ಅಮ್ಮಾ ನಾನೇನು ತಪ್ಪು ಮಾಡಿದ್ದೆ? 15ರ ಬಾಲಕನನ್ನು ಕೊಂದ ತಾಯಿಯ ಪ್ರೇಮಿ..!
15 ವರ್ಷದ ಬಾಲಕನ್ನು ಅಪಹರಿಸಿದ ತಾಯಿಯ ಪ್ರೇಮಿ ಕತ್ತು ಹಿಸುಕಿ ಕೊಂದ ಘಟನೆ ದೆಹಲಿಯ ನಿಹಾಲ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.
ಹೌದು.. ಈ ಘಟನೆಯ ಮಾಸ್ಟರ್ ಮೈಂಡ್ ಪ್ರದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಈಗಾಗಲೇ ವಿವಾಹಿತ. ಆದರೂ 15 ವರ್ಷದ ಮಗನಿರುವ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಈ ಸಂಬಂಧಕ್ಕೆ ಪ್ರದೀಪ್ ಹೆಂಡತಿ ನಿರಾಕರಿಸಿದ್ದಳು. ಹೀಗಾಗಿ ಪ್ರದೀಪ್ ನಿಗೆ ವಿಚ್ಚೇಧನ ಪಡೆದು ತನ್ನನ್ನು ಮದುವೆಯಾಗಲು ಸಲಹೆ ನೀಡಿದ್ದ ಮಹಿಳೆ ಮಾತನ್ನು ಪ್ರದೀಪ್ ಕೇಳಿರಲಿಲ್ಲ. ಹೆಂಡತಿ ಬೇಕು ಪ್ರೇಮಿಯೂ ಬೇಕು ಅಂದಿದ್ದ. ಆದರೆ ಪ್ರದೀಪ್ ಮಾತಿಗೆ ಒಪ್ಪದ ಮಹಿಳೆ ಕಳೆದ ಮೂರು ತಿಂಗಳ ಹಿಂದೆ ಬೇರೆಯವನನ್ನು ಮದುವೆಯಾಗಿದ್ದಾಳೆ.
ಇದಕ್ಕೆ ಸಿಟ್ಟಿಗೆದ್ದ ಪ್ರದೀಪ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ. ಪ್ರದೀಪ್ ಡಿಸೆಂಬರ್ 22 ರಂದು ತನ್ನ ಮೂರು ಜನ ಸ್ನೇಹಿತರೊಂದಿಗೆ ಮಹಿಳೆಯ 15 ವರ್ಷದ ಮಗನನ್ನು ಅಪಹರಿಸಿದ್ದಾನೆ. ಮಾತ್ರವಲ್ಲದೇ 50 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಗನ ಬಗ್ಗೆ ಯಾವುದೇ ಸುಳುವು ಸಿಗದೇ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಪ್ರದೀಪ್ ಸ್ನೇಹಿತರಾದ ಅಂಕಿತ್ ಪ್ರಜಾಪತಿ ಮತ್ತು ಕಪಿಲ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಪ್ರದೀಪ್ ಸಿಂಗ್ ಸೇರಿದಂತೆ ಇನ್ನಿಬ್ಬರು ಪರಾರಿಯಾಗಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಅಪಹರಣದ ಕೆಲವು ಗಂಟೆಗಳ ನಂತರ ಬಾಲಕನನ್ನು ಕತ್ತು ಹಿಸುಕಿರುವುದು ಕಂಡುಬಂದಿದೆ. ಪೊಲೀಸರು ಫೋನ್ ಅನ್ನು ಹತ್ತರ್‌ಪುರದಲ್ಲಿ ಪತ್ತೆ ಹಚ್ಚಿದರು ಆದರೆ ಪ್ರದೀಪ್‌ನನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅವರ ಸಹೋದರ ಮತ್ತು ಕೊಲೆಯ ಸಮಯದಲ್ಲಿ ಹಾಜರಿದ್ದ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಯಿತು.

