ಕೊರೊನಾ ಉಲ್ಬಣಕ್ಕೆ ಮೋದಿಯೇ ಕಾರಣ; ಮೋದಿ ರಾಜೀನಾಮೆಗೆ ಆಗ್ರಹಿಸಿ ಟ್ವಿಟರ್‌ ಟ್ರೆಂಡಿಂಗ್‌!

ಕೊರೊನಾ ಎರಡನೇ ಅಲೆಯಿಂದ ಇಡೀ ದೇಶವೇ ತತ್ತರಿಸಿ ಹೋಗುತ್ತಿದೆ. ಹಲವು ರಾಜ್ಯಗಳು ಇಂದಿನಿಂದ ಲಾಕ್‌ಡೌನ್‌, ಕರ್ಫ್ಯೂಗಳಂತ ಕಟ್ಟುನಿಟ್ಟಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ, ಪ್ರಧಾನಿ ಮೋದಿ ಅವರು ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಇದು ಅವರ ಅಸಮರ್ಥತೆಯನ್ನು ಪ್ರದರ್ಶಿಸುತ್ತದೆ. ದೇಶದಲ್ಲಿ ಕೊರೊನಾ ಉಲ್ಬಣಗೊಳ್ಳಲು ಮೋದಿಯವರೇ ಕಾರಣ. ಹಾಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಜನರು ಟ್ವಿಟರ್ ನಲ್ಲಿ ಆಗ್ರಹಿಸುತ್ತಿದ್ದಾರೆ.

#ResignModi (‘ಮೋದಿ ರಾಜೀನಾಮೆ ನೀಡಿ’) ಎಂಬ ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ನಂ 1 ಸ್ಥಾನದಲ್ಲಿ‌ ಟ್ರೆಂಡಿಂಗ್‌ ಆಗುತ್ತಿದೆ. ನೆಟ್ಟಿಗರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವನ್ನು ತರಾಟೆಗೆ ತೆಗೆದುಕೊಂಡಿದ್ದು, ದುರ್ಬಲ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ.

ಗಗನಕ್ಕೇರುತ್ತಿರುವ ಕೋವಿಡ್ -19 ಪ್ರಕರಣಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಾರಣರಾಗಿದ್ದಾರೆ. ಅವನು ಜವಾಬ್ದಾರಿಯುತ ಸ್ಥಾನದಲ್ಲಿದ್ದರು ಅವರ ಬಳಿ ಯಾವುದೇ ಯೋಜನೆ ಇಲ್ಲ, ಆಡಳಿತಾತ್ಮಕ ಸಾಮರ್ಥ್ಯಗಳಿಲ್ಲ. ಅವರು ಮುಂದಾಲೋಚನೆ ಮಾಡಲಿಲ್ಲ ಮತ್ತು ಯಾರಿಗೂ ಹಾಗೆ ಮಾಡಲು ಅವರು ಅವಕಾಶ ನೀಡಲಿಲ್ಲ. ಸಂಪೂರ್ಣ ಅಸಮರ್ಥ ವ್ಯಕ್ತಿಯಾದ ಅವರು ರಾಜೀನಾಮೆ ನೀಡಬೆಕು ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

“ಇಂದಿನ ತೀವ್ರ ಬಿಕ್ಕಟ್ಟಿಗೆ ಮೋದಿ ರಾಜೀನಾಮೆ ನೀಡಿ ಎಂದು ಕೇಳುವುದು ಸರಿಯಾದ ಪ್ರತಿಕ್ರಿಯೆಯಾಗಿದೆ. ನರೇಂದ್ರ ಮೋದಿಯವರು ಕೋವಿಡ್ ಬಿಕ್ಕಟ್ಟು ಮುಗಿದಿದೆ ಎಂದು ನಂಬಿ ನಮ್ಮ ಲಸಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಯುದ್ದೋಪಾದಿಯಲ್ಲಿ ಆಮ್ಲಜನಕ, ಔಷಧಿಗಳು ಮತ್ತು ಐಸಿಯುಗಳನ್ನು ಸಜ್ಜುಗೊಳಿಸಿಕೊಂಡು ಎರಡನೇ ಅಲೆಗೆ ಅವರು ಸಿದ್ದತೆ ನಡೆಸಿರಲಿಲ್ಲ” ಎಂದು ಪತ್ರಕರ್ತ ಶಿವಂ ವಿಜ್ ಟ್ವೀಟ್‌ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಾಮಾಜಿಕ ಕಾರ್ಯಕರ್ತೆ ಮತ್ತು ಲೇಖಕಿ ಮೀನಾ ಕಂದಸ್ವಾಮಿ ಟ್ವೀಟ್ ಮಾಡಿ “ತಮಿಳುನಾಡಿನಲ್ಲಿ ಆರಂಭವಾದರೆ ಅದು ರಾಷ್ಟ್ರಕ್ಕೆ ವ್ಯಾಪಿಸುತ್ತದೆ. ಈ ಪ್ರಧಾನಿ ಮುಂದುವರಿದರೆ, ನಮ್ಮ ರಾಷ್ಟ್ರವು ಕೆಟ್ಟ ದುಃಸ್ವಪ್ನಗಳನ್ನು ಮೀರಿ ವಿಪತ್ತಿನಲ್ಲಿ ಮುಳುಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮೋದಿಯವರ ದುರ್ಬಲ ಆಡಳಿತದಿಂದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಉಂಟಾಗಿದೆ. ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಮೋದಿ ಮಾತ್ರ ಬೃಹತ್ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಬಂಗಾಳದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಇಂದಿನ ಕೋವಿಡ್‌ ಸಾವುಗಳಿಗೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ನಿನ್ನೆ ತಮಿಳುನಾಡಿನ ವಿಸಿಕೆ ಪಕ್ಷದ ಅಧ್ಯಕ್ಷ ತೋಲ್ ತಿರುಮಾವಲವನ್‌ ಒತ್ತಾಯಿಸಿದ್ದಾರೆ.

https://twitter.com/Deepakkhatri812/status/1383999792976523273?s=20

 

 

ಇದನ್ನೂ ಓದಿ: ಚೀನಾದೊಂದಿಗೆ ಸರ್ಕಾರದ ವ್ಯರ್ಥ ಮಾತುಕತೆಯಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ: ರಾಹುಲ್ ಗಾಂಧಿ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights