ಬೆಳಗಾವಿಯಲ್ಲಿ ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿ ನೇಣಿಗೆ ಶರಣು..!

ಇತ್ತೀಚೆಗೆ ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊರೊನಾ ರಾಜ್ಯಕ್ಕೆ ಒಕ್ಕರಿಸಿದ್ದೇ ಒಕ್ಕರಿಸಿದ್ದು ಬಹುತೇಕ ಜನರ ಜೀವನ ಬೀದಿ ಬಂದು ತಲುಪಿದೆ. ಮಾನಕ ಒತ್ತಡ, ಆರ್ಥಿಕ ಸಂಕಷ್ಟ, ಬಟತನ ಎಲ್ಲವೂ ಮನುಷ್ಯನನ್ನು ಕುಗ್ಗುವಂತೆ ಮಾಡಿದೆ. ಜೀವನವನ್ನು ತೊರೆಯುವಂತ ಮನಸ್ಥಿತಿಗೆ ಬಂದು ತಲುಪುವಂತೆ ಮಾಡಿದೆ. ಅದೆಷ್ಟೋ ಜನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿಯ ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

ಬೆಳಗಾವಿ ನೆಹರು ನಗರದಲ್ಲಿ ಡೆತ್‌ನೋಟ್ ಬರೆದಿಟ್ಟು ಡಿ-ಫಾರ್ಮಸಿ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ. ಮಹಾರಾಷ್ಟ್ರದ ಇಚಲಕರಂಜಿಯ ಭರತ್ ಪಾಟೀಲ್ (21) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.

ಬೆಳಗಾವಿ ಖಾಸಗಿ ಕಾಲೇಜಿನ ಡಿ-ಫಾರ್ಮಸಿ ಪ್ರಥಮ ವರ್ಷದಲ್ಲಿ ಭರತ್ ವ್ಯಾಸಂಗ ‌ಮಾಡುತ್ತಿದ್ದ. ನೆಹರು ನಗರದಲ್ಲಿ ರೂಮ್​ ಮಾಡಿಕೊಂಡು ತಂಗಿದ್ದ ಈತ, ಅಲ್ಲೇ ನೇಣು ಬಿಗಿದುಕೊಂಡಿದ್ದಾನೆ. ಮರಾಠಿ ಭಾಷೆಯಲ್ಲಿ ಮೂರು ಲೈನ್ ಡೆತ್ ನೋಟ್ ಬರೆದಿಟ್ಟು ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

‘ಎಕ್ಸಾಂ ಟೆನ್ಷನ್ ಹಾಗೂ ಫ್ಯಾಮಿಲಿ ಪ್ರಾಬ್ಲಮ್‌ನಿಂದ ಈ ನಿರ್ಣಯ ಕೈಗೊಂಡಿದ್ದೇ‌ನೆ. ನನ್ನಿಂದ ಯಾರ ಮನಸ್ಸಿಗಾದರೂ ನೋವಾದಲ್ಲಿ ಕ್ಷಮಿಸಿ, ಗುಡ್ ಬೈ’ ಅಂತ ಡೆತ್​​ನೋಟ್ ಬರೆದು ಸ್ಮೈಲಿ ಸಿಂಬಾಲ್ ಚಿತ್ರ ಬಿಡಿಸಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights