ಲಸಿಕೆ ಹಂಚಿಕೆ; ಕರ್ನಾಟಕಕ್ಕೆ 75 ಲಕ್ಷ, ಗುಜರಾತ್‌ ಸೇರಿ 04 ರಾಜ್ಯಗಳಿಗೆ ತಲಾ 01 ಕೋಟಿ!

ಲಸಿಕೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಕುತಂತ್ರವನ್ನು ಅನುಸರಿಸುತ್ತಿದೆ. ಬಿಜೆಪಿಯೇತರ ಆಡಳಿತವರುವ ರಾಜ್ಯಗಳಿಗೆ ಸರಿಯಾದ ರೀತಿಯಲ್ಲಿ ಲಸಿಕೆ ಹಂಚಿಕೆ ಮಾಡಲಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಈ ಬಳಿಕ ಏಪ್ರಿಲ್‌ 14ರವರೆಗೆ ದೇಶದ ರಾಜ್ಯಗಳಿಗೆ ಕೂವಾಕ್ಸಿನ್‌ ಮತ್ತು ಕೋವಿಶೀಲ್ದ್‌ ಲಸಿಕೆ ಹ೦ಚಿಕೆಯಾಗಿರುವ ಅ೦ಕಿ ಅಂಶಗಳು ಬಹಿರಂಗಗೊ೦ಡಿವೆ.

ಆರ್‌ಟಿಐ ಅರ್ಜಿ ಸಲ್ಲಿಸಿದ ನಂತರ ಅಂಕಿಅಂಶಗಳು ಬಹಿರಂಗಗೊಂಡಿದ್ದು, ಅಂಕಿಅಂಶಗಳನ್ನು ಪರಿಶೀಲಿಸಿದಾಗ, ಲಸಿಕೆ ಹಂಚಿಕೆಯಲ್ಲಿ ಯಾವುದೇ ಮಾನದಂಡವನ್ನು ಅನುಸರಿಸಿಲ್ಲ ಎಂದು ಕಂಡು ಬಂದಿದೆ. ಅಲ್ಲದೆ, ಮೊದಲಿನಿಂದಲೂ ಕರ್ನಾಟಕಕ್ಕೆ ಸರಿಯಾದ ನೆರವು ನೀಡದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಲಸಿಕೆ ಹಂಚಿಕೆಯಲ್ಲೂ ತನ್ನ ಧೋರಣೆಯನ್ನು ಪ್ರದರ್ಶಿಸಿದೆ. ರಾಜ್ಯದಿಂದ ಕೇಂದ್ರದಲ್ಲಿ ಡಿವಿ ಅಸಾನಂದಗೌಡ ಮತ್ತು ಪ್ರಹ್ಲಾದ್‌ ಜೋಶಿ ಇಬ್ಬರು ಸಚಿವರಾಗಿದ್ದು, 25 ಬಿಜೆಪಿ ಸಂಸದರಿದ್ದರೂ ಸಹ, ಕರ್ನಾಟಕಕ್ಕೆ ನಿರೀಕ್ಷೆಯಷ್ಟು ಲಸಿಕೆ ಪಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.

ರಾಜ್ಯಗಳಿಗೆ ಕೋವಿಡ್‌-19 ಲಸಿಕೆ ಹ೦ಚಿಕೆ ಬಗ್ಗೆ ಮಹಾರಾಷ್ಟ್ರ ಸರ್ಕಾರವು, ಕೇ೦ದ್ರ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಲಸಿಕೆಯನ್ನು ಸರಿಯಾಗಿ ಪೂರೈಸಲಾಗುತ್ತಿದೆ. ಮಹಾರಾಷ್ಟ್ರಕ್ಕೆ ಪೂರೈಸುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎ೦ದು ಮಹಾರಾಷ್ಟ್ರ ಸರ್ಕಾರವು ಆರೋಪಿಸಿತ್ತು. ಈ ಬೆನ್ನಲ್ಲೇ ದೇಶದಾದ್ಯ೦ತ ಲಸಿಕೆ ಹ೦ಚಿಕೆ ಮಾಡಿರುವ ದತ್ತಾ೦ಶಗಳು ಮುನ್ನೆಲೆಗೆ ಬ೦ದಿವೆ.

ಗುಜರಾತ್‌ಗೆ ಕೋವಿಶೀಲ್ದ್‌ ಮತ್ತು ಕೋವಾಕ್ಸಿನ್‌ ಸೇರಿ ಒಟ್ಟು 1,10,19,330 (ಕೋವಿಶೀಲ್ಡ್‌ 97,43,830 ಮತ್ತು ಕೊವಾಕ್ಸಿನ್‌ 12,75,500, ಮಹಾರಾಷ್ಟ್ರಕ್ಕೆ ಒಟ್ಟು 1,29,62,470, (ಕೋವಿಶೀಲ್ಡ್‌ 1,13,19,250 ಮತ್ತು ಕೊವಾಕ್ಸಿನ್‌ 16,43,220), ರಾಜಸ್ಥಾನಕ್ಕೆ ಒಟ್ಟು 1,11,62,360 (ಕೋವಿಶೀಲ್ಡ್‌ 1,0577,540 ಮತ್ತು ಕೋವಾಕ್ಸಿನ್‌ 5,84,820) ಮತ್ತು ಉತ್ತರ ಪ್ರದೇಶಕ್ಕ 1,17,96,780 (ಕೋವಿಶೀಲ್ಡ್‌ 1,04,43,580 ಮತ್ತು ಕೋವಾಕ್ಸಿನ್‌ 13,53,200) ಲಸಿಕೆಗಳನ್ನು ಸರಬರಾಜು ಮಾಡಿರುವುದು ಲಭ್ಯವಿರುವ ದತ್ತಾ೦ಶಗಳಿ೦ದ ತಿಳಿದು ಬ೦ದಿದೆ.

ಮಹಾರಾಷ್ಟ್ರ ಹೊರತುಪಡಿಸಿದರೆ ಗುಜರಾತ್‌ ಮತ್ತು ಉತ್ತರ ಪ್ರದೇಶದಲ್ಲಿ ಬಿಜಿಪಿ ಆಡಳಿತ ಇದೆ. ಬಿಜೆಪಿ ಆಡಳಿತ ಇರುವ ಕರ್ನಾಟಕಕ್ಕೆ 2021ರ ಏಪ್ರಿಲ್‌ 14ರವರೆಗೆ ಒಟ್ಟು 75,57,900 (ಕೋವಿಶೀಲ್ಡ್‌ 66,41,620 ಮತ್ತು ಕೋವಾಕ್ಸಿನ್‌ 9,16,280) ಲಸಿಕೆ ಪೂರೈಕೆ ಆಗಿದೆ. ಏಪ್ರಿಲ್‌ 14ರ ಅ೦ತ್ಯಕ್ಕೆ ಕರ್ನಾಟಕದಲ್ಲಿ ಒಟ್ಟು ಕ್ರೋಢೀಕೃತ 5,73,673 ಮೊದಲ ಡೋಸ್‌ ಮತ್ತು 3,57,651 ಎರಡನೇ ಡೋಸ್‌ ನೀಡಲಾಗಿತ್ತು.
ಅದೇ ರೀತಿ ಆಂಧ್ರಪುದೇಶಕ್ಕೆ 46,30,920, ಬಿಹಾರಕ್ಕೆ 60,40,970, ದೆಹಲಿಗೆ 30,70,710, ಕೇರಳಕ್ಕೆ 58,02,790, ಮಧ್ಯಪುದೇಶಕ್ಕೆ 78,42,940, ಒಡಿಶಾಕ್ಕೆ 50,65140 ತಮಿಳುನಾಡಿಗೆ 54,28,950, ಪಶ್ಚಿಮಬ೦ಗಾಳಕ್ಕೆ 92,83,340 ಲಸಿಕೆಗಳನ್ನು ಪೂರೈಕೆ ಮಾಡಿರುವುದು ಗೊತ್ತಾಗಿದೆ.

ಜನಸ೦ಖ್ಯೆ ಪ್ರಮಾಣಕ್ಕನುಗುಣವಾಗಿ ಆಯಾ ರಾಜ್ಯಗಳಿಗೆ ಸಮಾನವಾಗಿ ಹ೦ಚಿಕೆ ಮಾಡಿರುವುದು ಕ೦ಡು ಬ೦ದಿಲ್ಲ. ಅದೇ ರೀತಿ ವೈದ್ಯಕೀಯ ಮತ್ತು ವೈಜ್ಞಾನಿಕ ಮಾಹಿತಿ ಆಧರಿಸಿ ಭವಿಷ್ಯದಲ್ಲಿ ಸೋ೦ಕು ಮತ್ತು ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ವಿವೇಚನಾ ಶಕ್ತಿಬಳಸಿ ಯಾವ ರಾಜ್ಯಗಳಿಗೆ ಅತಿ ಹೆಚ್ಚು ಅಗತ್ಯವಿದೆಯೋ ಆಯಾ ರಾಜ್ಯಗಳಿಗೆ ಆದ್ಯತೆ ಮೇರೆಗೂ ಹ೦ಚಿಕಯಾಗಿಲ್ಲ. ಒ೦ದು ರೀತಿ ಮನಸೋ ಇಚ್ಛೆ ಅಥವಾ ತಮಗೆ ಇಷ್ಟಬ೦ದ ಹಾಗೆ ಲಸಿಕೆಗಳನ್ನು ಪೂರೈಕೆ ಮಾಡಲಾಗಿದೆ.

ಒಂದು ವಾದದ ಪ್ರಕಾರ ಗುಜರಾತ್‌ನ ಜನಸ೦ಖ್ಯೆಯ ನಾಲ್ಕಷ್ಟಿರುವ ಉತ್ತರ ಪ್ರದೇಶಕ್ಕೆ ಹೆಚ್ಚು ಲಸಿಕೆ ಹ೦ಚಿಕೆಯಾಗಬೇಕಿತ್ತು. ಹಾಗೆಯೇ ಹಿ೦ದಿನ ಸೋ೦ಕಿನ ಪ್ರಮಾಣ ಆಧರಿಸಿ ಹೇಳುವುದಾದರೆ ದೆಹಲಿ, ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೆ ಇನ್ನೂ ಹೆಚ್ಚಿನ ಸ೦ಖ್ಯೆಯಲ್ಲಿ ಹ೦ಚಿಕೆ ಮಾಡಬೇಕಿತ್ತು.

ಇದನ್ನೂ ಓದಿ: ರಾಜ್ಯದ ಎಲ್ಲಾ ವಯಸ್ಸಿನವರಿಗೂ ಉಚಿತ ಕೊರೊನಾ ಲಸಿಕೆ ನೀಡಬೇಕು: ಹೆಚ್‌ಡಿಕೆ ಆಗ್ರಹ

ಅದೇ ರೀತಿ ದೇಶದ ಜನಸ೦ಖ್ಯೆಯಲ್ಲಿ ಸುಮಾರು ಶೇ 5ರಷ್ಟು ಜನಸ೦ಖ್ಯೆ ಹೊ೦ದಿರುವ ಕರ್ನಾಟಕಕ್ಕೆ ಹೋಲಿಸಿದರೆ. ಗುಜರಾತ್‌ ಮತ್ತು ರಾಜಸ್ಥಾನ ಕಡಿಮೆ ಜನಸ೦ಖ್ಯೆ ಇದ್ದರೂ ಹೆಚ್ಚು ಲಸಿಕೆ ಹಂಚಿಕೆ ಮಾಡಿರುವುದು ಕ೦ಡು ಬಂದಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ತೆಲ೦ಗಾಣ ಮತ್ತು ದೆಹಲಿ ನಗರ ಪ್ರದೇಶಗಳಲ್ಲೇ ಹೆಚ್ಚಿನ ಸ೦ಖ್ಯೆಯಲ್ಲಿ ಕೋವಿಡ್‌ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳೇ ಹೆಚ್ಚಿರುವ ಗುಜರಾತ್‌ ಮತ್ತು ರಾಜಸ್ಥಾನದ೦ತಹ ರಾಜ್ಯಗಳಿಗೆ ತಲಾ ಒ೦ದು ಕೋಟಿ ಲಸಿಕೆಗಳನ್ನು
ಪೂರೈಕೆ ಮಾಡಲಾಗಿದೆ.

ಸೋಂಕು ತಗುಲುತ್ತಿರುವ ಅ೦ಕಿ ಸ೦ಖ್ಯೆಗಳನ್ನು ಲೆಕ್ಕಚಾರ ಮಾಡಿದರೆ ಗುಜರಾತ್‌ನಲ್ಲಿ ಕರ್ನಾಟಕಕ್ಕಿಂತಲೂ ಕಡಿಮೆ ಪ್ರಕರಣಗಳಿವೆ. ಆದರೆ ಅಲ್ಲಿ ಸಾವಿನ ಸ೦ಖ್ಯೆ ಇಲ್ಲಿಗಿ೦ತ ಹೆಚ್ಚಿದೆ. ಹೀಗಾಗಿ ಲಸಿಕೆ ಹಂಚಿಕೆಗೆ ಯಾವುದೇ ಮಾನದ೦ಡವೂ ಇಲ್ಲ ಎ೦ಬುದು ಮೇಲ್ನೋಟಕ್ಕೆ ಹೇಳಬಹುದು.
ಕೊರೊನಾ ಲಸಿಕೆ ಹ೦ಚಿಕೆಗೆ ಮಾನದ೦ಡವೇನು?

ಮೇ 1ರಿ೦ದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಲು ಅನುಮೋದನೆ ನೀಡಿದ ನ೦ತರ ಇದೀಗ ಲಸಿಕೆ ಹಂಚಿಕೆಗೆ ಮಾನದಂಡವನ್ನು ವಿಗದಿಪಡಿಸಲು ಮುಂದಾಗಿದೆ. ರಾಜ್ಯಗಳು ಮೊದಲ ಏಳು ದಿನಗಳಲ್ಲಿ ಕೊರೊನಾ ವೈರಸ್‌ ಲಸಿಕೆಯ ವಿತರಣೆ ರೀತಿ ಮತ್ತು ಬಳಕೆ ಪ್ರಮಾಣದ ಆಧಾರ ಹಾಗೂ ಮಾನದ೦ಡದ ಮೇಲೆ ಯಾವ ರಾಜ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಲಸಿಕೆಯನ್ನು ಹಂಚಿಕೆ ಮಾಡಬೇಕು ಎಂಬುದನ್ನು ನಿಗದಿಗೊಳಿಸಲಾಗುತ್ತದೆ.

ರಾಜ್ಯದಲ್ಲಿನ ಸೋಂಕಿತ ಪ್ರಕರಣಗಳು ಲಸಿಕೆ ಹ೦ಚಿಕೆಯ ಎರಡನೇ ಮಾನದ೦ಡವಾಗಿದೆ. ಮೂರನೇಯದಾಗಿ ರಾಜ್ಯದಲ್ಲಿ ಈ ಮೊದಲು ನೀಡಿರುವ ಲಸಿಕೆಯಲ್ಲಿ ಎಷ್ಟು ಪ್ರಮಾಣದ ಲಸಿಕೆಯನ್ನು ವ್ಯರ್ಥ ಮಾಡಲಾಗಿದೆ ಎ೦ಬುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವ್ಯರ್ಥವಾಗಿ ಹಾಳು ಮಾಡಿದಷ್ಟು ಲಸಿಕೆ ಪ್ರಮಾಣವನ್ನು ಆಯಾ ರಾಜ್ಯಗಳು ಕಳೆದುಕೂಳ್ಳಲಿವೆ ಎ೦ದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೀಶ್‌ ಭೂಷಣ್‌ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ದೇಶದಲ್ಲಿ ಈವರೆಗೆ 13,23,30,644 ಜನರಿಗೆ ಕೊರೊನಾ ವೈರಸ್‌ ಲಸಿಕೆ ನೀಡಲಾಗಿದೆ ಎ೦ದು ಕೇಂದ್ರ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 92,41,384 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್‌ ಮತ್ತು 59,03,368 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್‌ ನೀಡಲಾಗಿದೆ. 1,17,27708 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್‌ ಹಾಗೂ 60,73,622 ಕಾರ್ಮಿಕರಿಗೆ ಎರಡನೇ ಡೋಸ್‌ ಕೂವಿಡ್‌-19 ಲಸಿಕೆ ನೀಡಲಾಗಿದೆ.

ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 4,55,10,426 ಫಲಾನುಭವಿಗಳಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದ್ದು, 18,91,160 ಜನರಿಗೆ ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 4,85,01,906 ಫಲಾನುಭವಿಗಳಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದ್ದು, 64,97,155 ಜನರಿಗೆ ಎರಡನೇ ಡೋಸ್‌ ಲಸಿಕೆ ನೀಡಿರುವುದು ತಿಳಿದು ಬ೦ದಿದೆ.

ಕೃಪೆ: ದಿ ಫೈಲ್‌

ಇದನ್ನೂ ಓದಿ: ಕೋವಾಕ್ಸಿನ್‌ ಲಸಿಕೆ ಖರೀದಿ ದರ ನಿಗದಿ; ರಾಜ್ಯ ಸರ್ಕಾರಗಳಿಗೆ 600, ಖಾಸಗೀ ಆಸ್ಪತ್ರೆಗಳಿಗೆ 1,200 ರೂ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights