ಗಡಿ ಸಮಸ್ಯೆ: ರಾಜತಾಂತ್ರಿಕ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವುದು ಅಗತ್ಯ: ಜೈಶಂಕರ್

ರಾಜತಾಂತ್ರಿಕ ಮಟ್ಟದಲ್ಲಿ ಭಾರತ-ಚೀನಾ ಗಡಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂಬುದು ತಮಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಗಡಿಭಾಗದ ಸಂಘರ್ಷದಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುತ್ತಿದೆ. ಇಂತಹ ಸಮಸ್ಯೆಗಳನ್ನು ರಾಜತಾಂತ್ರಿಕ ಮಟ್ಟದಲ್ಲಿ ಪರಿಹರಿಸಿಕೊಳ್ಳಬೇಕು ಎಂಬುದನ್ನು ಒಬ್ಬ ಜವಾಬ್ದಾರಿಯುವ ಮಂತ್ರಿಯಾಗಿ ನಾನು ಹೇಳುತ್ತಿದ್ದೇನೆ ಎಂದು ಜೈಶಂಕರ್ ತಿಳಿಸಿದ್ದಾರೆ.

ಭಾರತ ಮತ್ತು ಚೀನಾ ಗಡಿ ಭಾಗದಲ್ಲಿನ ಉದ್ವಿಘ್ನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಅಗುರವಾಗಿ ತೆಗೆದುಕೊಳ್ಳುತ್ತಿಲ್ಲ. ಗಂಭೀರವಾಗಿ ಪರಿಗಣಿಸಿದ್ದೇವೆ. ಎರಡೂ ದೇಶಗಳು ಹೊಂದಾಣಿಕೆಯಿಂದ ಮುನ್ನಡೆಯುವುದು ಜಾಗತಿಕ ದೃಷ್ಠಿಯಿಂದ ಉತ್ತಮವಾದುದು ಎಂದು ನಾವು ಭಾವಿಸಿದ್ದೇವೆ. ಲಡಾಕ್‌ನಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ವಿದ್ಯಾಮಾನಗಳ ಬಗೆಗೆ ಸರ್ಕಾರ ಸ್ಪಷ್ಟವಾದ ನಿಲುವು ಹೊಂದಿದೆ. ಚೀನಾದ ಜೊತೆಗೆ ನಮ್ಮ ಒಪ್ಪಂದ ಏರ್ಪಟ್ಟಿದೆ. ಒಪ್ಪಂದದಂತೆ ನಡೆಯುವುದು ಭಾರತ ಮತ್ತು ಚೀನಾ ಎರಡೂ ದೇಶಗಳ ಜವಾಬ್ದಾರಿ ಎಂದು ಜೈ ಶಂಕರ್ ಹೇಳೀದ್ದಾರೆ.

1962ರಲ್ಲಿ ಭಾರತ-ಚೀನಾ ಮಧ್ಯೆ ನಡೆದ ಕದನ ನಂತರ ಮೊದಲ ಬಾರಿಗೆ ಎರಡೂ ದೇಶಗಳ ಗಡಿಯಲ್ಲಿ ಈ ಪ್ರಮಾಣದಲ್ಲಿ ಉದ್ವಿಗ್ನ ಸ್ಥಿತಿ ಕಂಡುಬರುತ್ತಿದೆ. ಜೂನ್‌ 15ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಭಾರತೀಯ ಸೈನಿಕರ ಮೇಲೆ ನಡೆಸಿದ ಘರ್ಷಣೆಯಲ್ಲಿ ಭಾರತವು ಇಪತ್ತಕ್ಕೂ ಹೆಚ್ಚು ಸೈನಿಕರು ಕಳೆದುಕೊಂಡಿದೆ. ಅಲ್ಲದೆ, ಕಳೆದ ವಾರ ಚೀನಾ ಸೈನ್ಯವು ಮಾನಸ ಸರೋವರದ ಬಳಿ ಕ್ಷಿಪಣಿಗಳನ್ನು ನಿರ್ಮಿಸಿದೆ. ಕಳೆದ ವಾರಾಂತ್ಯದಿಂದ ಭಾರತ ಮತ್ತಷ್ಟು ಸೇನೆಯನ್ನು ಭದ್ರತೆ ಹೆಚ್ಚಿಸುವ ಸಲುವಾಗಿ ನಿಯೋಜಿಸಿದೆ.


ಇದನ್ನೂ ಓದಿ: ಮೋದಿ ಯುಎಸ್ಐಎಸ್ಪಿಎಫ್ ಭಾಷಣ: ‘ಭಾರತದ ಆಕಾಂಕ್ಷೆಯ ಮೇಲೆ ಕೊರೊನಾ ಪ್ರಭಾವ ಬೀರಿಲ್ಲ’

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights