ಪ್ರಧಾನಿಯನ್ನೇ ಬದಲಿಸದ ನಾವು ಸಿಎಂ ಬದಲಿಸುತ್ತೇವಾ?: ಪ್ರತಾಪ್ ಸಿಂಹ

ನಾವು ಪ್ರಧಾನಿಯನ್ನೇ ಬಲಿಸಲಿಲ್ಲ. ಇನ್ನು ಮುಖ್ಯಮಂತ್ರಿಯನ್ನು ಬದಲಾಯಿಸುತ್ತೇವೆಯೇ ಎಂದು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಮೈಸೂರಿನಲ್ಲಿ ಹೇಳಿದ್ದಾರೆ.

ಸಿಎಂ ಬದಲಾವಣೆಯ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಆಗಿದ್ದಾಗ ವಾಜಪೇಯಿ ಅವರಿಗೆ ಕೂಡ ಎರಡು ಮಂಡಿ‌ಗಳಲ್ಲೂ ನೋವಿತ್ತು. ಆಗ ನಾವು ಪ್ರಧಾನಿಯನ್ನೇ ಬದಲಿಸಿರಲಿಲ್ಲ. ಇನ್ನೂ ಮಂಡಿ ನೋವಿನ ಕಾರಣಕ್ಕೆ ಸಿಎಂ ಬದಲಾಯಿಸುತ್ತೇವಾ?  ಅವರ ಮಂಡಿ ನೋವಿಗೆ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದ್ದಾರೆ.

ವಿಧಾನಸಭೆ ಕಟ್ಟಡದಲ್ಲಿ ವಾಸ್ತುದೋಷವಿದೆ. 223 ಶಾಸಕರಿಗೂ ನಾನು ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇರುತ್ತದೆ. ಹೀಗಾಗಿ ಇಂಥ ಮಾತುಗಳು ಕೇಳಿ ಬರುತ್ತವೆ. ಸಿಎಂ ಬದಲಾವಣೆಯ ಮಾತೇ ಇಲ್ಲ ಎಂದು ಅವರು ಹೇಳಿದ್ದಾರೆ.

ಮತಾಂತರ ನಿಷೇಧ ಮಸೂದೆ ಬಗ್ಗೆ ಮಾತನಾಡಿದ ಅವರು, ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಕಾಯ್ದೆಯನ್ನು ವಾಪಸ್‌ ಪಡೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಇಂತಹ ಮನಸ್ಥಿತಿಯಿಂದಲೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಆದರೆ, ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯಲ್ಲಿ ಭಿನ್ನಮತ: ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ರಾಜೀನಾಮೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights