ಗಿಡ ಕಿತ್ತಿದ್ದಕ್ಕಾಗಿ ಬಾಲಕಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಂಚಿದ ದುರುಳರು!
ಮನೆಯಂಗಳದಲ್ಲಿದ್ದ ಕಿಡವೊಂದನ್ನು ಕಿತ್ತಿದ್ದಕ್ಕಾಗಿ 12 ವರ್ಷದ ಬಾಲಕಿಯ ಮೇಲೆ ಸೀಮೆಎಣ್ಣೆ ಸುರಿದುಬೆಂಕಿ ಹಚ್ಚಿರುವ ಅಮಾನುಷ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಡೆದಿದೆ.
ಬಾಲಕಿ ಆಟವಾಡುತ್ತಿದ್ದ ವೇಳೆ ನೆರಮೆನೆಯ ಗಿಡವನ್ನು ಕಿತ್ತಿದ್ದಾಳೆ. ಇದರಿಂದ ಕೋಪಗೊಂಡ ನೆರಮೆನೆಯಾತ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.
ಬೇಗುಸರಾಯ್ ಜಿಲ್ಲೆಯ ಸಿವರಾಣ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಸಿಖಂದರ್ ಯಾದವ್ ಎಂದು ಗುರುತಿಸಲಾಗಿದೆ.
12 ವರ್ಷದ ಬಾಲಕಿ ಸಿಖಂದರ್ ಯಾದವ್ ನ ಮನೆಯ ಎದುರು ಆಡುತ್ತಿದ್ದಳು. ಈ ವೇಳೆ ಅಕಸ್ಮಾತ್ ಆಗಿ ಗಿಡವೊಂದನ್ನು ಕಿತ್ತಿದ್ದಳು. ಅದಕ್ಕಾಗಿ ಆರೋಪಿ ಸಿಖಂದರ್, ಆತನ ಪತ್ನಿ ಮತ್ತು ಮಗಳು ಬಾಲಕಿಗೆ ಹಲ್ಲೆ ನಡೆಸಿದ್ದಾರೆ. ನಂತರ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಖಂದರ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬೇಗುಸರಾಯ್ ಪೊಲೀಸ್ ವರಿಷ್ಠಾಧಿಕಾರಿ ನಿಶಿತ್ ಪ್ರಿಯಾ ತಿಳಿಸಿದ್ದಾರೆ.
ಇದನ್ನೂ ಓದಿ: BJP ಅಭ್ಯರ್ಥಿ ಅಣ್ಣಾಮಲೈಗೆ ಶಾಕ್; ನಾಮಪತ್ರ ತಡೆಹಿಡಿದ ಚುನಾವಣಾ ಆಯೋಗ!

