ಫ್ಯಾಕ್ಟ್‌ಚೆಕ್: ಇಂಡಿಯಾ ಗೇಟ್‌ನಲ್ಲಿ 61,395 ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳಿವೆಯೇ?

ದೆಹಲಿಯ ” ಇಂಡಿಯಾ ಗೇಟ್ ” ಗೋಡೆಯ ಮೇಲೆ ಒಟ್ಟು 95,300 ಸ್ವತಂತ್ರ ಹೋರಾಟಗಾರರ ಹೆಸರನ್ನು ಬರೆಯಲಾಗಿದ್ದು, ಅದರಲ್ಲಿ ಜಾತಿವಾರು ಬರೆಯಲಾಗಿದೆ. ಮುಸ್ಲಿಮರು : 61395, ಸಿಖ್ಖರು  8050, ಹಿಂದುಳಿದ ವರ್ಗ : 14480, ದಲಿತರು : 10778, ಸವರ್ಣಿಯರು : 598, ಸಂಘ ಪರಿವಾರ : 00 ಹೆಸರುಗಳಿವೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಇಷ್ಟಾದರೂ ಕೆಲವು ನಾಚಿಕೆಗೇಡಿಗಳು ತಾವೇ ದೇಶಭಕ್ತರೆಂದು ಮೆರೆಯುವುದಲ್ಲದೆ ಉಳಿದವರನ್ನು ದೇಶದ್ರೊಹಿಗಳು ಎಂದು ಬಿಂಬಿಸಲೆತ್ನಿಸುತ್ತಿವೆ. ಮೇಲಿನ ಎಲ್ಲರೂ ದೇಶದ ಸ್ವತಂತ್ರಕ್ಕಾಗಿ ಹೋರಾಡುತ್ತಿರುವಾಗ ಈ ನಕಲಿ ದೇಶಭಕ್ತರಿಗೆ ಸೇರಿದ ಹಿರಿಯರು ಬ್ರಿಟೀಷರಿಗೆ ಬೆಂಬಲಿಸಿ ಅವರ ಗುಲಾಮಗಿರಿ ಮಾಡುತ್ತಿದ್ದರು. ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ND TVಯ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರು ಈ ಪ್ರತಿಪಾದನೆಯನ್ನು ಮಾಡಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಸ್ವಾತಂತ್ರ ಹೋರಾಟಗಾರರ ಹೆಸರು ಎಂದು ಪ್ರಸಾರವಾದ ಮಾಹಿತಿಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಇಂಡಿಯಾ ಗೇಟ್‌ನಲ್ಲಿ ಉಲ್ಲೇಖಿಸಲಾದ ಹೆಸರುಗಳು ಮೊದಲ ಮಹಾಯುದ್ದದ(WW1) ಸಮಯದಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಹುತಾತ್ಮರದ್ದಾಗಿದೆ ಆದರೆ ಭಾರತೀಯ ಸ್ವಾತಂತ್ರ್ಯ ಚಳವಳಿಯ ಅಲ್ಲ.

ಇಂಡಿಯಾ ಗೇಟ್‌ನ ಇತಿಹಾಸ

ದೆಹಲಿ ಪ್ರವಾಸೋದ್ಯಮ ವೆಬ್‌ಸೈಟ್‌ನ ಪ್ರಕಾರ, ಇಂಡಿಯಾ ಗೇಟ್‌ನ ಅಡಿಪಾಯವನ್ನು ಡ್ಯೂಕ್ ಆಫ್ ಕನ್ನಾಟ್ 1921 ರಲ್ಲಿ ಹಾಕಿದರು, ಇದನ್ನು ಎಡ್ವಿನ್ ಲುಟ್ಯೆನ್ಸ್ ವಿನ್ಯಾಸಗೊಳಿಸಿದರು ಮತ್ತು 10 ವರ್ಷಗಳ ನಂತರ ವೈಸರಾಯ್ ಲಾರ್ಡ್ ಇರ್ವಿನ್ ಉದ್ಘಾಟಿಸಿದರು.

ಮೊದಲ ಮಹಾಯುದ್ದದ ಸಂದರ್ಭದಲ್ಲಿ ಇಂಡಿಯಾ ಗೇಟ್‌ನಲ್ಲಿ ಉಲ್ಲೇಖಿಸಲಾದ ಹೆಸರುಗಳು WWI ಸಮಯದಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಹುತಾತ್ಮರದ್ದಾಗಿದೆ. ಆದರೆ ಭಾರತೀಯ ಸ್ವಾತಂತ್ರ್ಯ ಚಳವಳಿಯ ಅಲ್ಲ.

WWI ಸಮಯದಲ್ಲಿ, ದೇಶವು ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿದ್ದರಿಂದ ಸಾವಿರಾರು ಭಾರತೀಯರು ಬ್ರಿಟಿಷ್ ಸೈನ್ಯಕ್ಕಾಗಿ ಹೋರಾಡಿದರು. ಇಂಡಿಯಾ ಗೇಟ್ ಒಂದು ಯುದ್ಧ ಸ್ಮಾರಕವಾಗಿದ್ದು, ಇದು WWI ಸಮಯದಲ್ಲಿ ಬ್ರಿಟಿಷ್ ಸೈನ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ 70 ಸಾವಿರ ಭಾರತೀಯ ಸೈನಿಕರನ್ನು ಸ್ಮರಿಸುತ್ತದೆ.

ಕಾಮನ್‌ವೆಲ್ತ್ ವಾರ್ ಗ್ರೇವ್ಸ್ ಕಮಿಷನ್ (CWGC) ಪ್ರಕಾರ, ಮಹಾಯುದ್ದದ ಹುತಾತ್ಮರ ಪಟ್ಟಿ, ಅವರ ಸ್ಮಾರಕಗಳು ಮತ್ತು ಸಮಾಧಿಗಳನ್ನು ನಿರ್ವಹಿಸುವ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಅದರ ಪ್ರಕಾರ ಮೊದಲ ಮಹಾಯುದ್ದದಲ್ಲಿ ಮೃತರಾದ ಭಾರತೀಯ ಸೈನಿಕರ 13,220 ಹೆಸರುಗಳನ್ನು ಇಂಡಿಯಾ ಗೇಟ್‌ನಲ್ಲಿ ಕೆತ್ತಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ದೆಹಲಿಯ ” ಇಂಡಿಯಾ ಗೇಟ್ ” ಗೋಡೆಯ ಮೇಲೆ ಬರೆಯಲಾಗಿದೆ ಎಂಬ ಅಂಕಿಅಂಶಗಳು ಆಧಾರರಹಿತವಾಗಿವೆ ಮತ್ತು ವಾಸ್ತವವಲ್ಲ. ಅಲ್ಲದೆ, ಇಂಡಿಯಾ ಗೇಟ್‌ನಲ್ಲಿ ಕೆತ್ತಲಾದ ಹೆಸರುಗಳು ಮೊದಲ ಮಹಾಯುದ್ದದ ಮತ್ತು ಮೂರನೇ ಆಂಗ್ಲೋ-ಆಫ್ಘಾನ್ ಯುದ್ಧದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರ ಹೆಸರುಗಳಾಗಿವೆ. ಹಾಗಾಗಿ ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ ಇದು ಸ್ವಾತಂತ್ರ ಹೋರಾಟಗಾರರ ಹೆಸರುಗಳಲ್ಲ ಎಂದು ಬೂಮ್ ಫ್ಯಾಕ್ಟ್‌ಚೆಕ್ ಸ್ಪಷ್ಟಪಡಿಸಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಸುವಿನ ಚರ್ಮವನ್ನು ಕತ್ತರಿಸಿ ಹಾಲು ಕರೆಯುವ ವಿಡಿಯೋ ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights