ಮೆಡಿಕಲ್ ಸ್ಟೋರ್‌ನಲ್ಲಿ ಅಪ್ತಾಪ್ತೆಯ ಮೇಲೆ 17 ವರ್ಷದ ಬಾಲಕನಿಂದ ಅತ್ಯಾಚಾರ
ಕೋಚಿಂಗ್ ಕ್ಸಾಸ್ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ 13 ವರ್ಷದ ಬಾಲಕಿಯ ಮೇಲೆ 17 ವರ್ಷದ ಬಾಲಕನೊಬ್ಬ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ವರದಿಯಾಗಿದೆ.
ಮಂಗಳವಾರ ಸಂಜೆ ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಆರೋಪಿ ಬಾಲಕ ತನ್ನ ಕುಟುಂಬದ ಒಡೆತನದಲ್ಲಿರುವ ಮೆಡಿಕಲ್ ಸ್ಟೋರ್ ನಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.
ಟ್ಯೂಷನ್‌ಗೆ ತೆರಳಿದ್ದ ಬಾಲಕಿ ಮನೆಗೆ ವಾಪಸ್ ಬಾರದೇ ಇದ್ದಾಗ, ಆಕೆಯ ಕುಟುಂಬಸ್ಥರು ಬಾಲಕಿಯನ್ನು ಹುಡುಕಿಕೊಂಡು ಹೋಗಿದ್ದಾರೆ. ಆ ವೇಳೆ, ಬಾಲಕಿಯ ಸ್ನೇಹಿತರು ಆಕೆಯನ್ನು ಮೆಡಿಕಲ್ ಸ್ಟೋರ್ ಬಳಿ ನೋಡಿದ್ದಾಗಿ ತಿಳಿಸಿದ್ದಾರೆ. ಬಳಿಕ, ಆಕೆಯ ತಂದೆ ಮೆಡಿಕಲ್ ಸ್ಟೋರ್‌ಗೆ ಧಾವಿಸಿದ್ದಾರೆ.
ಸ್ಟೋರ್ ಮುಚ್ಚಿದ್ದನ್ನು ಗಮನಿಸಿದ ಆಕೆಯ ತಂದೆ, ಲೈಟ್ ಆನ್‌ಆಗಿರುವುದನ್ನು ನೋಡಿ, ಶೆಲ್ಟರ್ ಬಡಿದಿದ್ದಾರೆ. ಆಗ ಬಾಲಕ ಶೆಲ್ಟರ್ ತೆಗೆದಿದ್ದು, ತಮ್ಮ ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಆಕೆಯ ಬಟ್ಟೆ ಅಸ್ಥವ್ಯಸ್ಥವಾಗಿದ್ದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 328, 376, ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹೊಸ ವರ್ಷದ ವೇಳೆಗೆ ನೈಟ್ ಕರ್ಫ್ಯೂ, ಲಾಕ್‌ಡೌನ್?; ಸಿಎಂ ಬೊಮ್ಮಾಯಿ ಸ್ಪಷ್ಟನೆ