ವಿಧಾನ ಪರಿಷತ್ ಚುನಾವಣೆ: ಬಿಜೆಪಿಯ ನಾಲ್ಕು ಅಭ್ಯರ್ಥಿಗಳ ಹೆಸರು ಫೈನಲ್!
ಕರ್ನಾಟಕ ವಿಧಾನ ಪರಿಷತ್‌ಗೆ ಕೆಲವು ಸದಸ್ಯರನ್ನು ಕೆಳದ ತಿಂಗಳು ನಾಮನಿರ್ದೇಶನ ಮಾಡಲಾಗಿದೆ. ಅದರೆ, ಪದವೀಧರ ಕ್ಷೇತ್ರಕ್ಕೆ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಬೇಕಿರುವ ನಾಲ್ಕು ಸ್ಥಾನಗಳು ಇನ್ನೂ ಖಾಲಿ ಉಳಿದಿದ್ದು, ಆ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಅದಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ.
ಪದವೀಧರರ ಕ್ಷೇತ್ರಗಳಿಗೆ ಚಿದಾನಂದ್ ಎಂ ಗೌಡ ಮತ್ತು ಎಸ್ ವಿ ಸಂಕನೂರು, ಶಿಕ್ಷಕರ ಕ್ಷೇತ್ರಗಳಿಗೆ ಶಶೀಲ್ ಜಿ. ನಮೋಶಿ ಹಾಗೂ ಪುಟ್ಟಣ್ಣ ಅವರ ಹೆಸರುಗಳನ್ನು ಬಿಜೆಪಿ ಫೈನಲ್ ಮಾಡಿದೆ.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಸಿಟಿ ರವಿ ರಾಜೀನಾಮೆ!
ಅಲ್ಲದೆ, ಇದೇ ಸಮಯದಲ್ಲಿ ಬಿಹಾರದ ವಿಧಾನ ಪರಿಷತ್‌ಗೂ ಚುನಾವಣೆ ನಡೆಯುತ್ತಿದ್ದು, ಅದಕ್ಕಾಗಿ ಐವರು ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಬಿಹಾರದಲ್ಲಿ ಶಿಕ್ಷಕರ ಕ್ಷೇತ್ರದಿಂದ ನಾಲ್ಕು ಮತ್ತು ಪದವೀಧರ ಕ್ಷೇತ್ರಕ್ಕೆ ಓರ್ವ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಬಿಎಸ್‌ವೈ ಪುತ್ರ ವಿಜಯೇಂದ್ರ ವಿರುದ್ಧ FIR ದಾಖಲಿಸದ DCP ವಿರುದ್ಧ ದೂರು ದಾಖಲು!