ಜೀನ್ಸ್‌ ಧರಿಸಲ್ಲ, ಡ್ಯಾನ್ಸ್ ಮಾಡಲ್ಲ ಎಂದ ಪತ್ನಿ; ಡಿವೋರ್ಸ್‌‌ ಕೊಟ್ಟು ಬೆಂಕಿ ಹಚ್ಚಿಕೊಂಡ ಗಂಡ!

ಇತ್ತೀಚೆಗೆ ವಿಚ್ಛೇದನ ನೀಡಲು ಶುಲ್ಲಕ ಕಾರಣಗಳೇ ಸಾಕು ಎಂಬಂತಾಗಿದೆ. ಚಿಕ್ಕ-ಪುಟ್ಟ ವಿಚಾರಗಳಲ್ಲಿ ಪತಿ-ಪತ್ನಿಯರ ನಡುವೆ ಸಾಮ್ಯತೆ ಬಾರದ ಕಾರಣಕ್ಕೆ ವಿಚ್ಚೇದನ ಪ್ರಕರಣಗಳೂ ಹೆಚ್ಚಾಗುತ್ತಿವೆ. ಅಂತದ್ದೇ ಒಂದು ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಅನಾಸ್‌ ಎಂಬಾತ ತನ್ನ ಪತ್ನಿ ತಾನು ಜೀನ್ಸ್‌ ತರದ ಮಾಡ್ರನ್‌ ಬಟ್ಟೆಗಳನ್ನು ಧರಿಸುವುದಲ್ಲ ಮತ್ತು ಡ್ಯಾನ್ಸ್ ಮಾಡಲು ಬರುವುದಿಲ್ಲ. ಹಾಗಾಗಿ ತಾನು ಡಾನ್ಸ್‌ ಮಾಡಲ್ಲ ಎಂದು ಹೇಳಿದ್ದು, ಆ ಕಾರಣಕ್ಕೆ ಆತ ತನ್ನ ಪತ್ನಿಗೆ ತಲಾಖ್‌ ಕೊಟ್ಟು, ಮನೆಯಲ್ಲಿ ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ.

ಅನಾನ್‌ ತನ್ನ ಪತ್ನಿಗೆ ಮಾಡ್ರನ್‌ ಬಟ್ಟೆಗಳನ್ನು ಧರಿಸಬೇಕು, ಡ್ಯಾನ್ಸ್‌ ಮಾಡಬೇಕು ಎಂದು ಒತ್ತಾಯಿಸಿದ್ದಾನೆ. ಆಕೆ ಅದಕ್ಕೆ ನಿರಾಕರಿಸಿದ್ದು, ಈತ ಆಕೆಗೆ ತಲಾಖ್‌ ನೀಡಿದ್ದಾನೆ. ಅಲ್ಲದೆ, ಕೋಪದಲ್ಲಿ ಮನೆಗೆ ಹೋಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ! ಆತನ ಕುಟುಂಬಸ್ಥರು ಮತ್ತು ಸ್ಥಳೀಯರು ಆತನನ್ನು ಬೆಂಕಿಯಿಂದ ಕಾಪಾಡಿದ್ದಾರೆ.

ಇದನ್ನೂ ಓದಿ: ಜ.01 ರಿಂದ ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್‌ ಕಡ್ಡಾಯ; ಮಿಸ್‌ ಮಾಡಿದ್ರೆ ಎರಡರಷ್ಟು ದಂಡ!

ಅನಾಸ್ ಎಂಬಾತ 8 ವರ್ಷಗಳ ಹಿಂದೆ ಅಮೀರುದ್ದೀನ್ ಎಂಬುವವರ ಮಗಳನ್ನು ಮದುವೆಯಾಗಿದ್ದ. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಅನಾಸ್​ ತನ್ನೊಂದಿಗೆ ಹೆಂಡತಿಯನ್ನೂ ಕರೆದುಕೊಂಡು ಹೋಗಿದ್ದ. ಆಕೆಗೆ ಡ್ಯಾನ್ಸ್​ ಮಾಡಲು, ಹಾಡಲು ಒತ್ತಾಯ ಮಾಡುತ್ತಿದ್ದ. ಆದರೆ, ಆಕೆಗೆ ಇದೆಲ್ಲ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರಿಗೂ ಮನಸ್ತಾಪ ಉಂಟಾಗಿತ್ತು.

2 ದಿನಗಳ ಹಿಂದೆ ಇದೇ ಕಾರಣಕ್ಕೆ ಅನಾಸ್ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದ. ಬಳಿಕ ತನ್ನ ಮನೆಗೆ ಹೋಗಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಆತ ಬೆಂಕಿ ಹಚ್ಚಿಕೊಂಡಿದ್ದಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಹತ್ಯೆಗೆ ಸಂಚು? ಒಬ್ಬನ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights