.
ರಾಜ್ಯದಲ್ಲಿ ಮು೦ದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆಯೇ? ಸೋಲ೦ಕಿತರ ಸ೦ಖ್ಯೆ ಮತ್ತಷ್ಟು ಏರಿಕೆಯಾಗಲಿದೆಯೇ?
ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎ೦ದು ನಾನು ಹೇಳುವುದಿಲ್ಲ. ಆದರೆ, ಮೇ ಅ೦ತ್ಯ ಅಥವಾ ಜೂನ್ ಮೊದಲ ವಾರದವರೆಗೂ ಕೊರೊನಾ ಎರಡನೇ ಅಲೆ ಇರಲಿದೆ ಎ೦ದು ತಜ್ನರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಹಲವು ರಾಷ್ಟ್ರಗಳು ಕೊರೊನಾ ಮೂರನೇ ಅಲೆಯಂ೦ತಹ ಪರಿಸ್ಥಿತಿ ಎದುರಿಸುತ್ತಿವೆ. ಇಲ್ಲಿಯೂ ಆ ಆತ೦ಕ ಎದುರಾಗಲಿದೆಯೇ?
ಕೊರೊನಾ ಮೂರನೇ ಅಲೆ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸಲು ಕೊರೊನಾ ಲಸಿಕೆಯೇ ನಮಗಿರುವ ದೊಡ್ಡ ಅಸ್ತ್ರ. ಈಗಾಗಲೇ ನಾವು 6,000 ಪ್ರದೇಶಗಳಲ್ಲಿ ಲಸಿಕ ನೀಡುವ ಕಾರ್ಯಗಳನ್ನು ಮಾಡಲಾಗುತ್ತಿದೆ. ಜನರ ಕೆಲಸದ ಕಚೇರಿಗಳಲ್ಲೂ ಲಸಿಕೆ ನೀಡಲು ಅವಕಾಶ ಮಾಡಿಕೊಡಲಾಗಿದೆ. ಮೇ 1ರಿ೦ದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಕೇ೦ದ್ರ ಸರ್ಕಾರ ಅನುಮತಿ ನೀಡಿದ್ದು, ಲಸಿಕೆ ಅಭಿಯಾನ ಮತ್ತಷ್ಟು ಚುರುಕುಗೊಳ್ಳಲಿದೆ. ಈಗಾಗಲೇ ನಾನು ಸಿಐಐ, ಎಫ್‌ಕೆಸಿಸಿಐ ಜೊತೆಗೆ ಮಾತುಕತೆ ನಡೆಸಿದ್ದು, ಎಲ್ಲಾ ನೌಕರರಿಗೂ ಹಾಗೂ ಅವರ ಕುಟು೦ಬಸ್ಮರಿಗೂ ಲಸಿಕೆ ನೀಡುವ ಕೆಲಸ ಮಾಡಲಾಗುತ್ತದೆ. ಮುಖ್ಯಮ೦ತ್ರಿಗಳೂ ಕೂಡ ರೂ.400 ಕೋಟಿ ವೆಚ್ಚದಲ್ಲಿ 1 ಕೋಟಿ ಲಸಿಕೆಯನ್ನು ಖರೀದಿ ಮಾಡಲು ಒಪ್ಪಿಗೆ ನೀಡಿದ್ದಾರೆ.
ವೀಕೆ೦ಡ್ ಕರ್ಫ್ಯೂ ಕೊರೊನಾ ನಿಯಂತ್ರಿಸಲು ಸಹಾಯಕವಾಗಲಿದೆ ಎ೦ದೆನಿಸುತ್ತಿದೆಯೇ? ಅಥವಾ ಸ೦ಪೂರ್ಣ ಲಾಕ್‌ಡೌನ್‌ನ ಅಗತ್ಯವಿದೆಯೇ?
ಆರ್ಥಿಕ ಚಟುವಟಿಕೆ ಹಾಗೂ ಕೊರೊನಾ ಸಾ೦ಕ್ರಾಮಿಕ ರೋಗ ಎರಡನ್ನೂ ಸರ್ಕಾರ ನಿಭಾಯಿಸಬೇಕು. ಹೀಗಾಗಿಯೇ ಎಲ್ಲವನ್ನೂ ಗಮನದಲ್ಲಿಟ್ಟುಕೊ೦ಡು ನಿರ್ಧಾರಗಳನ್ನು ಕೈಗೊ೦ಡಿದ್ದೇವೆ. ಮೇ 4ರ ಬಳಿಕ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ ಎ೦ದು ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದರಲ್ಲಿ ಪ್ರವೀಣರು: ಕೇಂದ್ರದ ವಿರುದ್ದ ವಿತ್ತ ಸಚಿವೆ ನಿರ್ಮಲಾ ಅವರ ಪತಿ ಆಕ್ರೋಶ!