ಮಮತಾ ಬ್ಯಾನರ್ಜಿ BJP ಉಪಾಧ್ಯಕ್ಷನ ಸಹಾಯ ಕೇಳಿದ್ದಾರೆಂದು ಆರೋಪ; ಆಡಿಯೋ ಬಿಡುಗಡೆ ಮಾಡಿದ ಬಿಜೆಪಿ!

ಪಶ್ಚಿಮ ಬಂಗಾಳದ ನಂದಿಗ್ರಾಮ ಕ್ಷೇತ್ರು ಬಿಜೆಪಿ ಮತ್ತು ಟಿಎಂಸಿ ನಡುವಿನ ಯುದ್ದಭೂಮಿಯಾಗಿ ಮಾರ್ಪಟ್ಟಿದೆ. ನಂದಿಗ್ರಾಮದಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯಿಂದ ಸುವೇಂದು ಅಧಿಕಾರಿ ಸ್ಪರ್ಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಮತಾ ಅವರು ತಮಗೆ ಸಹಾಯ ಮಾಡುವಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರೊಲಾಯ್ ಪಾಲ್ ಕೇಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಮಮತಾ ಬ್ಯಾನರ್ಜಿ ಮತ್ತು ಪ್ರೊಲಾಯ್ ಪಾಲ್ ನಡುವಿನ ಫೋನ್‌ ಕರೆ ಸಂಭಾಷಣೆಯ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ.

“ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಪ್ರೊಲಾಯ್ ಪಾಲ್ ಅವರನ್ನು ಕರೆದು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಟಿಎಂಸಿಯಲ್ಲಿ ತಾನು ಅವಮಾನಿಸಲ್ಪಟ್ಟಿದ್ದೇನೆ. ಅಲ್ಲದೆ, ಬಿಜೆಪಿ ಪರಿವಾರಕ್ಕೆ ದ್ರೋಹ ಮಾಡಲು ನನಗೆ ಸಾಧ್ಯವಿಲ್ಲ ಎಂದು ಪ್ರೋಲೋಯ್ ಹೇಳಿದ್ದಾರೆ” ಎಂದು ಪಶ್ಚಿಮ ಬಂಗಾಳ ಬಿಜೆಪಿ ಸಹ-ಉಸ್ತುವಾರಿ ಅಮಿತ್ ಮಾಲ್ವಿಯಾ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ಹಂಚಿಕೊಂಡಿರುವ ಆಡಿಯೂ ಹೇಳಿಕೆಯಲ್ಲಿ, ಪಾಲ್ ಅವರಿಗೆ ಬ್ಯಾನರ್ಜಿಯಿಂದ ಸಹಾಯ ಕೇಳಿ ಕರೆ ಬಂದಿದೆ ಎಂದು ಹೇಳಲಾಗಿದೆ. “ಇಂದು, ನನಗೆ ಬ್ಯಾನರ್ಜಿಯಿಂದ ಕರೆ ಬಂತು. ತಮ್ಮನ್ನು ಬೆಂಬಲಿಸುವಂತೆ ಅವರು ನನ್ನನ್ನು ಕೇಳಿಕೊಂಡರು” ಎಂದು ಪಾಲ್ ಹೇಳಿದ್ದಾರೆ.

“ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಗೆಲ್ಲುವ ಬಗ್ಗೆ ಟಿಎಂಸಿ ವಕ್ತಾರರ ಕಳವಳ ಹೊಂದಿದ್ದಾರೆ. ಆದರೆ, ಪಶ್ಚಿಮ ಬಂಗಾಳದ ಉಳಿದ ಭಾಗಗಳ ಕತೆ ಏನು? ಬಿಟ್ಟುಕೊಡುವುದಾ? ಪಕ್ಷದ ಭವಿಷ್ಯದ ಬಗ್ಗೆ ಟಿಎಂಸಿಯಲ್ಲಿ ಭಯ ಮತ್ತು ಆತಂಕ ಸ್ಪಷ್ಟವಾಗಿದೆ. ಮಮತಾ ಅವರು ನಂದಿಗ್ರಾಮವನ್ನು ಕಳೆದುದೊಳ್ಳುತ್ತಾರೆ. ಪಶ್ಚಿಮ ಬಂಗಾಳವನ್ನೂ ಕೂಡ” ಎಂದು ಮಾಲ್ವಿಯಾ ಟ್ವೀಟ್‌ ಮಾಡಿದ್ದಾರೆ.

30 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಶನಿವಾರ ಆರಂಭವಾಗಿದೆ.

“ಮೇ 2ರಂದು ಟಿಎಂಸಿ ಬಂಗಾಳವನ್ನು ಗೆಲ್ಲುತ್ತದೆ. ಬಂಗಾಳದ ಮಗಳು (ಬ್ಯಾನರ್ಜಿ) ನಂದಿಗ್ರಾಮದಲ್ಲಿ ಬಂಗಾಳಕ್ಕೆ ದ್ರೋಹ ಬಗೆದವ(ಸುವೇಂದು ಅಧಿಕಾರಿ)ರನ್ನು ಸೋಲಿಸುತ್ತಾರೆ. ಮೋದಿ-ಶಾ ಮತ್ತು ಪ್ರವಾಸಿ ಗ್ಯಾಂಗ್‌ನ ಸದಸ್ಯರು ಪ್ರತಿ ಸಂಸ್ಥೆಯನ್ನು ನಾಶಮಾಡುವ ಪ್ರಯತ್ನವನ್ನು ಮುಂದುವರಿಸುತ್ತಾರೆ. ಬಂಗಾಳದ ಮಹಿಳೆಯರು ತಮಗೆ ಬೇಕಾದ ರೀತಿಯಲ್ಲಿ ಸೀರೆಗಳನ್ನು ಧರಿಸುವುದನ್ನು ಮುಂದುವರಿಸುತ್ತಾರೆ” ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒ ಬ್ರಿಯಾನ್ ಅವರು ಹೇಳಿದ್ದಾರೆ.

ಏಪ್ರಿಲ್ 1 ರಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಅಂದು ನಂದಿಗ್ರಾಮ್‌ನಲ್ಲಿ ಮತದಾನ ನಡೆಯಲಿದೆ.

Read Also: TMCಗೆ ಮತ ಹಾಕಿದರೆ ವಿವಿಪ್ಯಾಟ್‌ BJPಗೆ ಮತ ತೋರಿಸುತ್ತಿದೆ: ಆಯೋಗಕ್ಕೆ TMC ದೂರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights