ಟಿವಿ ಮಾಧ್ಯಮಗಳ ಡಿಬೇಟ್‌ಗಳಿಂದ ದೆಹಲಿಯಲ್ಲಿ ಮಾಲಿನ್ಯ ಹೆಚ್ಚುತ್ತಿದೆ: ಸುಪ್ರೀಂ ಕೋರ್ಟ್‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ದಟ್ಟವಾಗಿದೆ. ಹೀಗಾಗಿ, ದೆಹಲಿ ಮತ್ತು ಸುತ್ತಲಿನ ಶಾಲೆಗಳಿಗೂ ರಜೆ ಘೋಷಿಸಿಲಾಗಿದೆ. ಈ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದೆ. ಈ ಮಧ್ಯೆ, ಟಿವಿ ಸುದ್ದಿವಾಹಿನಿಗಳಲ್ಲಿ ಮಾಲಿನ್ಯದ ಬಗ್ಗೆ ನಡೆಯುತ್ತಿರುವ ಅಸಂಖ್ಯಾ ಡಿಬೇಟುಗಳು ನಡೆಯುತ್ತಿದ್ದು, ಅವುಗಳಿಂದಲೇ ಹೆಚ್ಚಿನ ಮಾಲಿನ್ಯ ಸೃಷ್ಟಿಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಮುಖ್ಯನ್ಯಾಯಮೂರ್ತಿ ಎನ್.ವಿ ರಮಣ ಅವರ ನೇತೃತ್ವದ ಸದಸ್ಯಪೀಠವು ಮಾಲಿನ್ಯದ ಬಗ್ಗೆ ಕಳೆದ ನಾಲ್ಕು ದಿನಗಳಿಂದ ಸರ್ಕಾರವನ್ನು ಪ್ರಶ್ನಿಸುತ್ತಲೇ ಇದೆ. ಇಂದು, ಮಾಲಿನ್ಯ ನಿಯಂತ್ರಣ ಕ್ರಮಗಳ ಬಗ್ಗೆ ಸರ್ಕಾರಗಳ ಅಫಿಡೇವಿಡ್‌ಅನ್ನು ಕೋರ್ಟ್‌ ಆಲಿಸಿದೆ. ಕೇಂದ್ರ ಸರ್ಕಾರವು ಪಂಜಾಬ್‌ನಲ್ಲಿ ರೈತರು ಹುಲ್ಲನ್ನು ಸುಡುತ್ತಿರುವುದರಿಂದ ಮಾಲಿನ್ಯ ಹೆಚ್ಚಾಗಿದೆ ಎಂದು ವಾದಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೋರ್ಟ್‌, ಎಲ್ಲದಕ್ಕೂ ರೈತರನ್ನೇ ಹೊಣೆ ಮಾಡಬೇಡಿ ಎಂದು ಸರ್ಕಾರಕ್ಕೆ ಹೇಳಿದೆ. ಈ ವೇಳೆ ಟಿವಿ ಡಿಬೇಟ್‌ಗಳ ಬಗ್ಗೆ ಮಾತನಾಡಿದ ಕೋರ್ಟ್‌, ಟಿವಿ ಮಾಧ್ಯಮಗಳ ಚರ್ಚೆಗಳಲ್ಲಿ ಭಾಗಿಯಾದ ಪ್ರತಿಯೊಬ್ಬರು ತಮ್ಮದೇ ಆದ ಅಜೆಂಡಾಗಳನ್ನು ಹೊಂದಿರುತ್ತಾರೆ ಎಂದು ಹೇಳಿದೆ.

ಟಿವಿ ಡಿಬೇಟ್‌ನಲ್ಲಿ ಭಾಗಿಯಾಗುವವರ ಅವರದ್ದೇ ಆದ ವಾದಗಳಿಂದಾಗಿ ವಿಷಯ ಹಾದಿ ತಪ್ಪುತ್ತಿದೆ. ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳುವವರಿಗೆ ನಿಜಕ್ಕೂ ದೆಹಲಿಯ ಪರಿಸ್ಥಿತಿ ಏನು ಎಂಬುದರ ಅರಿವು ಇರುವುದಿಲ್ಲ. ಸುಮ್ಮನೆ ತಮ್ಮ ವಾದ ಮಂಡಿಸುವ ಸಲುವಾಗಿ ಅಲ್ಲಿ ಕೂತಿರುತ್ತಾರೆ. ಆದರೆ ನಾವು ಆ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.

ಸಮಾಜಕ್ಕೆ ಒಳಿತನ್ನು ಉಂಟುಮಾಡುವ ಉದ್ದೇಶದಿಂದ ನಾವು ಕೆಲಸಮಾಡುತ್ತಿದ್ದೇವೆ. ನಮ್ಮ ಉದ್ದೇಶಗಳು ಸ್ಪಷ್ಟವಾಗಿವೆ. ಹೀಗಾಗಿ ನಮ್ಮನ್ನು ಹಾದಿತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ: “2-ದಿನಗಳ ಲಾಕ್‌ಡೌನ್?”: ದೆಹಲಿ ಮಾಲಿನ್ಯ ತಡೆಗೆ ತುರ್ತು ಯೋಜನೆಗಾಗಿ ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights