ಫ್ಯಾಕ್ಟ್‌ಚೆಕ್: ತಮಿಳುನಾಡಿನಲ್ಲಿ ಮುಸ್ಲಿಂ ಹುಡುಗರಿಂದ ಪುಂಡಾಟಿಕೆ ನಡೆದಿದ್ದು ನಿಜವೇ?
ಕಾಲೇಜು ಹುಡುಗಿಯರನ್ನು ರ್‍ಯಾಗಿಂಗ್ ಮಾಡುತ್ತಿರುವ ಪುಂಡರ ಗುಂಪು ಕಾಲೇಜ್ ಕ್ಯಾಂಪಸ್ ಒಳಗೆ ನುಗ್ಗುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದಷ್ಟೆ ಅಲ್ಲದೆ ಅದೇ ಗುಂಪು ಕಾಲೇಜಿನ ಮುಂಭಾಗ ಸಾರ್ವಜನಿಕ ಮೇಲೆ ಹಲ್ಲೆ ನಡೆಸುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ತಮಿಳುನಾಡಿನಲ್ಲಿ ಮುಸ್ಲಿಮರ ಗುಂಪು ಕಾಲೇಜಿನ ಹಿಂದೂ ಹುಡುಗಿಯರಿಗೆ ಕಿರುಕುಳ ನೀಡುತ್ತಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದಿಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೊಣ.
No, these are not behind the scenes (BTS) of a Bollywood movie where hero ends up saving the girls.
This is happening at a women's college in Tamil Nadu, where Muslim boys are eve-teasing Hindu girls.
This is what a state without law and order and Muslim appeasement looks like. pic.twitter.com/yQdtwDmbGE
— Dhanendra Parmar (@DhanendraParmar) November 5, 2022
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಟ್ವಿಟರ್ ಪೋಸ್ಟ್‌ನ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ನವೆಂಬರ್5 ರಂದು ಟೈಮ್ಸ್ ಆಫ್ ಇಂಡಿಯಾ ಮಾಡಿದ ವರದಿಯೊಂದು ಲಭ್ಯವಾಗಿದೆ. ವರದಿಯ ಪ್ರಕಾರ, ಅಕ್ಟೋಬರ್ 30 ರಂದು, ತೇವರ್ ಜಯಂತಿಯ ಸಂದರ್ಭದಲ್ಲಿ ಮಧುರೈನ ತಲ್ಲಕುಲಂನಲ್ಲಿರುವ ಲೇಡಿ ಡೋಕ್ ಕಾಲೇಜಿಗೆ ಬಲವಂತವಾಗಿ ಪ್ರವೇಶಿಸಿದ ಒಂಬತ್ತು ಜನರನ್ನು ಮಧುರೈ ನಗರ ಪೊಲೀಸರು ಬಂಧಿಸಿದ್ದಾರೆ. ಬೈಕ್‌ನಲ್ಲಿ ಆಗಮಿಸಿದ ಪುಂಡರು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಲ್ಲದೆ ಕಾಲೇಜು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವರದಿಯಲ್ಲಿ ಎಲ್ಲಿಯೂ ಯುವಕರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ ಎಂಬ ಉಲ್ಲೇಖವಿಲ್ಲ.
ತಮಿಳು ಸುದ್ದಿ ವಾಹಿನಿಯ ತಂತಿ ಟಿವಿಯು ಈ ಘಟನೆಯ ಕುರಿತು ವೀಡಿಯೊದ ಸುದ್ದಿಯನ್ನು ವರದಿ ಮಾಡಿದ್ದು, ದ್ವಿಚಕ್ರ ವಾಹನಗಳಲ್ಲಿ ಗೇಟ್‌ಗಳ ಮೂಲಕ ನುಗ್ಗುತ್ತಿರುವಾಗ ಹುಡುಗರು ಹುಚ್ಚುಚ್ಚಾಗಿ ಸನ್ನೆ ಮಾಡುವುದು ಅಸಭ್ಯವಾಗಿ ವರ್ತಿಸುವುದು ವೀಡಿಯೊದಲ್ಲಿ ಸೆರೆಯಾಗಿದೆ. ವೀಡಿಯೊದ ಮೊದಲ ಭಾಗವು ಲೇಡಿ ಡೋಕ್ ಕಾಲೇಜಿನ ಘಟನೆಯನ್ನು ತೋರಿಸುತ್ತದೆ ಎಂದು ತಮಿಳು ವಾಹಿನಿ ಖಚಿತಪಡಿಸುತ್ತದೆ.
ನವೆಂಬರ್ 5 ರಂದು ಮಧುರೈ ಉತ್ತರದ ಉಪ ಪೊಲೀಸ್ ಆಯುಕ್ತರು ಘಟನೆ ಕುರಿತು ANI ಯೊಂದಿಗೆ ಮಾತನಾಡಿದ್ದು, ಕಾಲೇಜಿನ ವಿದ್ಯಾರ್ಥಿನಿಯರಿಗೆ ತೊಂದರೆ ನೀಡುತ್ತಿದ್ದ ಹತ್ತು ಜನರನ್ನು ಬಂಧಿಸಲಾಗಿದೆ, ಅವರಲ್ಲಿ ಐದು ಕಾಲೇಜು ವಿದ್ಯಾರ್ಥಿಗಳು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದಲ್ಲದೆ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Tamil Nadu | An incident of harassment of girls by some men on bike was reported at Lady Dok College, Madurai on Oct 30 on Jayanti of Muthuramalinga Thevar. Case filed against 11 people. 10 people arrested,4 two-wheelers seized. 5 arrested are colleges students:DCP, Madurai North pic.twitter.com/UwwTGq19kR
— ANI (@ANI) November 5, 2022
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಮತ್ತೊಂದು ವೀಡಿಯೊದಲ್ಲಿ ಪುರುಷರ ಗುಂಪೊಂದು ವೃದ್ಧನನ್ನು ಥಳಿಸುತ್ತಿರುವುದನ್ನು ತೋರಿಸುತ್ತದೆ. ಈ ಕುರಿತು ANI ಯ ಟ್ವೀಟ್ ಮಾಡಿದ್ದು. ಅದರ ಪ್ರಕಾರ, ನವೆಂಬರ್ 2 ರಂದು, ತನ್ನ ಮಗಳನ್ನು ಕರೆದುಕೊಂಡು ಹೋಗಲು ಬಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಭಯಾನಕ ಘಟನೆ ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದಿತ್ತು. ತಮ್ಮ ಮಗಳನ್ನು ಕರೆದುಕೊಂಡು ಹೋಗಲು ಕಾಲೇಜಿಗೆ ಬಂದಿದ್ದ ಪಿ.ಸೆಂಥಮಿಲ್ ಪಂಡಿಯನ್ ಎಂಬ 50 ವರ್ಷದ ವ್ಯಕ್ತಿಯ ಮೇಲೆ ಪುಂಡರ ಗುಂಪು ಹಲ್ಲೆ ನಡೆಸಿದ್ದು, ಪುಂಡರು ಹಿರಿಯ ವ್ಯಕ್ತಿ ಮೇಲೆ ಹೆಲ್ಮೆಟ್ ನಿಂದ ದಾಳಿ ಮಾಡಿದ್ದಾರೆ. ಅಲ್ಲದೆ ನೆಲ್ಲಕ್ಕುರುಳಿಸಿ ಮನಸೋ ಇಚ್ಛೆ ಥಳಿಸಿದ್ದಾರೆ. ಘಟನಾ ಪ್ರದೇಶದಲ್ಲಿ ತೀವ್ರ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
#WATCH| TN:Some youths assaulted a parent who'd come to pick up his daughter from Sri Meenakshi Govt Arts College for Women in Madurai on Nov 2
6 people arrested so far; case filed u/s 341,308,506(ii) &TN Prohibition of Harassment of Woman Act:Madurai CP
(Note:Abusive language) pic.twitter.com/SNspntoPYN
— ANI (@ANI) November 5, 2022
ಈ ಘಟನೆಯ ಕುರಿತು ANI ವರದಿ ಮಾಡಿದ್ದು, ವಿದ್ಯಾರ್ಥಿನಿ ತಂದೆಗೆ ಥಳಿಸಿದ ಏಳು ಜನರಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದೆ. ಅಂತ್ಯಕ್ರಿಯೆಯ ಮೆರವಣಿಗೆಯು ಹಾದು ಹೋಗುತ್ತಿದ್ದರಿಂದ ಸದ್ದಿಲ್ಲದೆ ಹಾದುಹೋಗುವಂತೆ ಆ ವ್ಯಕ್ತಿ ಹುಡುಗರಿಗೆ ಹೇಳಿದ್ದರು ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಯಾವುದೇ ಕೋಮು ಕೋನವನ್ನು ಉಲ್ಲೇಖಿಸಲಾಗಿಲ್ಲ.
ಇದಲ್ಲದೆ, India Today ಫ್ಯಾಕ್ಟ್‌ಚೆಕ್ ತಂದ ಸೆಲ್ಲೂರ್ ಮತ್ತು ತಲ್ಲಕುಲಂನಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಎರಡು ಘಟನೆಗಳಲ್ಲಿ ಯಾವುದೇ ಕೋಮು ವೈಶಮ್ಯದ ಹಿನ್ನಲೆಯಾಗಲಿ ಇಲ್ಲದೆ ಕೆಲ ಪುಂಡುರು ಅನಗತ್ಯವಾಗಿ ಸೃಷ್ಟಿಸಿದ ಗದ್ದಲದಿಂದ ಕಾಲೇಜು ವಿದ್ಯಾರ್ಥಿನಿಯರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಯಾರೂ ಕೂಡ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಎರಡು ಪ್ರತ್ಯೇಕ ಘಟನೆಗಳನ್ನು ಸಂಯೋಜಿಸಿ, ಸಾಮಾಜಿಕ ಮಾಧ್ಯಮದಲ್ಲಿ ಕೋಮು ಹಿನ್ನಲೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಕೃಪೆ: ಇಂಡಿಯಾ ಟುಡೇ
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಎಳೆನೀರನ್ನು ಬಿಸಿ ಮಾಡಿ ಕುಡಿದರೆ ಕ್ಯಾನ್ಸರ್ ಗುಣವಾಗುವುದೇ?

