ಕೋವಿಡ್-19: ಕೇರಳಕ್ಕೆ ಹಿಂದಿರುಗಲು ಕೇವಲ 12 ಘಂಟೆಗಳಲ್ಲಿ 1 ಲಕ್ಷ ಜನ ಅನಿವಾಸಿ ಕೇರಳಿಗರ ನೋಂದಣಿ

ವಿದೇಶಿಗಳಿಂದ ಕೇರಳ ಮೂಲದ ಜನರು ಹಿಂದಿರುಗಲು ಸಹಾಯ ಮಾಡಲು ಕೇರಳ ಸರ್ಕಾರ ಅಂತರ್ಜಾಲ ತಾಣದಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕೊಟ್ಟ 12 ಘಂಟೆಗಳಲ್ಲಿ ಸುಮಾರು 1 ಲಕ್ಷ ಜನ ಇದಕ್ಕೆ ನೋದಾಯಿಸಿಕೊಂಡು ಆಸಕ್ತಿ ತೋರಿಸಿದ್ದಾರೆ. ಇದಕ್ಕೆ ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸಲು ಪ್ರಾರಂಭ ಮಾಡಬೇಕಷ್ಟೆ.

ಇದರಲ್ಲಿ ಹೆಚ್ಚಿನ ನೋಂದಣಿಗಳು ಮಧ್ಯ ಪ್ರಾಚ್ಯ ದೇಶಗಳಿಂದ ಆಗಿದ್ದು, ಯು ಎ ಇ ಇಂದ ಗರಿಷ್ಠ ಜನರು ನೋಂದಾಯಿಸಿಕೊಂಡಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ವಿವಿಧ ದೇಶಗಳಿಂದ ಹಲವು ಜನರು ಕೇಂದ್ರ ಸರ್ಕಾರಕ್ಕೆ ಈ ಮನವಿ ಮಾಡಿಕೊಳ್ಳುತ್ತಿದ್ದ ಹಿನ್ನಲೆಯಲ್ಲಿ ಕೇರಳ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಕೆಲವೇ ದಿನಗಳ ಹಿಂದೆ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜ್ಯ ಸರ್ಕಾರಗಳ ಮುಖ್ಯ  ಕಾರ್ಯದರ್ಶಿಗಳಿಗೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಹಿತಕ್ಕೆ ಮತ್ತು ಹಿಂದಕ್ಕೆ ಕರೆಸಿಕೊಳ್ಳುವುದಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದ್ದರು.

ಕೇರಳದ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೇಳಿದ್ದಾರೆ.

ಸುಮಾರು 25 ಲಕ್ಷ ಕೇರಳಿಗರು ವಿದೇಶಗಳಲ್ಲಿ ನೆಲೆಸಿದ್ದಾರೆ. ಅದರಲ್ಲಿ 90% ಜನ ಮಧ್ಯಪ್ರಾಚ್ಯ ದೇಶಗಳಲ್ಲಿ ನೆಲೆಸಿದ್ದು, ವಿಮಾನ ನಿಲ್ದಾಣಗಳು ಕೆಲಸ ನಿರ್ವಹಿಸಲು ಮತ್ತೆ ಪ್ರಾರಂಭಿಸಿದ ಮೇಲೆ ಸುಮಾರು ಮೂರರಿಂದ ಐದು ಲಕ್ಷ ಜನ ರಾಜ್ಯಕ್ಕೆ ಹಿಂದಿರುಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights