ಜಿಲ್ಲಾ ಪಂಚಾಯತ್‌ನಲ್ಲಿ ಹಿನ್ನೆಡೆ: ರಾಜಸ್ಥಾನ ಬಿಜೆಪಿಯಲ್ಲಿ ಹೆಚ್ಚಿದ ಬಿರುಕು!

ಕಳೆದ ತಿಂಗಳು ಜೈಪುರ ಪ್ರವಾಸದ ವೇಳೆ ಅಮಿತ್ ಶಾ ಅವರು ರಾಜಸ್ಥಾನ ಬಿಜೆಪಿಯಲ್ಲಿನ ಭಿನ್ನಮತವನ್ನು ನಿವಾರಿಸಲು ಪ್ರಯತ್ನ ನಡೆಸಿದ್ದರು. ಆದರೂ, ಅಲ್ಲಿನ ಬಿಜೆಪಿಯಲ್ಲಿ ಒಳಜಗಳ ಮುಂದುವರಿದಿದೆ.

ಇತ್ತೀಚೆಗಷ್ಟೇ ಬರನ್ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಪ್ರಮುಖ್ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಸರಿಸುಮಾರು ಸಮಾನ ಮತಗಳು ಬಂದರೂ, ಬಿಜೆಪಿ ಸದಸ್ಯರೊಬ್ಬರು ಮಾಡಿದ ಅಡ್ಡ ಮತದಾನದಿಂದಾಗಿ ಸಚಿವರ ಪತ್ನಿಯನ್ನು ಜಿಲ್ಲಾ ಪ್ರಮುಖರನ್ನಾಗಿ ಮಾಡುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಯಿತು.

ರಾಜ್ಯ ಬಿಜೆಪಿ ಘಟಕವು ತನಿಖೆಗಾಗಿ ಸಮಿತಿಯನ್ನು ರಚಿಸಿತ್ತು. ಆದರೆ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಪ್ರತಾಪ್ ಸಿಂಗ್ ಸಿಂಘ್ವಿ ಹಾಗೂ ವಸುಂಧರಾ ರಾಜೇ ಅವರ ಬೆಂಬಲಿಗರು ಸಮಿತಿಗೆ ರಾಜೀನಾಮೆ ನೀಡಿದರು. ರಾಜೇ ಮತ್ತು ಆಕೆಯ ಪುತ್ರ ದುಶ್ಯಂತ್ ಸಿಂಗ್ ಅವರನ್ನು ಗುರಿಯಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರೆಲ್ಲರೂ ಆರೋಪಿಸಿದ್ದಾರೆ.

ನಾಲ್ಕು ಜಿಲ್ಲೆಗಳ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಳಗಳಲ್ಲಿ ಬಹುಮತ ಪಡೆದಿತ್ತು. ಆದರೆ ಜಿಲ್ಲಾಧ್ಯಕ್ಷ ಹುದ್ದೆ ಸಿಕ್ಕಿದ್ದು ಒಂದೇ ಒಂದು ಸ್ಥಳದಲ್ಲಿ ಮಾತ್ರ. ಕಾಂಗ್ರೆಸ್ ಕೂಡ ಎರಡು ಜಿಲ್ಲೆಗಳಲ್ಲಿ ಬಹುಮತ ಹೊಂದಿದ್ದರೂ ಮೂರರಲ್ಲಿ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

ಅಡ್ಡ ಮತದಾನವನ್ನು ಬಿಜೆಪಿ ರಾಜ್ಯ ಘಟಕ ಗಂಭೀರವಾಗಿ ಪರಿಗಣಿಸಿದೆ. ತನಿಖಾ ಸಮಿತಿಯನ್ನು ರಚಿಸುವುದನ್ನು ಹೊರತುಪಡಿಸಿ, ಇಬ್ಬರು ಅಧಿಕಾರಿಗಳನ್ನು ಬರನ್‌ಗೆ ಕಳುಹಿಸಲಾಗಿದೆ. ಕಾಂಗ್ರೆಸ್‌ಗೆ ಮತ ಹಾಕಿದ ಸದಸ್ಯರ ಹೆಸರು ಹುಡುಕಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ವಸುಂಧರಾ ವಿರೋಧಿ ಬಣದ ನೇತೃತ್ವ ವಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಮಾತನಾಡಿ, ಪಕ್ಷಕ್ಕೆ ಮೋಸ ಮಾಡುವವರನ್ನು ಸಾರ್ವಜನಿಕರು ಗಮನಿಸುತ್ತಾರೆ. ನಂತರ ದೇವರು ಮತ್ತು ಪಕ್ಷವು ಅವರನ್ನು ಗಮನಿಸುತ್ತದೆ. ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 2021ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ 31,000 ದೂರುಗಳನ್ನು ಸ್ವೀಕರಿಸಲಾಗಿದೆ; ಉತ್ತರ ಪ್ರದೇಶದಲ್ಲೇ ಅರ್ಧಕ್ಕಿಂತ ಹೆಚ್ಚು: NCW

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights