ಫ್ಯಾಕ್ಟ್‌ಚೆಕ್ : ಮೋದಿಯವರ ಅಂಚೆ ಚೀಟಿಯನ್ನು ಟರ್ಕಿ ಬಿಡುಗಡೆ ಮಾಡಿದ್ದು ಯಾವಾಗ ಮತ್ತು ಏಕೆ ಗೊತ್ತೆ?

ಮುಸ್ಲಿಂ ದೇಶವಾದ ಟರ್ಕಿಯಲ್ಲಿ ನಮ್ಮ ದೇಶದ ಚೌಕಿದಾರ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಪ್ರಭಾವಿ ನಾಯಕ ಎಂಬ ಗೌರವ ನೀಡಿ ಮೋದಿ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ಭಾರತವೇ ಹೆಮ್ಮೆ ಪಡುವ ವಿಚಾರ ಎಂಬ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಇದೇ ಫೋಟೊವನ್ನು ಹಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲಾಗಿದ್ದು, ಟರ್ಕಿ ದೇಶಕ್ಕೆ ನಮ್ಮ ಪ್ರಧಾನಿ ಬಗ್ಗೆ ಗೌರವ ಇದೆ ಆದರೆ ನಮ್ಮ ದೇಶದ ಜನ ಪ್ರಧಾನಿಯನ್ನು ಅವಮಾನಿಸುತ್ತಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರು ಈ ಪೋಸ್ಟ್‌ಅನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂ ಗೆ ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಬಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, 15 ನವೆಂಬರ್ 2015 ನರೇಂದ್ರ ಮೋದಿ ಅವರ ಹೆಸರಲ್ಲಿ ಟರ್ಕಿಯು ಅಂಚೆ ಚೀಟಿ ಬಿಡುಗಡೆ ಮಾಡಿರುವುದು ನಿಜ. ಆದರೆ ಟರ್ಕಿಯು ಯಾವತ್ತೂ ಮೋದಿಯನ್ನು “ವಿಶ್ವದ ಅತ್ಯಂತ ಶ್ರೇಷ್ಠ ನಾಯಕ” ಎಂದು ಪರಿಗಣಿಸಿ ಅಂಚೆ ಚೀಟಿ ಬಿಡುಗಡೆ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಟರ್ಕಿ ಮೋದಿಯ ಅಂಚೆ ಚೀಟಿ ತಂದದ್ದು ಏಕೆ?

ಹಾಗಾದರೆ ಟರ್ಕಿ ದೇಶ ನರೇಂದ್ರ ಮೋದಿಯ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಹೊರತಂದದ್ದು ಏಕೆ ಎಂದು ಪರಿಶೀಲಿಸದಾಗ, ವಾಸ್ತವಾಗಿ ಈ ಅಂಚೆ ಚೀಟಿಯನ್ನು ಹೊರತಂದಿದ್ದು ಈಗಲ್ಲ, ಬದಲಾಗಿ 2015ರ ಜಿ20 ಶೃಂಗ ಸಭೆಯಲ್ಲಿ. ಅಲ್ಲದೆ ಮೋದಿ ಪ್ರಭಾವಿ ವ್ಯಕ್ತಿ ಎಂದು ಈ ಅಂಚೆ ಚೀಟಿ ಬಿಡುಗಡೆಗೊಳಿಸಿದ್ದಲ್ಲ. ಬದಲಾಗಿ ಜಿ20 ಸಮಾವೇಶಲ್ಲಿ ಪಾಲ್ಗೊಳ್ಳುವ ಜಗತ್ತಿನ 33 ಜನಪ್ರಿಯ ನಾಯಕರಿಗೆ ಗೌರವ ಸಲ್ಲಿಸುವ ಸಲುವಾಗಿ ಜಗತ್ತಿನ 33 ಜನಪ್ರಿಯ ನಾಯಕರ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತ್ತು.

2015ರ ನವೆಂಬರ್ ತಿಂಗಳಲ್ಲಿ ಎಕನಾಮಿಕ್ ಟೈಮ್ಸ್‌ನಲ್ಲಿ ಪ್ರಕಟವಾಗಿರುವ ವರದಿಯೊಂದು ಪತ್ತೆಯಾಯಿತು. ಅದರಲ್ಲಿ, ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಇರ್ಡೊಗನ್ ಅವರು ಜಿ20 ಟರ್ಕಿ ಸಮಾವೇಶದ ಸವಿನೆನಪಿಗಾಗಿ ಎಲ್ಲ ನಾಯಕರ ವೈಯಕ್ತೀಕೃತ ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿದರು ಎಂಬ ವಿಷಯವಿತ್ತು. ಒಟ್ಟು 33 ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ಅದರಲ್ಲಿ ವಿಶ್ವದಲ್ಲಿ ಆರ್ಥಿಕವಾಗಿ ಪ್ರಬಲವಾಗಿರುವ 19 ರಾಷ್ಟ್ರಗಳ ಮುಖಂಡರೂ ಇದ್ದರು. ಬರಾಕ್ ಒಬಾಮ, ವ್ಲಾಡಿಮಿರ್ ಪುಟಿನ್, ಜಿನ್ ಪಿಂಗ್, ಡೇವಿಡ್ ಕೆಮರೂನ್, ಮಾಲ್ಕಮ್ ಟರ್ನ್‌ಬಿಲ್, ಡಿಲ್ಮಾ ರೌಸೀಫ್, ಜಸ್ಟಿನ್ ಟ್ರೂಡಿಯಾವು, ಏಂಜೆಲಾ ಮೆರ್ಕೆಲ್, ಶಿಂಝೋ ಅಬೆ, ಡೊನಾಲ್ ಟಸ್ಕ್ ಅವರ ಸ್ಟ್ಯಾಂಪುಗಳೂ ಅಂದು ಅಚ್ಚಾಗಿದ್ದವು.

ಒಟ್ಟಾರೆಯಾಗಿ ಹೇಳುವುದಾದರೆ, 2015ರ ಜಿ20 ಟರ್ಕಿ ಸಮಾವೇಶದಲ್ಲಿ ಭಾಗವಹಿಸಿದ್ದ ಎಲ್ಲ ದೇಶದ ಪ್ರಧಾನಿ ಅಧ್ಯಕ್ಷರನ್ನು ಸೇರಿ ಒಟ್ಟು 33 ಜನ ಅಂಚೆ ಚೀಟಿಯನ್ನು ಹೊರತಂದಿದೆ. ಮೋದಿ ಒಬ್ಬರದ್ದೇ ಅಲ್ಲ. ಹೀಗಾಗಿ ನರೇಂದ್ರ ಮೋದಿ ಜಗತ್ತಿನ ಪ್ರಭಾವಿ ವ್ಯಕ್ತಿ ಎಂದು ಟರ್ಕಿ ದೇಶದಲ್ಲಿ ಅವರ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಹೊರತಲಾಗಿದೆ ಎಂಬ ಸುದ್ದಿ ಸುಳ್ಳು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ 2015ರ ಘಟನೆಯನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾಧನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights