ವಿರಾಟ್‌ ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ; ಐಐಟಿ ಪದವೀಧರನ ಬಂಧನ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರ 9 ತಿಂಗಳ ಮಗಳ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಒಡ್ಡಿದ ಆರೋಪದ ಮೇಲೆ ಐಐಟಿ ಪದವೀಧರನನ್ನು ಬಂಧಿಸಲಾಗಿದೆ. ಆತ, ನಕಲಿ ಹೆಸರಿನ ಮೂಲಕ ಆನ್​ಲೈನ್​​ನಲ್ಲಿ ಸಾಕಷ್ಟು ಟ್ರೋಲ್​ಗಳನ್ನು ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಆರೋಪಿಯು 23 ವರ್ಷದ ರಾಮ್​ ನಾಗೇಶ್​ ಶ್ರೀನಿವಾಸ್​ ಅಕುಬತಿನಿ ಎಂದು ಹೇಳಲಾಗಿದೆ. ಆತ ಸಾಫ್ಟ್​ವೇರ್ ಇಂಜಿನಿಯರ್​ ಆಗಿದ್ದು, ಸ್ನಾತಕೋತ್ತರ ಪದವಿಗೆಂದು ಅಮೆರಿಕಕ್ಕೆ ತೆರಳುವ ಸಿದ್ದತೆಯಲ್ಲಿದ್ದ. ಈ ನಡುವೆ, ವಿರಾಟ್‌ ಕೊಹ್ಲಿಗೆ ಅವರ ಮಗಳ ಮೇಲೆ ಅತ್ಯಾಚಾರ ಎಸಗುವುದಾಗಿ ನಕಲಿ ಖಾತೆಯಿಂದ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಆತನನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದ್ದು, ಮುಂಬೈನ ಲಾಕಪ್​ನಲ್ಲಿ ಇರಿಸಲಾಗಿದೆ.

ಈತ ಕ್ರಿಕೆಟ್​ ಬಗ್ಗೆ ಆಸಕ್ತಿ ಹೊಂದಿದ್ದನು. ಟಿ 20 ವರ್ಲ್ಡ್​ ಕಪ್​ ಪಂದ್ಯದಲ್ಲಿ ಟೀಂ ಇಂಡಿಯಾ ಪದೇ ಪದೇ ಸೋತಾಗಲೂ ರಾಮ್​ ನಾಗೇಶ್​​ ಹತಾಶೆಗೆ ಒಳಗಾಗುತ್ತಿದ್ದನು ಎಂದಷ್ಟೇ ನಮಗೆ ತಿಳಿದಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಆತ ಗಪ್ಪಿಸ್ತಾನ್ ರೇಡಿಯೋ ಎಂಬ ಟ್ವಿಟರ್​ ಖಾತೆಯನ್ನು ಹೊಂದಿದ್ದ. ಈ ಖಾತೆಯ ಮೂಲಕವೇ ಆತ ಕೊಹ್ಲಿ ವಿರುದ್ಧ ಟ್ವೀಟ್​ ಮಾಡಿದ್ದ. ಈಗ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಈ ಟ್ವೀಟ್​​ ವ್ಯಾಪಕವಾಗಿ ವೈರಲ್​ ಆಗುತ್ತಿದ್ದಂತೆಯೇ ರಾಮ್​ ನಾಗೇಶ್​ ತನ್ನ ಖಾತೆಯನ್ನು ಡಿ ಆಯಕ್ಟಿವೇಟ್​ ಮಾಡಿದ್ದ. ಆದರೆ, ಈ ವೇಳೆಗೆ ಟ್ವೀಟ್‌ಅನ್ನು ಗಮಸಿದ್ದ ವಿರಾಟ್​ ಕೊಹ್ಲಿ ಅವರ ಮ್ಯಾನೇಜರ್​ ಮುಂಬೈ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ರಾಮ್​ ನಾಗೇಶ್​ ಟ್ವಿಟರ್​ ಖಾತೆ ಡಿಲೀಟ್​ ಮಾಡಿದ್ದರೂ ಟ್ವೀಟ್​ನ ಸ್ಕ್ರೀನ್​ಶಾಟ್​ ವ್ಯಾಪಕವಾಗಿ ವೈರಲ್​ ಆಗಿತ್ತು. ಟ್ವಿಟರ್​ ಖಾತೆಯ ಹೆಸರನ್ನು ಬದಲಾವಣೆ ಮಾಡಿದರೂ ಸಹ ಪೊಲೀಸರು ರಾಮ್​ನಾಗೇಶ್​ ಟ್ವಿಟರ್​ ಖಾತೆಯನ್ನು ಟ್ರ್ಯಾಕ್​ ಮಾಡಿ ಆರೋಪಿಯನ್ನು ಪತ್ತೆಹಚ್ಚಿ, ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲಿ ಯುವಕ ಆತ್ಮಹತ್ಯೆ; ಐವರು ಪೊಲೀಸರ ಅಮಾನತು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights