ನನಗೆ ಕೊರೊನಾ ವೈರಸ್‌ ಕಂಡರೆ, ಅದನ್ನುದೇವೇಂದ್ರ ಫಡ್ನವೀಸ್‌ ಬಾಯಿಗೆ ಹಾಕುತ್ತೇನೆ: ಶಿವಸೇನಾ ಶಾಸಕ

ರೆಮ್‌ಡೆಸಿವಿರ್ ಪೂರೈಕೆಯ ಬಗ್ಗೆ ಶಿವಸೇನಾ ಮತ್ತು ಬಿಜೆಪಿ ನಡುವೆ ವಾಕ್‌ಸಮರ ನಡೆಯುತ್ತಿದೆ. ಈ ಮಧ್ಯೆ, ತಮಗೆ ಕೊರೊನಾ ವೈರಸ್‌ ಸಿಕ್ಕರೆ ಅದನ್ನು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಅವರ ಬಾಯಿಗೆ ಹಾಕುವುದಾಗಿ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್‌ ಹೇಳಿದ್ದಾರೆ. ಇದು ಮಹಾರಾಷ್ಟ್ರ ಬಿಜೆಪಿ ಪ್ರತಿಭಟನೆಗೆ ನಾಂದಿ ಹಾಡಿದೆ.

COVID-19 ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚಿನ ಬೇಡಿಕೆಯಿರುವ ರೆಮ್‌ಡೆಸಿವಿರ್‌ ಲಸಿಕೆಗಳನ್ನು ಶೇಖರಿಸಿ ಇಟ್ಟುಕೊಳ್ಳಲಾಗಿದೆ ಎಂದು ಆರೋಪಿಸಿ ಫಾರ್ಮಾ ಕಂಪನಿಯ ಉನ್ನತ ಕಾರ್ಯನಿರ್ವಾಹಕರೊಬ್ಬರನ್ನು ಮಹಾರಾಷ್ಟ್ರ ಪೊಲೀಸರು ವಿಚಾರಣೆ ನಡೆಸಿದ್ದರು. ಇದಕ್ಕೆ ಮಾಜಿ ಮುಖ್ಯಮಂತ್ರಿ ಫಡ್ನವೀಸ್‌ ಆಕ್ಷೇಪ ವ್ಯಕ್ತಪಡಿಸಿದ್ದರು.

ಅವರ ಆಕ್ಷೇಪವನ್ನು ಗುರಿಯಾಗಿಸಿಕೊಂಡಿರುವ ಆಡಳತಾರೂಢ ಶಿವಸೇನಾ, ಫಡ್ನವೀಸ್‌ ವಿರುದ್ದ ವಾಗ್ದಾಳಿ ನಡೆಸಿದೆ. ಫಡ್ನವೀಸ್‌ ನಡೆಯನ್ನು ಪ್ರಶ್ನಿಸಿರುವ ಗಾಯಕ್ವಾಡ್‌ ಸಾಂಕ್ರಾಮಿಕ ರೋಗ ಹರಡುತ್ತಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಫಡ್ನವೀಸ್‌ ಮುಖ್ಯಮಂತ್ರಿಯಾಗಿದ್ದರೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಬಿಜೆಪಿ ನಾಯಕರು ರಾಜ್ಯದಲ್ಲಿ ಸಚಿವರನ್ನು ಬೆಂಬಲಿಸುವ ಬದಲು, ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಸರ್ಕಾರವು ಹೇಗೆ ವಿಫಲವಾಗುತ್ತದೆ ಎಂಬುದುನ್ನು ಎದುರು ನೋಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸಾಂಕ್ರಾಮಿಕ ಮತ್ತು ರೆಡ್ಡೆಸಿವಿರ್ ಚುಚ್ಚುಮದ್ದಿನ ವಿತರಣೆಯ ಬಗ್ಗೆ ಫಡ್ನವಿಸ್ ಹಾಗೂ ಬಿಜೆಪಿ ಮುಖಂಡರಾದ ಪ್ರವೀಣ್ ದಾರೇಕರ್ ಮತ್ತು ಚಂದ್ರಕಾಂತ್ ಪಾಟೀಲ್ ಅವರು ಸಣ್ಣ ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ, ಒಂದುವೇಳೆ ನನಗೆ ಕೊರೊನಾ ವೈರಸ್‌ ಕಂಡರೆ, ಅದನ್ನು ದೇವೇಂದ್ರ ಫಡ್ನವೀಸ್‌ ಅವರ ಬಾಯಿಗೆ ಹಾಕುತ್ತೇನೆ ಎಂದು ಗಾಯಕ್ವಾಡ್‌ ಹೇಳಿದ್ದಾರೆ.

ರಾಜ್ಯಕ್ಕೆ ಔಷಧಿ ಸರಬರಾಜು ಮಾಡದಂತೆ ಮಹಾರಾಷ್ಟ್ರದ ರೆಮ್‌ಡೆಸಿವಿರ್ ಉತ್ಪಾದನಾ ಕಂಪನಿಗಳಿಗೆ  ಕೇಂದ್ರ ಸರ್ಕಾರ ತಾಕೀತು ಮಾಡಿದೆ. ಅವರು ಮಹಾರಾಷ್ಟ್ರಕ್ಕೆ ಅಗತ್ಯವಾದ ವೈದ್ಯಕೀಯ ಆಮ್ಲಜನಕವನ್ನು ಸಹ ನೀಡುತ್ತಿಲ್ಲ ಎಂದು ಗೈಕ್ವಾಡ್ ಆರೋಪಿಸಿದ್ದಾರೆ.

ಅವರು ಗುಜರಾತ್‌ಗೆ ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ನೀಡುತ್ತಿದ್ದಾರೆ ಮತ್ತು ಮಹಾರಾಷ್ಟ್ರದ ಬಿಜೆಪಿ ಕಚೇರಿಯಿಂದ 50,000 ಔಷಧದ ಬಾಟಲುಗಳನ್ನು ಆ ರಾಜ್ಯಕ್ಕೆ ಉಚಿತವಾಗಿ ಪೂರೈಸುತ್ತಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಜನರು ಸಾಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.

“ಇಂತಹ ರಾಜಕೀಯವನ್ನು ಕೇಂದ್ರ ಸರ್ಕಾರ ಮತ್ತು ಫಡ್ನವೀಸ್ ಮಾಡುತ್ತಿದ್ದಾರೆ. ರಾಜಕೀಯ ಮಾಡಲು ಇದು ಸಮಯವೇ? ಕೇಂದ್ರ ಮತ್ತು ಫಡ್ನವೀಸ್‌ ತಮ್ಮ ಕೃತ್ಯಗಳಿಗೆ ನಾಚಿಕೆಪಡಬೇಕು” ಎಂದು ಅವರು ಹೇಳಿದ್ದಾರೆ.

ಗೈಕ್ವಾಡ್ ಅವರ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಭಾನುವಾರ ಬುಲ್ಖಾನಾದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದ್ದು, ಅವರ ಭಾವಚಿತ್ರಗಳನ್ನು ಸುಟ್ಟುಹಾಕಿದ್ದಾರೆ.

ಇದನ್ನೂ ಓದಿ: ದೆಹಲಿಗೆ ಮೀಸಲಿದ್ದ ಆಕ್ಸಿಜನ್ ಕೊಡದೆ ಕೇಂದ್ರದಿಂದ ವಂಚನೆ : ಕೇಜ್ರಿವಾಲ್ ಗಂಭೀರ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights