ಜಾಮಿಯಾ ಕುಲಪತಿ ಬಗ್ಗೆ ಅಪಸ್ವರ ಎತ್ತಿದ ಆಯ್ಕೆ ಸಮಿತಿ ಸದಸ್ಯ; ಹಿಂದಕ್ಕೆ ಕರೆಯುವಂತೆ ರಾಷ್ಟ್ರಪತಿಗೆ ಪತ್ರ

ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಕುಲಪತಿಗಳ ಆಯ್ಕೆಗೆ ರಚಿಸಿದ್ದ ಶೋಧ ಸಮಿತಿಯ ಸದಸ್ಯರೊಬ್ಬರು ಈಗ ಅಪಸ್ವರ ಎತ್ತಿ, ಸದ್ಯದ ಕುಲಪತಿ ಡಾ. ನಜ್ಮಾ ಅಖ್ತರ್ ಅವರನ್ನು ವಾಪಸ್ ಕರೆಸುವಂತೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ ಅವರಿಗೆ ಪತ್ರ ಬರೆದಿದ್ದಾರೆ. ಏಪ್ರಿಲ್ 2019ರಲ್ಲಿ ನಜ್ಮಾ ಅಖ್ತರ್ ಅವರು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಮೊದಲ ಮಹಿಳಾ ಉಪಕುಲಪತಿಗಳಾಗಿ ನೇಮಕಗೊಂಡಿದ್ದರು.

2018ರಲ್ಲಿ ರಚನೆಯಾಗಿದ್ದ ಶೋಧ ಸಮಿತಿಯ ಸದಸ್ಯ ರಾಮಕೃಷ್ಣ ರಾಮಸ್ವಾಮಿ ಮಾರ್ಚ್ 8ರಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದು, ಕೇಂದ್ರ ಜಾಗ್ರತ ಸಮಿತಿ ಅಖ್ತರ್ ಅವರ ಆಯ್ಕೆಗೆ ಒಪ್ಪಿಗೆ ನಿರಾಕರಿಸಿರುವ ಜನವರಿ 10, 2019ರ ಕಚೇರಿ ಟಿಪ್ಪಣಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಈ ನಿರಾಕರಣೆಯ ಕಾರಣವನ್ನು ಅವರು ತಿಳಿಸಿಲ್ಲ.

ಮೂರು ತಿಂಗಳ ಹಿಂದೆ, ಸಿ ಎ ಎ ವಿರೋಧಿ ಪ್ರತಿಭಟನೆಗಳಲ್ಲಿ ದೆಹಲಿ ಪೊಲೀಸರು ವಿಶ್ವವಿದ್ಯಾಲಯ ಆವರಣಕ್ಕೆ ಯಾವುದೇ ಪರವಾನಗಿ ಪಡೆಯದೆ ನುಗ್ಗಿದ್ದನ್ನು ಜಾಮಿಯಾ ಕುಲಪತಿಗಳು ವಿರೋಧಿಸಿದ್ದರು. ಪೊಲೀಸರು ಡಿಸೆಂಬರ್ 15 ರಂದು  ವಿಶ್ವವಿದ್ಯಾಲಯದ ಆವರಣಕ್ಕೆ ನುಗ್ಗಿ ವಿದ್ಯಾರ್ಥಿಗಳನ್ನು ಥಳಿಸಿ, ಗ್ರಂಥಾಲಯ ಧ್ವಂಸಗೊಳಿಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ವಿದ್ಯಾರ್ಥಿಗಳ ಜೊತೆಗೆ ನಿಲ್ಲುವುದಾಗಿ ಘೋಷಿಸಿದ್ದ ಅಖ್ತರ್, ಹಿಂಸೆ ನಡೆದ ಮುಂದಿನ ದಿನ ಪತ್ರಿಕಾ ಘೋಷ್ಠಿ ಕರೆದು, ಪೊಲೀಸರ ಅಕ್ರಮ ಪ್ರವೇಶ ಮತ್ತು ಮತ್ತು ಅವರು ತೆಗೆದುಕೊಂಡ ಕ್ರಮಗಳನ್ನು ಖಂಡಿಸಿದ್ದರು.

“ನವೆಂಬರ್ 28, 2018ರಲ್ಲಿ ವೈಯಕ್ತಿಕವಾಗಿ 13 ಜನ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿದ ಮೇಲೆ ಸಮಿತಿ ನಿಮಗೆ (ರಾಷ್ಟ್ರಪತಿ) ಮೂವರ ಹೆಸರನ್ನು ಶಿಫಾರಸ್ಸು ಮಾಡಿತ್ತು. ಆದರೆ ಇದಕ್ಕೆ ಜಾಗ್ರತ ಸಮಿತಿಯ ಒಪ್ಪಿಗೆ ಅವಶ್ಯಕತೆ ಇತ್ತು” ಎಂದು ರಾಮಸ್ವಾಮಿಯವರು ರಾಷ್ಟ್ರಪತಿಯವರಿಗೆ ಬರೆದ ಪತ್ರದಲ್ಲಿ ಬರೆದಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ರಾಶ್ತ್ರಪತಿಗಳನ್ನು ಏಪ್ರಿಲ್ 11, 209ರಂದು ಅಖ್ತರ್ ಅವರ ನೇಮಕಾತಿಗೆ ಒಪ್ಪಿಗೆ ಸೂಚಿಸಿದ್ದರು. ರಾಮಸ್ವಾಮಿವರ ಜೊತೆಗೆ ಪ್ರೊ. ಡಿ ಪಿ ಸಿಂಗ್ ಮತ್ತು ನ್ಯಾಯಮೂರ್ತಿ (ನಿವೃತ್ತ) ಎಂ ಎಸ್ ಎ ಸಿದ್ದಿಕಿ ಶೋಧ ಸಮಿತಿಯ ಸದಸ್ಯರಾಗಿದ್ದರು.

ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ರಾಮಸ್ವಾಮ್ ಸದ್ಯಕ್ಕೆ ಐ ಐ ಟಿ ದೆಹಲಿಯ ಭಾಗವಾಗಿದ್ದಾರೆ. ಅಖ್ತರ್ ನೇಮಕಾತಿ ವಿಚಾರವಾಗಿ ಹೈಕೋರ್ಟ್ ನಲ್ಲಿಯೂ ವಿಚಾರಣೆ ಜಾರಿಯಲ್ಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights