ವಿಡಿಯೋ: ದೇಹ – ಆತ್ಮಗಳು ಶುದ್ದವಾಗುತ್ತವೆ ಎಂದು ಸಗಣಿ ತಿಂದ ವೈದ್ಯ!

ಹಸುವಿನಿಂದ ಪಡೆಯಲಾಗುವ ಪಂಚಗವ್ಯದ ಪ್ರತಿಯೊಂದು ಭಾಗವೂ ಮನುಷ್ಯನಿಗೆ ಉಪಯುಕ್ತಕರ, ಗೋಮೂತ್ರ ಮತ್ತು ಸಗಣಿ ತಿನ್ನುವುದರಿಂದ ದೇಹ ಮತ್ತು ಆತ್ಮಗಳು ಶುದ್ದವಾಗುತ್ತವೆ ಎಂದು ಹೇಳಿರುವ ವೈದ್ಯರೊಬ್ಬರು ಸಗಣಿ ತಿಂದಿರುವ ಘಟನೆ ಹರ್ಯಾಣದ ಕರ್ನಾಲ್‌ನಲ್ಲಿ ನಡೆದಿದೆ.

ಕರ್ನಾಲ್‌ನಲ್ಲಿ ಮಕ್ಕಳ ತಜ್ಞರಾಗಿರುವ ವೈದ್ಯ ಡಾ. ಮನೋಜ್ ಮಿತ್ತಲ್, ತಾವು ಎಂಬಿಬಿಎಸ್‌ ಹಾಗೂ ಎಂಡಿ ಪದವೀಧರರು ಎಂದು ಹೇಳಿಕೊಂಡಿದ್ದಾರೆ. ಅವರು ಸಗಣಿ ತಿಂದಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.

ಡಾ. ಮನೋಜ್ ಮಿತ್ತಲ್ ಅವರು ಗೋಶಾಲೆಯೊಂದರಲ್ಲಿ ನಿಂತುಕೊಂಡು ಗೋವಿನ ಸಗಣಿ ಹಾಗೂ ಮೂತ್ರ ಸೇವನೆಯಿಂದ ಗಂಭೀರ ಕಾಯಿಲೆಗಳನ್ನು ದೂರ ಇಡಬಹುದು ಎಂದು ಹೇಳುತ್ತಾ, ಸಗಣಿ ತಿನ್ನುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಸಗಣಿ ಸೇವನೆಯಿಂದ ದೇಹ ಹಾಗೂ ಹೃದಯ ಶುದ್ಧಿಯಾಗುತ್ತದೆ. ನಮ್ಮ ಆತ್ಮ ಶುದ್ಧವಾಗುತ್ತದೆ. ನಮ್ಮ ದೇಹವನ್ನು ಸಗಣಿ ಹೊಕ್ಕುತ್ತಲೇ ಶುದ್ಧಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮಹಿಳೆಯರು ಸಗಣಿಯನ್ನು ತಿಂದರೆ ಹೆರಿಗೆಯು ಸಹಜವಾಗಿ ಆಗುವುತ್ತದೆ. ಸಿಸೇರಿಯನ್ ಮಾಡಬೇಕಾದ ಪರಿಸ್ಥಿತಿಯನ್ನು ದೂರಾಗಿಸಬಹುದು ಎಂದು ಅವರು ಹೇಳಿದ್ದಾರೆ.

ವೈದ್ಯರ ಈ ವಿಡಿಯೋಗೆ ಹಲವರು ಪ್ರತಿಕ್ರಿಯೆ ನೀಡಿದ್ದು, ವೈದ್ಯಕೀಯ ತರಬೇತಿಯನ್ನು ಏನನ್ನು ಕಲಿತಿರಿ, ಸಗಣಿ ತಿನ್ನುವ ಬುದ್ದಿ ಕೇವಲ ಸಂಘಪರಿವಾರದ ಭಕ್ತರಿಗಷ್ಟೇ ಇತ್ತೆಂದು ಭಾವಿಸಿದ್ದೆವು. ಅದು, ಈಗ ಇಂತಹ ವೈದ್ಯರಿಗೂ ಬಂದಿದೆ. ಭಕ್ತರು ವೈದ್ಯರಾಗಬಾರದು ಎಂದು ಟೀಕಿಸಿದ್ದಾರೆ

ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ; ಪ್ರಾಂಶುಪಾಲೆ ಮತ್ತು ಶಿಕ್ಷಕನ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights