ದೇಶದಲ್ಲಿ 30,549 ಹೊಸ ಕೊರೊನಾ ಕೇಸ್ ಪತ್ತೆ : 422 ಜನ ಬಲಿ!

ದೇಶದಲ್ಲಿ 30,549 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು 422 ಜನ ಬಲಿಯಾಗಿದ್ದಾರೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾದ ಒಟ್ಟು 30,549 ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಕೇರಳದಲ್ಲಿ 13,984 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 4,869 ಪ್ರಕರಣಗಳು, ತಮಿಳುನಾಡು 1,957, ಆಂಧ್ರ ಪ್ರದೇಶ 1,546  ಮತ್ತು ಕರ್ನಾಟಕದಲ್ಲಿ 1,285 ಪ್ರಕರಣಗಳನ್ನು ದಾಖಲಾಗಿದೆ.

ಹೊಸದಾಗಿ ದಾಖಲಾದ 422 ಸಾವುಗಳಲ್ಲಿ, ಕೇರಳದಿಂದ (118) ಗರಿಷ್ಠ ಸಾವುನೋವುಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 90 ಸಾವುಗಳು ಸಂಭವಿಸಿವೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 38,887 ರೋಗಿಗಳು ಚೇತರಿಸಿಕೊಂಡಿದ್ದು, ದೇಶಾದ್ಯಂತ ಒಟ್ಟು ಗುಣಮುಖರಾದವರ ಸಂಖ್ಯೆ 3,08,96,354 ಕ್ಕೆರಿಕೆಯಾಗಿದೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 4,04,958 ರಷ್ಟಿದ್ದು, ಕಳೆದ 24 ಗಂಟೆಗಳಲ್ಲಿ, ಸಕ್ರಿಯ ಪ್ರಕರಣಗಳು 8,760 ರಷ್ಟು ಕಡಿಮೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತ ಒಟ್ಟು 61,09,587 ಡೋಸ್‌ಗಳನ್ನು ನೀಡಿದ್ದು, ಈವರೆಗೆ ಒಟ್ಟು 47,85,44,114 ಡೋಸ್‌ಗಳನ್ನು ನೀಡಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 16,49,295 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights