ದೆಹಲಿ: ರೈತ ಹೋರಾಟದ ಸ್ಥಳದಿಂದ ತಮ್ಮೂರಿಗೆ ತೆರಳುತ್ತಿದ್ದ ಇಬ್ಬರು ರೈತರು ಅಪಘಾತದಲ್ಲಿ ದುರ್ಮರಣ
ರೈತ ಹೋರಾಟ ಗೆಲುವು ಸಾಧಿಸಿದ ಸಂಭ್ರಮದೊಂದಿಗೆ ದೆಹಲಿಯ ಟಿಕ್ರಿ ಗಡಿಯಿಂದ ತಮ್ಮೂರಿನ ವಾಪಸ್ ತೆರಳುತ್ತಿದ್ದ ಇಬ್ಬರು ರೈತರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಹಿಸಾರ್ನ ರಾಷ್ಟ್ರೀಯ ಹೆದ್ದಾರಿ-9ರಲ್ಲಿ ದುರ್ಘಟನೆ ನಡೆದಿದೆ. ಪ್ರತಿಭಟನಾ ಸ್ಥಳದಿಂದ ರೈತರು ಧಂಡೂರು ಗ್ರಾಮದ ಬಳಿ ತೆರಳುತ್ತಿದ್ದ ವೇಳೆ ರೈತರ ಟ್ರಾಲಿಗೆ ಲಾರಿ ಡಿಕ್ಕಿ ಹೊಡೆದಿದೆ ಪರಿಣಾಮ, ಸುಖ್ದೇವ್ ಸಿಂಗ್, ಮತ್ತು ಅಜಯ್ಪ್ರೀತ್ ಸಿಂಗ್ ಸಾವನ್ನಪ್ಪಿದ್ದಾರೆ.
ಈ ಇಬ್ಬರೂ, ಪಂಜಾಬ್ನ ಮುಕ್ತಸರ್ ಜಿಲ್ಲೆಯ ಗಿಡ್ಡರ್ಬಹಾದ ಅಸ್ಸಾ ಬಟ್ಟರ್ ಗ್ರಾಮಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಸುಖ್ವಿಂದರ್ ಸ್ಥಳದಲ್ಲೇ ಮೃತಪಟ್ಟಿದ್ದು, ಅಜಯ್ಪ್ರೀತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಒಟ್ಟು ಏಳು ರೈತರು ಗಾಯಗೊಂಡಿದ್ದಾರೆ.
ಗ್ರಾಮದ ಮತ್ತೊಬ್ಬ ಯುವಕ ರಘಬೀರ್ ಸಿಂಗ್ ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದಾರೆ.