FACT CHECK | ಹಿಮಾಚಲ ಪ್ರದೇಶ ಶಿವಲಿಂಗವನ್ನು ಧ್ವಂಸ ಮಾಡಿದ್ದು ಮುಸ್ಲಿಮರಲ್ಲ? ಮತ್ತ್ಯಾರು ಗೊತ್ತೇ?
ಹಿಮಾಚಲ ಪ್ರದೇಶದ ಕಾಂಗಡಾದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಘಟನೆಯೊಂದು ಬೆಳಕಿಗೆ ಬಂದಿದೆ. ಕೆಲವು ಹಿಂದೂ ದ್ವೇಷಿಗಳು ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ನಗ್ರೋಟಾದಲ್ಲಿನ ದೇವಸ್ಥಾನವೊಂದರಲ್ಲಿ ಶಿವಲಿಂಗವನ್ನು ಧ್ವಂಸ ಮಾಡಿ ಚರಂಡಿಗೆ ಎಸೆಯುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೃತ್ಯ ಎಸಗಿದ್ದಾರೆ ಎಂದು ಇದನ್ನು ಮುಸ್ಲಿಮರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Himachal Pradesh: A Shivling is vandalised by miscreants.
Such News were not common in Devbhoomi Himachal Pradesh but now it will become a new normal.
Demographic change is real & scary.. pic.twitter.com/mlK1Uajoys
— Mr Sinha (@MrSinha_) September 27, 2024
“ಹಿಮಾಚಲ ಪ್ರದೇಶ: ಶಿವಲಿಂಗವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಇಂತಹ ಸುದ್ದಿಗಳು ಸಾಮಾನ್ಯವಾಗಿರಲಿಲ್ಲ ಆದರೆ ಈಗ ಅದು ಸಾಮಾನ್ಯವಾಗುತ್ತದೆ. ಜನಸಂಖ್ಯಾ ಬದಲಾವಣೆಯು ನಿಜವಾಗಿಯೂ ಭಯಾನಕವಾಗಿದೆ. ” ಎಂದು ಪ್ರತಿಪಾದಿಸಿ ಮಿ.ಸಿನ್ಹ (@MrSinha_) ಎಂಬ ಬಲಪಂಥೀಯ ಬೆಂಬಲಿತ ಸಾಮಾಜಿಕ ಮಾಧ್ಯಮ ಬಳಕೆದಾರ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
हिमाचल प्रदेश में
20 साल पुराने शिवलिंग को तोड़ दिया…देवभूमि ऐसे राक्षसों से बची हुईं थी
लेकिन जबसे दरिंदों नें वहां अपनी गन्दी नज़र
डाली तबसे इस तरह की घटनायें बढ़ गयीं हैंहिमाचल वालों.. जबतक एक एक राक्षस को सबक न मिले तबतक रुकना नहीं, जरूरत पड़ी तो पूरा देश साथ है✊ pic.twitter.com/1Lrt93GULr
— Deepak Sharma (@SonOfBharat7) September 27, 2024
ದೀಪಕ್ ಶರ್ಮಾ (@SonOfBharat7) ಎಂಬ ಮತ್ತೊಬ್ಬ X ಬಳಕೆದಾರ ವಿಡಿಯೋ ಕ್ಲಿಪ್ ಅನ್ನು ಟ್ವೀಟ್ ಮಾಡಿ ಹೀಗೆ ಬರೆದಿದ್ದಾರೆ, “ಹಿಮಾಚಲ ಪ್ರದೇಶದಲ್ಲಿ 20 ವರ್ಷದ ಶಿವಲಿಂಗ ಒಡೆಯಿತು… ದೇವಭೂಮಿ ಅಂತಹ ರಾಕ್ಷಸರಿಂದ ಮುಕ್ತವಾಗಿತ್ತು ಆದರೆ ಇತ್ತೀಚೆಗೆ ಮೃಗಗಳು ಅಲ್ಲಿ ತಮ್ಮ ದುಷ್ಟ ಕಣ್ಣುಗಳನ್ನು ಬಿಟ್ಟಿವೆ. ಹಿಮಾಚಲದ ಜನರೇ.. ಪ್ರತಿ ರಾಕ್ಷಸರಿಗೂ ತಕ್ಕ ಪಾಠ ಕಲಿಸುವವರೆಗೆ ವಿಶ್ರಮಿಸಬೇಡಿ, ಈ ಕೆಲಸಕ್ಕಾಗಿ ಇಡೀ ದೇಶವೇ ನಿಮ್ಮೊಂದಿದೆ ನಿಲ್ಲುತ್ತದೆ”. ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಶುಕ್ರವಾರ ಸಂಭವಿಸಿದ ಈ ಘಟನೆಯಿಂದಾಗಿ ಆಕ್ರೋಶವನ್ನು ಹುಟ್ಟುಹಾಕಿತು, ಹಲವಾರು ಹಿಂದುತ್ವ ಸಂಘಟನೆಗಳು ಗಾಂಧಿ ಮೈದಾನದಲ್ಲಿ ಜಮಾಯಿಸಿ ಶಿವಲಿಂಗವನ್ನು ಮತ್ತೊಂದು ಸಮುದಾಯದ ವ್ಯಕ್ತಿಗಳು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿದರು. ಬಲಪಂಥೀಯ ಗುಂಪುಗಳು ಮಾರುಕಟ್ಟೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ಬಾಡಿಗೆಗೆ ಪಡೆದ ಅಂಗಡಿಗಳನ್ನು ತೆರವುಗೊಳಿಸಲು ಒತ್ತಾಯಿಸಿದ್ದರು ಎಂದು ವರದಿಯಾಗಿದೆ, ವಿಧ್ವಂಸಕ ಕೃತ್ಯವನ್ನು ಮುಸ್ಲಿಮರು ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡಲಾಗಿದೆ.
ಹಾಗಿದ್ದರೆ ಶಿವಲಿಂಗವನ್ನು ಧ್ವಂಸ ಮಾಡಿದ ಪ್ರಕರಣದಲ್ಲಿ ಮುಸ್ಲಿಮರು ಭಾಗಿಯಾಗಿದ್ದಾರೆಯೇ, ಪೊಲೀಸರ ತನಿಖೆ ಏನನ್ನು ಹೇಳುತ್ತವೆ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಆಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಹಿಮಾಚಲ ಪ್ರದೇಶ ಪೊಲೀಸರು ಈ ಕುರಿತು ನೀಡಿರುವ ಹೇಳಿಕೆ ಲಭ್ಯವಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆಯ ಸಮಯದಲ್ಲಿ, ಪೊಲೀಸರು ದೇವಾಲಯದ ಸಮೀಪದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮುಂಜಾನೆ 3:00 ಗಂಟೆಯ ಸುಮಾರಿಗೆ ಮಹಿಳೆಯೊಬ್ಬರು ಆವರಣಕ್ಕೆ ಪ್ರವೇಶಿಸುವ ಮತ್ತು ನಿರ್ಗಮಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ಅವರು ಆರೋಪಿ ನಿಶಾ ದೇವಿಯು ದೃಶ್ಯಗಳಲ್ಲಿ ಕಂಡುಬರುವ ವ್ಯಕ್ತಿ ಎಂದು ಹೇಳಿದರು. ಆಕೆ ಈ ಹಿಂದೆಯೂ ಇದೇ ರೀತಿಯ ವಿಧ್ವಂಸಕ ಘಟನೆಗಳಲ್ಲಿ ಭಾಗಿಯಾಗಿದ್ದಳು ಎಂದು ಅಧಿಕಾರಿಗಳು ಗಮನಿಸಿದ್ದಾರೆ ಮತ್ತು ಅವಳು ಮಾನಸಿಕವಾಗಿ ಭಿನ್ನಾಭಿಪ್ರಾಯ ಹೊಂದಿದ್ದಾಳೆ ಎಂದು ಹೇಳಿದ್ದಾರೆ.
ಅನಂತ್ ಜ್ಞಾನ್ ಎಂಬ ಸ್ಥಳೀಯ ಹಿಂದಿ ಮಾಧ್ಯಮವೊಂದು ಸೆಪ್ಟೆಂಬರ್ 27, 2024 ರ ಸಿಸಿಟಿವಿ ದೃಶ್ಯಾವಳಿಗಳನ್ನು ಅಪ್‌ಲೋಡ್ ಮಾಡಿದೆ, ಅಲ್ಲಿ ಶಾಲು ಹೊದಿಸಿದ ವ್ಯಕ್ತಿಯೊಬ್ಬರು ಮಧ್ಯರಾತ್ರಿ 03:39 ರಿಂದ 03:44 ರವರೆಗೆ ದೇವಸ್ಥಾನದ ಒಳಗೆ ಮತ್ತು ಹೊರಗೆ ಹೋಗುತ್ತಿರುವುದನ್ನು ಗುರುತಿಸಲಾಗಿದೆ. “ನಗ್ರೋಟಾದಲ್ಲಿ ಶಿವಲಿಂಗಕ್ಕೆ ಹಾನಿ ಮಾಡುವ ವ್ಯಕ್ತಿ ಮಹಿಳೆ” ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ.
ಹಿಮಾಚಲದ ಪಂಜಾಬ್ ಕೇಸರಿ ಸುದ್ದಿ ವರದಿ ಲಭ್ಯವಾಗಿದೆ, “ಕಳೆದ ಗುರುವಾರ ರಾತ್ರಿ ಗಾಂಧಿ ಮೈದಾನದ ಬಳಿ ಶಿವಲಿಂಗವನ್ನು ಒಡೆದ ಪ್ರಕರಣದಲ್ಲಿ ಪೊಲೀಸರು ದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಪೊಲೀಸರು ಆರೋಪಿ ಮಹಿಳೆಯನ್ನು ಒಂದು ದಿನದ ನಂತರ ಯೋಲ್ ಬಳಿ ಬಂಧಿಸಿದ್ದಾರೆ. ಆರೋಪಿ ಮಹಿಳೆಯನ್ನು ನಿಶಾದೇವಿ ಎಂದು ಗುರುತಿಸಲಾಗಿದ್ದು, ಅವರು ಯೋಲ್ ಕಡೆಗೆ ಹೋಗುತ್ತಿದ್ದರು. ಮಹಿಳೆಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಪೊಲೀಸರು ತಿಳಿಸಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದ ಮಹಿಳೆ ಅದೇ ಬಟ್ಟೆಯನ್ನು ಧರಿಸಿ ಕೈಯಲ್ಲಿ ಅದೇ ಚೀಲವನ್ನು ಹಿಡಿದಿರುವುದು ಪೊಲೀಸರಿಗೆ ಕಂಡುಬಂದಿದೆ, ಹಾಗಾಗಿ ಈ ಮಹಿಳೆಯ ಮೇಲೆ ಪೊಲೀಸರಿಗೆ ಅನುಮಾನ ಬಂದು ವಿಚಾರಿಸಿದಾಗ ಈ ಮಹಿಳೆಯೇ ಕೃತ್ಯ ಎಸಗಿರುವುದು ದೃಢಪಟ್ಟಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಹಿಮಾಚಲ ಪ್ರದೇಶದ ಕಾಂಗ್ರಾದ ದೇವಸ್ಥಾನದಲ್ಲಿ ಶಿವಲಿಂಗವನ್ನು ಅಪವಿತ್ರಗೊಳಿಸಿದ ವ್ಯಕ್ತಿ 35 ವರ್ಷದ ನಿಶಾ ದೇವಿ ಎಂಬ ಮಾನಸಿಕ ಅಸ್ವಸ್ಥ ಮಹಿಳೆ ಎಂದು ಗುರುತಿಸಲಾಗಿದೆ. ಆದರೆ ಕೆಲವು ಬಲಪಂಥೀಯ ಪ್ರತಿಪಾದಕ ಹಿಂದೂ ಸಂಘಟನೆಗಳು ಘಟನೆಗೆ ಕೋಮು ಬಣ್ಣ ಬಳಿದು ಮುಸ್ಲಿಮರು ಕಾರಣ ಎಂದು ಸುಳ್ಳು ಸುದ್ದಿ ಹಬ್ಬಿಸಲು ಪ್ರಯತ್ನಿಸಿದ್ದಾರೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕಾರು ಅಪಘಾತದಲ್ಲಿ ಸಾವನಪ್ಪಿದ್ದಾರೆ ಎಂದು ಸುಳ್ಳು ಪೋಸ್ಟ್ ಹಂಚಿಕೆ