ಯಡಿಯೂರಪ್ಪ ಸರ್ಕಾರ ಪತನವಾಗಲಿದೆ; ಮಧ್ಯಂತರ ಚುನಾವಣೆ ನಡೆಯಲಿದೆ: ಟಿಬಿ ಜಯಚಂದ್ರ

ಆಪರೇಷನ್‌ ಮೂಲಕ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಧ್ಯದಲ್ಲೇ ಪತನಗೊಳ್ಳಲಿದೆ. ಇದರಿಂದಾಗಿ ರಾಜ್ಯದಲ್ಲಿ ಶೀಘ್ರವೇ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಶಿರಾ ಉಪಚುಣಾವಣೆ ಕಾಂಗ್ರೆಸ್‌ ಅಭ್ಯರ್ಥಿ ಟಿಬಿ ಜಯಚಂದ್ರ ಹೇಳಿದ್ದಾರೆ.

ಸರ್ಕಾರಗಳು ಅಲುಗಾಡಿದಾಗ ಮಧ್ಯಂತರ ಚುನಾವಣೆ ಎದುರಾಗುತ್ತವೆ. 1985 ಮತ್ತು 2008ರಲ್ಲಿ ಮೈತ್ರಿ ಸರ್ಕಾರಗಳು ಪತನಗೊಂಡಾಗ ಮಧ್ಯಂತರ ಚುನಾವಣೆ ಎದುರಾಗಿತ್ತು ಎಂದು ಅವರು ವಿವರಿಸಿದ್ದಾರೆ.

ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ಎರಡು ಬಾರಿ ಮಧ್ಯಂತರ ಚುನಾವಣೆ ಕಂಡಿದ್ದೇನೆ. ಶೀಘ್ರವೇ 3ನೇ ಮಧ್ಯಂತರ ಚುನಾವಣೆಯನ್ನು ಕಾಣಬಹುದಾಗಿದೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಯಡಿಯೂರಪ್ಪನವರ ಅವಧಿಯನ್ನು ಪೂರ್ಣಗೊಳಿಸುವುದಿಲ್ಲ, ಪತನವಾಗಲಿದೆ ಎಂದು ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ.

ಡಿಕೆಶಿ ಮೇಲೆ ಹೈಕಮಾಂಡ್‌ ಗರಂ:

ಶಿರಾ ಉಪಚುನಾವಣೆಗೆ ಟಿಬಿ ಜಯಚಂದ್ರ ಅವರನ್ನು ಅಭ್ಯರ್ಥಿಯನ್ನಾಗಿಸುವುದು ಕಾಂಗ್ರೆಸ್‌ ಹೈಕಮಾಂಡ್‌ಗೆ ಒಪ್ಪಿಗೆ ಇರಲಿಲ್ಲವಾದರೂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಜಯಚಂದ್ರರನ್ನೇ ಅಭ್ಯರ್ಥಿಯನ್ನಾಗಿಸಲು ಘೋಷಿಸಿದ್ದಾರೆ ಎಂದು ಹೇಳಲಾಗಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಟಿಬಿ ಜಯಚಂದ್ರ ಮತ್ತು ಅವರ ಪುತ್ರ ಟಿಜೆ ಸಂತೋಷ್ ಇಬ್ಬರು ಸೋಲನುಭವಿಸಿದ್ದರು, ಸಂತೋಷ್ ಚಿಕ್ಕನಾಯಕನಹಳ್ಳಿಯಿಂದ ಸ್ಪರ್ದಿಸಿದಾಗ ಹಿಂದುಳಿದ ವರ್ಗಗಳ ಸಮುದಾಯದವರು ಭಾರೀ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಉಪಚುನಾವನಣೆಗೆ ಬೇರೋಬ್ಬ ಅಭ್ಯರ್ಥಿಯನ್ನು ಘೋಷಿಸಲು ನಿರ್ಧರಿಸಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಬೇರೆ ನಾಯಕರನ್ನು ಕಣಕಿಳಿಸಲು ಹೈಕಮಾಂಡ್‌ ಚಿಂತಿಸಿತ್ತು. ಅಲ್ಲದೆ,  ಕಾಡುಗೊಲ್ಲ ಸಮುದಾಯದ ಪ್ರಮುಖ ಮುಖಂಡ ಸಾಸಲು ಸತೀಶ್ ಅವರನ್ನು ಅಭ್ಯರ್ಥಿಯಾಗಿಸಲು ಚಿಂತಿಸಲಾಗಿತ್ತು ಎನ್ನಲಾಗಿದೆ. ಇವರಲ್ಲದೆ,  ಚಿತ್ರದುರ್ಗ ಮಾಜಿ ಸಂಸದ ಸಿಪಿ ಮೂಡಲಗಿರಿಯಪ್ಪ ಅವರ ಪುತ್ರ ಡಾ.ರಾಜೇಶ್ ಗೌಡ ಅವರಿಗೆ ಟಿಕೆಟ್ ನೀಡುವಂತೆ ಲಾಬಿ ನಡೆಸಲಾಗಿತ್ತು. ಆದರೆ, ಡಿಕೆ ಶಿವಕುಮಾರ್ ಅಂತಿಮವಾಗಿ ಟಿಬಿ ಜಯಚಂದ್ರ ಹೆಸರನ್ನು ಫೈನಲ್ ಮಾಡಿದ್ದಾರೆ. ಇದು ಹೈಕಮಾಂಡ್‌ಗೆ ಸಿಟ್ಟು ತರಿಸಿದೆ ಎನ್ನಲಾಗಿದೆ.


ಇದನ್ನೂ ಓದಿ: ಕಳೆದ ಆರು ವರ್ಷಗಳಲ್ಲಿ ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ?: ಮೋದಿಗೆ ಡಿಕೆಶಿ ಪ್ರಶ್ನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights