ಬಿಹಾರ: ಎನ್‌ಡಿಎ ಗೆದ್ದರೂ ನಿತೀಶ್‌ ಕುಮಾರ್‍ ಮುಖ್ಯಮಂತ್ರಿಯಗುವುದು ಕಷ್ಟ! ಸಿಎಂ ಪಟ್ಟ ಬಿಜೆಪಿ ಕೈಯಲ್ಲಿದೆ!

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವ ಸಾಧಿಸುವ ಸೂಚನೆಗಳು ಹೆಚ್ಚಾಗಿವೆ. ಆಡಳಿತಾರೂಢ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಅದರೆ, ಅದು ಬಿಜೆಪಿಯ ಕೈಯಲ್ಲಿದೆ. ನಿತೀಶ್ ಕುಮಾರ್‍ ಮತ್ತೆ ಮುಖ್ಯಮಂತ್ರಿ ಗದ್ದುಗೆಗೆ ಏರುವ ಕನಸು ಸಂಪೂರ್ಣವಾಗಿ ಅವರ ಮಿತ್ರ ಪಕ್ಷ ಬಿಜೆಪಿಯ ಮೇಲೆ ಅವಲಂಬಿತವಾಗಿದೆ. ಮತ ಎಣಿಕೆ ಇನ್ನು ಮುಂದುವರೆಯುತ್ತಿರುವ ಸಂದರ್ಭದಲ್ಲೇ ಈಗಾಗಲೇ ಬಿಜೆಪಿ ಬಿಹಾರದಲ್ಲಿ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಮೊದಲ ಬಾರಿಗೆ ಅವರು ಪ್ರಧಾನ ಮಂತ್ರಿ ಪಕ್ಷದೊಂದಿಗಿನ ಎನ್‌ಡಿಎನಲ್ಲಿ ಕಿರಿಯ ಪಾಲುದಾರರಾಗುವ ಸಂಭವ ಹೆಚ್ಚಾಗಿದೆ. ನಿತೀಶ್ ಕುಮಾರ್ ಅವರ ಆಪ್ತ ನಾಯಕರು “ಬ್ರಾಂಡ್ ನಿತೀಶ್” ಅನ್ನು ದೂಷಿಸದಿದ್ದರೂ ಸಹ, ಬಿಹಾರದ ಫಲಿತಾಂಶವು ಪ್ರಬಲ ಆಡಳಿತ ವಿರೋಧಿ ತತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒಪ್ಪಿಕೊಂಡಿದ್ದಾರೆ.

“ಈ ಚುನಾವಣೆಯಲ್ಲಿ ಮೋದಿಯವರ ಇಮೇಜ್ ನಮ್ಮನ್ನು ಮುನ್ನುಗ್ಗಿಸಿದೆ” ಎಂದು ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯವರ್ಗಿಯಾ ಹೇಳಿದರು. “ಸಂಜೆಯ ಹೊತ್ತಿಗೆ, ನಾವು ಸರ್ಕಾರ ರಚನೆ ಮತ್ತು ನಾಯಕತ್ವದ ವಿಷಯಗಳ ಬಗ್ಗೆ ನಿರ್ಧರಿಸುತ್ತೇವೆ” ಎಂದು ಅವರು ಎನ್‌ಡಿಟಿವಿಗೆ ತಿಳಿಸಿದರು.

ಇದನ್ನೂ ಓದಿ: 11 ರಾಜ್ಯಗಳಲ್ಲಿ ಉಪಚುನಾವಣೆ: 58 ಕ್ಷೇತ್ರಗಳಲ್ಲಿ 28 ರಲ್ಲಿ ಮುನ್ನಡೆಯಲ್ಲಿರುವ ಬಿಜೆಪಿ
ಕೈಲಾಶ್ ವಿಜಯವರ್ಗಿಯಾ ಹೇಳಿಕೆ, ಬಿಹಾರದಲ್ಲಿ ಸರ್ಕಾರದ ಮುಖ್ಯಸ್ಥರಾಗಲು ಹೊಸ ಅಭ್ಯರ್ಥಿಯ ಬಗ್ಗೆ ಬಿಜೆಪಿ ಯೋಚಿಸಬಹುದು ಎಂಬುದನ್ನು ಸೂಚಿಸುತ್ತದೆ. ಆದರೆ ಇದರ ಬಗ್ಗೆ ಪ್ರಶ್ನಿಸಿದರೇ, ಎನ್‌ಡಿಎ ಗೆಲುವು ಸಾಧಿಸಿದರೇ, ನಿತೀಶ್ ಕುಮಾರ್‌ಗೆ ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟ ನೀಡುವ ತನ್ನ ಭರವಸೆಗೆ ಬಿಜೆಪಿ ಬದ್ಧವಾಗಿದೆ ಎಂದು ವಿಜಯವರ್ಗಿಯಾ ಹೇಳಿದರು.

ಬಿಹಾರ ಚುನಾವಣೆಯಲ್ಲಿ ಇಷ್ಟು ಕಳಪೆ ಫಲಿತಾಂಶ ಬರಲು ನಿತೀಶ್ ಕುಮಾರ್ ಅವರ ತಂಡವು ಕೊರೊನಾ ಮತ್ತು ಚಿರಾಗ್ ಪಾಸ್ವಾನ್ ಕಾರಣ ಎಂದಿದ್ದಾರೆ. 38 ವರ್ಷದ ಯುವ ರಾಜಕಾರಣಿ ಚಿರಾಗ್ ಪಾಸ್ವಾನ್ ಚುನಾವಣೆಯುದ್ದಕ್ಕೂ ನಿತೀಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ನಿತೀಶ್ ಕುಮಾರ್‌ ತಂಡ ಆರೋಪಿಸಿದೆ.

ವಾಸ್ತವವಾಗಿ, ಚಿರಾಗ್ ಪಾಸ್ವಾನ್ ಅವರನ್ನು ಈ ರೀತಿಯಾಗಿ ಹೊರಬರಲು, ನಿತೀಶ್ ಕುಮಾರ್‌ ವಿರುದ್ಧ ನಿಲ್ಲಲು ಬಿಜೆಪಿಯೇ ಅವಕಾಶ ನೀಡಿತ್ತು ಎಂದು ವಿಮರ್ಶಕರು ಮತ್ತು ನಿತೀಶ್ ಕುಮಾರ್ ಅವರ ಸಹಾಯಕರು ಹೇಳುತ್ತಾರೆ. ಚಿರಾಗ್ ಪಾಸ್ವಾನ್ ಬಿಜೆಪಿ ಬತ್ತಳಿಕೆಯಿಂದ ಬಂದ ಸಣ್ಣ ಆಟಗಾರ. ಆತನನ್ನು ಮುಂದಿಟ್ಟುಕೊಂಡು ತಮ್ಮ ಹಳೆಯ ಮಿತ್ರ ನಿತೀಶ್ ಕುಮಾರ್‌ ಭವಿಷ್ಯ ನಿರ್ಧರಿಸಲು ಬಿಜೆಪಿ ಸಿದ್ಧವಾಗಿತ್ತು ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights