ಫ್ಯಾಕ್ಟ್‌ಚೆಕ್: ಗೋವಾದ ಕಡಲ ತೀರಗಳಲ್ಲಿ ಮದ್ಯಪಾನ ನಿಷೇದ ಮಾಡಲಾಗಿದೆಯೇ?

ಗೋವಾದಲ್ಲಿ ಅಗ್ಗದ ಮದ್ಯದ ಕಾರಣದಿಂದಾಗಿ ಅನೇಕ ಪ್ರವಾಸಿಗರು ಮತ್ತು ಹತ್ತಿರದ ರಾಜ್ಯಗಳ ಜನರು ಗೋವಾಕ್ಕೆ ಬರುತ್ತಾರೆ. ಇದೇ ಕಾರಣಕ್ಕೆ ಪಾನ ಪ್ರಿಯರಿಗೂ ಗೋವಾ ಎಂದರೆ ಅಚ್ಚು ಮೆಚ್ಚು. ಆದರೆ ಈಗ ಗೋವಾ ಸರ್ಕಾರ ಮದ್ಯಪಾನ ನಿಷೇದಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

2 ಜನರು, ಪಾನೀಯ ಮತ್ತು ಪಠ್ಯ 'GOA BANS DRINKING ALCOHOL ON BEACHES FINE OF RS. 5,000 το 50,000 WOULD BE IMPOSED IDLF VIOLATED! GOA TRIP CANCEL MAT KARNA AB' ಹೇಳುತ್ತಿದೆ ನ ಚಿತ್ರವಾಗಿರಬಹುದು

ಗೋವಾದ ಕಡಲತೀರಗಳಲ್ಲಿ ಮದ್ಯ ಸೇವನೆಗೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದೆ ಎನ್ನಲಾದ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಿಯಮ ಉಲ್ಲಂಘಿಸಿ ಕಡಲತೀರಗಳಲ್ಲಿ ಮದ್ಯಸೇವಿಸಿದರೆ ₹5,000ದಿಂದ ₹50,000ವರೆಗೆ ದಂಡ ವಿಧಿಸಲು ಸರ್ಕಾರ ಮುಂದಾಗಿದೆ ಎಂದು ಪೋಸ್ಟರ್‌ನಲ್ಲಿ ಹೇಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಬೀಚುಗಳಲ್ಲಿ ಮದ್ಯಪಾನ ಸೇವನೆ ಮಾಡುವುದನ್ನು ಗೋವಾ ಸರ್ಕಾರ ಸಂಪೂರ್ಣ ನಿಷೇದಿಸಿದೆ ಎಂದು ಪ್ರತಿಪಾದಿಸಿ ಮಾಡಲಾದ ಪೋಸ್ಟ್‌ಅನ್ನು ಪರಿಶೀಲಿಸಲು ಗೂಲ್ ಸರ್ಚ್ ಮಾಡಿದಾಗ, ಕಡಲತೀರಗಳ ಬಯಲು ಪ್ರದೇಶಗಳು, ಪ್ರವಾಸಿ ತಾಣಗಳಲ್ಲಿ ಮದ್ಯ ಸೇವನೆ ಹಾಗೂ ಅಡುಗೆ ಮಾಡಲು ನಿರ್ಬಂಧವಿದೆ.

2013ರಿಂದಲೂ ಈ ನಿರ್ಬಂಧವಿದ್ದು, 2019ರ ಪ್ರವಾಸೋದ್ಯಮ ತಿದ್ದುಪಡಿ ಕಾಯ್ದೆಯಲ್ಲೂ ಇದನ್ನು ಉಲ್ಲೇಖಿಸಲಾಗಿದೆ. ಆದರೆ, ಕಡಲತೀರಗಳ ಶಾಕ್‌ನಲ್ಲಿ (ಕ್ಯಾಬಿನ್, ಮನೆಯಂತಹ ಸ್ಥಳ) ಮದ್ಯಸೇವನೆಗೆ ಯಾವುದೇ ಅಡ್ಡಿಯಿಲ್ಲ ಎಂದು ಕಾಯ್ದೆ ಹೇಳುತ್ತದೆ. ಗೋವಾದ ಪ್ರವಾಸಿ ತಾಣಗಳು ಹಾಗೂ ಕಡಲತೀರದ ಬಯಲು ಪ್ರದೇಶಗಳಲ್ಲಿ ಕಸ ಹಾಕುವುದು, ಅಡುಗೆ ಮಾಡುವುದು, ಬಾಟಲ್‌ಗಳನ್ನು ಒಡೆದುಹಾಕುವುದಕ್ಕೆ ನಿರ್ಬಂಧ ವಿಧಿಸಿ ಪ್ರವಾಸೋದ್ಯಮ ಕಾರ್ಯದರ್ಶಿ ನಿಖಿಲ್ ದೇಸಾಯಿ ಅವರು ಇದೇ ಅ.31ರಂದು ಆದೇಶ ಹೊರಡಿಸಿದ್ದಾರೆ.

ಜನವರಿ 2019 ರಲ್ಲಿ ಗೋವಾ ಸರ್ಕಾರವು ಈ ಕಾಯ್ದೆಯನ್ನು ತಿದ್ದುಪಡಿ ಮಾಡುವ ಹೊಸ ಮಸೂದೆಯನ್ನು ಅಂಗೀಕರಿಸಿತು. ಗೋವಾದ ಪ್ರವಾಸಿ ಸ್ಥಳಗಳ ಪಟ್ಟಿಯನ್ನು ಇಲ್ಲಿ ನೋಡಬಹುದು. ಗೋವಾದ ಯಾವುದೇ ಬೀಚ್‌ನಲ್ಲಿ ಜನರು ಬಹಿರಂಗವಾಗಿ ಮದ್ಯ ಸೇವಿಸುವಂತಿಲ್ಲ ಎಂದು ಇದು ವಿವರಿಸುತ್ತದೆ. ಪರವಾನಗಿ ಪಡೆದ ರೆಸ್ಟೋರೆಂಟ್‌ಗಳಲ್ಲಿ ಅಥವಾ ಕಡಲತೀರದ ಇತರ ಅಧಿಕೃತ ಸ್ಥಳಗಳಲ್ಲಿ ಮಾತ್ರ ಮದ್ಯ ಸೇವನೆಗೆ ಅನುಮತಿ ನೀಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬೀಚ್‌ಗಳಲ್ಲಿ ತೆರೆದ ಪ್ರದೇಶಗಳಲ್ಲಿ ಮದ್ಯ ಸೇವನೆಯನ್ನು 2013 ರಿಂದ ಗೋವಾದಲ್ಲಿ ನಿಷೇಧಿಸಲಾಗಿದೆ. ಇದನ್ನೇ ತಪ್ಪಾಗಿ ಅರ್ಥೈಸಿ, ರಾಜ್ಯದ ಎಲ್ಲ ಕಡಲತೀರಗಳಲ್ಲೂ ಮದ್ಯಪಾನ ನಿಷೇಧಿಸಲಾಗಿದೆ ಎಂದು ತಪ್ಪಾಗ ಹಂಚಿಕೊಳ್ಳಲಾಗಿದೆ ಎಂದು ಫ್ಯಾಕ್ಟ್‌ಲಿ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಎಳೆನೀರನ್ನು ಬಿಸಿ ಮಾಡಿ ಕುಡಿದರೆ ಕ್ಯಾನ್ಸರ್ ಗುಣವಾಗುವುದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights