ಹತ್ರಾಸ್‌ ಸಂತ್ರಸ್ತೆ ಕೊನೆಯದಾಗಿ ಮಾತನಾಡಿದ ವಿಡಿಯೋ ವೈರಲ್: ಆಕೆ ಹೇಳಿದ್ದೇನು?

ಉತ್ರರ ಪ್ರದೇಶದ ಹತ್ರಾಸ್‌ ಸಂತ್ರಸ್ತೆ ಮನಿಷಾ ಅವರು ಕೊನೆಯದಾಗಿ ಮಾತನಾಡಿದಾಗ “ತಾನು ಇಬ್ಬರು ಪುರುಷರಿಂದ ಅತ್ಯಾಚಾರಕ್ಕೆ ಒಳಗಾಗಿದ್ದೇನೆ. ತನ್ನನ್ನು ಇಬ್ಬರು ಅತ್ಯಾಚಾರ ಮಾಡಿದರು. ನನ್ನ ತಾಯಿ ಬರುವುದನ್ನು ನೋಡಿ ಇನ್ನಿಬ್ಬರು ಓಡಿ ಹೋದರು. ಅವರು ಈ ಮೊದಲೇ ನನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದರು. ಆದರೆ ಆಗ ನಾನು ತಪ್ಪಿಸಿಕೊಂಡಿದ್ದೆ” ಎಂದು ಹೇಳುತ್ತಾ, ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ 4 ಆರೋಪಿಗಳಲ್ಲಿ ಒಬ್ಬನಾದ ರವಿ ಎಂಬ ಆರೋಪಿಯ ಹೆಸರನ್ನು ಉಲ್ಲೇಖಿಸಿದ್ದಾಳೆ” ಎಂದು ಹೇಳಿದ್ದಾರೆ ಎನ್ನಲಾಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಸೆಪ್ಟೆಂಬರ್ 22 ರಂದು ಯುವತಿಯ ಹೇಳಿಕೆಯನ್ನು ರೆಕಾರ್ಡ್ ಮಾಡಿದ್ದ ಸರ್ಕಲ್ ಅಧಿಕಾರಿ ಬ್ರಹ್ಮ್ ಸಿಂಗ್, ಈ ವಿಡಿಯೋ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಈ ಹೇಳಿಕೆಯನ್ನು ದಾಖಲಿಸಿದ ಸಮಯದಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದ ಜವಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಎಓಒಅ), ಇದನ್ನು ಮರಣದ ಅಂತಿಮ ಹೇಳಿಕೆಯಲ್ಲ ಎಂದು ಹೇಳಿದ್ದು, ಇದನ್ನು ಆಕೆ ವಾರ್ಡ್‌ನಲ್ಲಿದ್ದಾಗ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಿದೆ.

In this video before dead . Manisha is saying that she was gangraped. Manisha Valmiki had been in the ICU in a medical clinic in Uttar Pradesh until she was moved to Delhi yesterday. Each of the four assailants is in prison. They will currently additionally be accused of homicide. Updates on her demise prompted fights outside the medical clinic, with the Bhim Army of Chandrashekhar Azad "Raavan" hindering streets for quite a long time. Via online media, there has been an overflowing of pain and outrage. The lady had a place with the Scheduled Castes people group, while the aggressors were from a purported upper rank. The episode, arriving in an influx of violations against ladies in Uttar Pradesh lately, has paralyzed numerous with the sheer size of the fierceness she endured. Spinal breaks had left her incapacitated and struggling to inhale, said specialists. Area District Magistrate Praveen Kumar Laxkar said she stayed quiet when her assailants were attempting to choke her. As per her siblings, even in that critical state in the clinic, she had asked to return home. "The incident is very saddening. Our government stands with the victim's family. The investigation started immediately and four accused have been arrested. Strict action will be taken. The law will take its course," said UP Minister Siddharth Nath Singh, as his administration confronted analysis over police lapses for the situation. The lady's family has blamed the Uttar Pradesh police for not helping them at first yet responding simply after Public outrage. She was assaulted on September 14 at her town in Hathras, approximately 200 km from Delhi. She was hauled by her dupatta into the fields from a spot where she had been cutting grass with her mom and sibling. "My mother, sister, and elder brother had gone to a field to get some grass. My brother went home earlier with a large bundle of grass, while my mother and sister continued to cut them. The women were a little far from each other. Four-five people came from behind, threw my sister's dupatta around her neck, and dragged her inside the bajra field #justiceformanishavalmiki #hathrasvictim #justiceform #Repost @firdous_momz• • • • • •

Posted by The Justice on Wednesday, September 30, 2020

ಆದರೆ ಇದಕ್ಕೆ ವಿರುದ್ಧವಾಗಿ ಯುವತಿಯ ಪೋಸ್ಟ್‌ಮಾರ್ಟಂ ವರದಿಯಲ್ಲಿ ಅತ್ಯಾಚಾರವೇ ನಡೆದಿಲ್ಲ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಸಾಮೂಹಿಕ ಅತ್ಯಾಚಾರ ಮತ್ತು ಮಾರಣಾಂತಿಕ ಹಲ್ಲೆಗೊಳಗಾಗಿ ಸಾವನಪ್ಪಿದ ದಲಿತ ಯುವತಿಯ ಪೋಸ್ಟ್‌ಮಾರ್ಟಂ ವರದಿಯ ಪ್ರಕಾರ, “ಕತ್ತು ಹಿಸುಕಲಾಗಿದ್ದು, ಆಕೆಯ ಬೆನ್ನುಮೂಳೆ ಮುರಿದಿತ್ತು” ಎಂದು ತಿಳಿದುಬಂದಿದೆ. ಆದರೆ ಅಂತಿಮ ವರದಿಯಲ್ಲಿ ಅತ್ಯಾಚಾರ ನಡೆದಿರುವುದರ ಬಗ್ಗೆ ಉಲ್ಲೇಖವಿಲ್ಲ!

ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಸಂತ್ರಸ್ಥೆಯ ತಂದೆಗೆ ಹೇಳಿಕೆ ಬದಲಿಸುವಂತೆ ಧಮಕಿ ಹಾಕಿದ ಜಿಲ್ಲಾಧಿಕಾರಿ: ವಿಡಿಯೋ ವೈರಲ್‌

ದೆಹಲಿ ಆಸ್ಪತ್ರೆ ನೀಡಿರುವ ಪೋಸ್ಟ್‌ಮಾರ್ಟಂ ವರದಿಯಲ್ಲಿ, “ಹಲ್ಲೆ ಮಾಡಿರುವವರು ಆಕೆಯ ಕತ್ತನ್ನು ಹಿಸುಕಲು ಪ್ರಯತ್ನಿಸಿದ್ದಾರೆ. ಆದರೆ ಅದು ಆಕೆಯ ಸಾವಿಗೆ ಕಾರಣವಾಗಿಲ್ಲ. ಬೆನ್ನುಮೂಳೆಗೆ ಬಲವಾದ ಹೊಡೆತ ಬಿದ್ದಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ” ಎಂದು ಉಲ್ಲೇಖಿಸಲಾಗಿದೆ.

ಈಗ ಹತ್ರಾಸ್ ಸಂತ್ರಸ್ತೆ ಹೇಳಿಕೆ ನಿಡಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಸರ್ಕಾರ ಮತ್ತು ಪೊಲೀಸರ ವರ್ತನೆಯ ಮೇಲೆ ಅನುಮಾನ ಸೃಷ್ಟಿಯಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಮುಂದೆ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಯುವತಿಯ ಕುಟುಂಬವನ್ನು ದೂರವಿಟ್ಟು, ನಡುರಾತ್ರಿ ಆಕೆಯನ್ನು ಸುಟ್ಟಿದ್ದು? ಏಮ್ಸ್‌ಗೆ ಸೂಚಿಸಿದ್ದರೂ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದು? ಸರ್ಕಾರ ಮತ್ತು ಅಧಿಕಾರಿಗಳ ವರ್ತನೆ? ಕುಟುಂಬಕ್ಕೆ ಗೃಹಬಂಧನ? ಅಧಿಕಾರಿಗಳ ಬೆದರಿಕೆ? ಯುವತಿಯ ಸಹೋದರನ ಹೇಳಿಕೆ? ಮಧ್ಯಮಗಳಿಗೆ ನಿರ್ಬಂಧ? ಮುಂತಾದ ನೂರಾರು ಪ್ರಶ್ನೆಗಳು ಉದ್ಭವಿಸುತ್ತವೆ.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 20 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐಗೆ ತನಿಖೆ ನಡೆಸಲು ವಹಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ಶನಿವಾರ ಸಂಜೆ ತಿಳಿಸಿದೆ. ನಿನ್ನೆ ರಾತ್ರಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹತ್ರಾಸ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಆದೇಶ ಹೊರಬಿದ್ದಿದೆ.


ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಜಿಲ್ಲಾಧಿಕಾರಿಯೇ ಖಳನಾಯಕ: ಆತ ಮಾಡಿದ್ದೇನು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights