ಫ್ಯಾಕ್ಟ್‌ಚೆಕ್ : ಇಟಲಿ ಪ್ರಧಾನಿ ಮೋದಿಯವರನ್ನು ಅವಮಾನಿಸಿದರೇ?

ಮಾರ್ಚ್ 2, 2023 ರಂದು ಭಾರತಕ್ಕೆ ಭೇಟಿ ನೀಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆತ್ಮೀಯವಾಗಿ ಸ್ವಾಗತಿಸಿದರು. ಮೆಲೋನಿ ಮತ್ತು ಮೋದಿ ಅವರ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತ, ಇಟಲಿ ಪ್ರಧಾನಿ ಮೆಲೋನಿ ಮೋದಿಯವರಿಗೆ ಹಸ್ತಲಾಘವ ಮಾಡಲು ನಿರಾಕರಿಸಿದರು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

https://twitter.com/shaandelhite/status/1631917755845984256?s=46&t=kIszbQH_arRSG8kPbuGeZw

“ಪರಸ್ಪರ ನಮಸ್ಕರಿಸುವುದು ಭಾರತೀಯ ಸಂಸ್ಕೃತಿಯಲ್ಲಿ ಒಂದು ಆಚರಣೆಯಾಗಿದೆ ಎಂಬುದನ್ನು ಇಟಲಿ ಪ್ರಧಾನಿ ಮೋದಿಯವರಿಗೆ ಅರ್ಥಮಾಡಿಸಿದ್ದಾರೆ. ಅಂತಿಮವಾಗಿ ವಿದೇಶಿಯರಿಂದ  ಪಾಠ ಮಾಡಿಸಿಕೊಂಡಿದ್ದಾರೆ” ಎಂಬ ವ್ಯಂಗ್ಯ ಹೇಳಿಕೆಯೊಂದಿಗೆ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಇಟಾಲಿಯನ್ ಪಿಎಂ ಮೆಲೋನಿ ಅವರ ಭೇಟಿಯ ವೀಡಿಯೊಗಳನ್ನು ಹುಡುಕಿದಾಗ, ನಮಗೆ ‘ಡಿಡಿ ನ್ಯೂಸ್ ಲೈವ್’ ನಲ್ಲಿ ‘ಪಿಎಂ ನರೇಂದ್ರ ಮೋದಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ರಾಷ್ಟ್ರಪತಿ ಭವನದಲ್ಲಿ ಸ್ವಾಗತಿಸಿದರು’ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ಲಭ್ಯವಾಗಿದೆ. ಈ ವಿಡಿಯೋದಲ್ಲಿ ಮೋದಿಯವರು ಮೆಲೋನಿಯನ್ನು ಸ್ವಾಗತಿಸಿದ್ದು ಅಲ್ಲಿ ಅವರಿಬ್ಬರೂ ಹಸ್ತಲಾಘವ ಮಾಡಿದ್ದಾರೆ. ಆದರೆ ವಿಡಿಯೋವನ್ನು ಎಡಿಟ್ ಮಾಡಿ ಮೋದಿ ಇಟಲಿ ಪ್ರಧಾನಿಯವರ ಕೈಕುಲುಕಲು ಮುಂದಾದಾಗ ಅವರು ತಪ್ಪ ಎರಡು ಕೈಗಳನ್ನು ಎತ್ತಿ ನಮಸ್ಕರಿಸುತ್ತಾರೆ, ನಂತರ ಪುನಃ ಮೋದಿಯವರಿಗೆ ಹಸ್ತಲಾಘವ ಮಾಡುವುದು ಕಂಡುಬರುತ್ತದೆ.

ಮೋದಿಯವರು ಆರಂಭದಲ್ಲಿ ಮೆಲೋನಿಯವರನ್ನು ಕೈ ಕುಲುಕಿ ಸ್ವಾಗತಿಸುವ ದೃಶ್ಯವೂ ಈ ವಿಡಿಯೋದಲ್ಲಿದೆ. ವೈರಲ್ ಚಿತ್ರಕ್ಕೆ ಹೊಂದಿಕೆಯಾಗುವ ದೃಶ್ಯವನ್ನು ವೀಡಿಯೊದ 8:08 ನಿಮಿಷದ ಟೈಮ್‌ಸ್ಟ್ಯಾಂಪ್‌ನಲ್ಲಿ ನೋಡಬಹುದು. ಮೆಲೋನಿ ನಿರ್ಗಮಿಸುವಾಗ ತನ್ನ ಕೈಗಳನ್ನು ಮಡಚಿ ‘ನಮಸ್ತೆ’ ಎಂದು ಹೇಳಿದಾಗ ಮೋದಿ ಹಸ್ತಲಾಘವಕ್ಕಾಗಿ ಕೈ ನೀಡಿದರು. ಕ್ಷಣಾರ್ಧದಲ್ಲಿ ಇಬ್ಬರೂ ಪರಸ್ಪರ ಕೈಕುಲುಕುವ ದೃಶ್ಯಗಳನ್ನು ಕಾಣಬಹುದು. ಮೆಲೋನಿ ‘ನಮಸ್ತೆ’ ಎಂದು ಹೇಳುತ್ತಿರುವಾಗ ಮೋದಿ ಹಸ್ತಲಾಘವಕ್ಕಾಗಿ ಕೈ ನೀಡಿದ ನಿರ್ದಿಷ್ಟ ಸೆಕೆಂಡ್‌ನ ಚಿತ್ರವನ್ನು ಮೋದಿಯವರನ್ನು ಅವಮಾನಿಸಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ರಾಷ್ಟ್ರಪತಿ ಭವನದಲ್ಲಿ ಬರಮಾಡಿಕೊಳ್ಳುವಾಗ ಮತ್ತು ಅವರು ನಿರ್ಗಮಿಸುವಾಗ ಭಾರತದ ಪ್ರಧಾನಿ ನರೇಂದ್ರ ಮೋದಿ ಹಸ್ತಲಾಘವ ಮಾಡಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಆದರೆ ಕೆಲವು ಸೆಕೆಂಡುಗಳ ಟೈಮ್‌ಸ್ಟ್ಯಾಂಪ್‌ನಲ್ಲಿನ ಸ್ಕ್ರೀನ್‌ಗ್ರಾಬ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ..

ಕೃಪೆ: ಯೂಟರ್ನ್.ಇನ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಮೋದಿಯವರ ಅಂಚೆ ಚೀಟಿಯನ್ನು ಟರ್ಕಿ ಬಿಡುಗಡೆ ಮಾಡಿದ್ದು ಯಾವಾಗ ಮತ್ತು ಏಕೆ ಗೊತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights