ಬಹುಜನರಿಗೆ ಬಂದೂಕು ನೀಡಿ! ನಮ್ಮನ್ನು ನಾವೇ ರಕ್ಷಿಸಿಕೊಳ್ಳುತ್ತೇವೆ: ಹತ್ರಾಸ್‌ಗೆ ಹೊರಟ ರಾವಣ್‌

ಹತ್ರಾಸ್ ಯುವತಿಯ ಮೇಲಿನ ಅತ್ಯಾಚಾರ, ಕೊಲೆ ಮತ್ತು ರಾತ್ರೋರಾತ್ರಿ ಪೊಲೀಸರೇ ಆಕೆಯನ್ನು ಸುಟ್ಟುಹಾಕಿದ ನಂತರದಲ್ಲಿ ಉತ್ತರ ಪ್ರದೇಶದಲ್ಲಿ ಆಕ್ರೋಶ ಭುಗಿಲೆದ್ದಿದೆ. ಪ್ರಕರಣದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿರುವ ಭೀಮ್‌ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ರಾವಣ್‌‌ ಅವರು ದೇಶದ 20 ಲಕ್ಷ ಬಹುಜನರಿಗೆ ತಕ್ಷಣ ಬಂದೂಕು ಪರವಾನಗಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇಂದು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಹೊರಟಿರುವ ಚಂದ್ರಶೇಖರ್ ಅಜಾದ್‌, ಸಂವಿಧಾನದ ವಾಸಿಸುವ ಹಕ್ಕನ್ನು ಉಲ್ಲೇಖಿಸಿರುವ ಅಜಾದ್, ಸರ್ಕಾರಗಳು ದಲಿತರ ರಕ್ಷಣೆ ಮಾಡುವುಲ್ಲಿ ವಿಫಲವಾಗಿವೆ. ಹಾಗಾಗಿ ದೇಶದ ಹಿಂದುಳಿದ ವರ್ಗಗಳಿಗೆ ಬಂದೂಕು ಪರವಾನಗಿ ನೀಡಬೇಕು. ನಮ್ಮನ್ನು ನಾವೇ ರಕ್ಷಿಸಿಕೊಳ್ಳುತ್ತೇವೆ ಎಂದು ಟ್ವೀಟ್‌ ಮಾಡಿದ್ದಾರೆ.

“ದೇಶದ 20 ಲಕ್ಷ ಬಹುಜನರಿಗೆ ತಕ್ಷಣ ಬಂದೂಕು ಪರವಾನಗಿ ನೀಡಬೇಕು ಎಂಬುದು ನಮ್ಮ ಬೇಡಿಕೆ. ಬಂದೂಕುಗಳು ಮತ್ತು ಪಿಸ್ತೂಲ್‌ಗಳನ್ನು ಖರೀದಿಸಲು ಸರ್ಕಾರ ನಮಗೆ 50% ಸಹಾಯಧನವನ್ನು ನೀಡಬೇಕು. ನಾವು ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ ”ಎಂದಿದ್ದಾರೆ.

ಹತ್ರಾಸ್‌ ಪ್ರಕರಣ ನಡೆದಾಗಿನಿಂದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್ ಸಂತ್ರಸ್ತೆಗೆ ನ್ಯಾಯಕ್ಕಾಗಿ ಆಗ್ರಹಿಸಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮೊದಲೇ ಅವರು ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ಪ್ರಯತ್ನಿಸಿದರೂ ಸಹ ಪೊಲೀಸರು ಅವಕಾಶ ನೀಡದೇ ಅವರನ್ನು ಕೆಲ ಸಮಯದ ಗೃಹಬಂಧನದಲ್ಲಿಟ್ಟಿದ್ದರು. ನಂತರ ತನ್ನ ಕಾರ್ಯಕರ್ತರೊಂದಿಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಜಾದ್ ಇಂದು ಹತ್ರಾಸ್‌ಗೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.


ಇದನ್ನೂ ಓದಿ: ಹತ್ರಾಸ್‌ ಸಂತ್ರಸ್ತೆ ಕೊನೆಯದಾಗಿ ಮಾತನಾಡಿದ ವಿಡಿಯೋ ವೈರಲ್: ಆಕೆ ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights