ಹೊಸ ಕೊರೊನಾವೈರಸ್ ಹರಡುವ ಆತಂಕ : ಜ.7ರವರೆಗೆ ಭಾರತಕ್ಕೆ ಬರುವ ಯುಕೆ ವಿಮಾನಗಳು ಸ್ಥಗಿತ!

70% ವೇಗವಾಗಿ ಹರಡುವ ಹೊಸ ಕೊರೊನಾವೈರಸ್ ಆತಂಕದಿಂದ ಭಾರತಕ್ಕೆ ಬರುವ ಯುಕೆ ವಿಮಾನಗಳನ್ನು ಜನವರಿ 7 ರವರೆಗೆ ಸ್ಥಗಿತಗೊಳಿಸಲಾಗಿದೆ.

ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಮಾತನಾಡಿ, “ಯುಕೆ ಮತ್ತು ಹೊರಗಿನ ವಿಮಾನಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವುದನ್ನು 2021 ಜನವರಿ 7 ರವರೆಗೆ ವಿಸ್ತರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಜನವರಿ7ರ ಬಳಿಕ ಕಟ್ಟುನಿಟ್ಟಾಗಿ ವಿಮಾನಯಾನ ಪುನರಾರಂಭ ಮಾಡಲಾಗುವುದು. ಇದಕ್ಕಾಗಿ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು” ಎಂದು ಹೇಳಿದ್ದಾರೆ.

ರೂಪಾಂತರಿತ ವೈರಸ್ ಮೊದಲು ಆರು ಜನರಲ್ಲಿ ಕಂಡುಬಂದಿರುವುದನ್ನ ಭಾರತ ಮಂಗಳವಾರ ವರದಿ ಮಾಡಿತ್ತು. ಆದರೆಡ (ಡಿ.30) ಬುಧವಾರ ಬೆಳಿಗ್ಗೆಯವರೆಗೆ ದೇಶದಲ್ಲಿ ಒಟ್ಟು 20 ಪ್ರಕರಣಗಳು ವರದಿಯಾಗಿವೆ.

ಡಿಸೆಂಬರ್ 9 ರಿಂದ 22 ರವರೆಗೆ ಭಾರತಕ್ಕೆ ಆಗಮಿಸಿದ ಪ್ರಯಾಣಿಕರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಸರ್ಕಾರ ನಿರ್ದೇಶಿಸಿದೆ. ನವೆಂಬರ್ 25 ರಿಂದ ಡಿಸೆಂಬರ್ 23 ಮಧ್ಯರಾತ್ರಿಯವರೆಗೆ ಯುಕೆ ಯಿಂದ ವಿವಿಧ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಇಳಿದ ಸುಮಾರು 33,000 ಪ್ರಯಾಣಿಕರನ್ನು ಆರ್ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಡಿಸಬೇಕು. ರೂಪಾಂತರ ಕೊರೊನಾವೈರಸ್ ಧನಾತ್ಮಕವಾಗಿ ಕಂಡುಬಂದವರ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಬೇಕೆಂದು ಕೇಂದ್ರ ಸಚಿವಾಲಯ ನಿರ್ದೇಶಿಸಿತ್ತು.

ಯುಕೆ ನಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ವೈರಸ್ ಈಗ ಡೆನ್ಮಾರ್ಕ್, ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್ಲೆಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಮತ್ತು ಸಿಂಗಾಪುರಗಳಲ್ಲಿ ವರದಿಯಾಗಿದೆ. ಹೀಗಾಗಿ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಾಗಿದ್ದು ಸರ್ಕಾರ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights