FACT CHECK | ತೀವ್ರ ಭೂಕಂಪನಕ್ಕೆ ಕುಸಿದು ಬಿತ್ತೆ ಬೊಲಿವಿಯಾದ ಸಂಸತ್ತು?
ಜುಲೈ 3 ರಂದು ಬೊಲಿವಿಯಾದ ಪೊಟೊಸಿ ಪ್ರದೇಶದಲ್ಲಿ ಸಂಭವಿಸಿದ 5.4 ತೀವ್ರತೆಯ ಭೂಕಂಪದ ನಂತರ , ಬೊಲಿವಿಯನ್ ಸಂಸತ್ತಿನ ಅಸೆಂಬ್ಲಿ ಹಾಲ್ ಭೂಕಂಪದ ಸಮಯದಲ್ಲಿ ಕುಸಿದು 50 ರಿಂದ 90 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಹಲವರು ವೈರಲ್ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
Oh Bolivia Parliament. pic.twitter.com/9R1llAtL0d
— Humble Hedsten (@Chinda1111) July 4, 2025
ವೈರಲ್ ಕ್ಲಿಪ್‌ನಲ್ಲಿ ಸಂಸತ್ತಿನ ಅಧಿವೇಶನ ನಡೆಯುತ್ತಿರುವಂತೆ ಕಾಣುತ್ತಿದೆ, ಆದರೆ ಇದ್ದಕ್ಕಿದ್ದಂತೆ ಕಟ್ಟಡ ಕಂಪನದಿಂದ ಕೆಲವೇ ಸೆಕೆಂಡುಗಳಲ್ಲಿ, ಸೀಲಿಂಗ್ ಮತ್ತು ಗೋಡೆಗಳು ಕುಸಿದು ಬೀಳುತ್ತವೆ, ಭಗ್ನಾವಶೇಷಗಳು ಬೀಳುತ್ತವೆ ಮತ್ತು ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡುವುದು ಕಂಡು ಬಂದಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲಿಸಲು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ವರದಿಗಳು ಲಭ್ಯವಾಗಿಲ್ಲ. ಒಂದು ವೇಳೆ ಬೊಲಿವಿಯಾದ ಸಂಸತ್ತು ಭೂಕಂಪನದಿಂದ ಕುಸಿದಿದ್ದರೆ ಅದು ಜಾಗತಿಕ ಸುದ್ದಿಯಾಗಬೇಕಿತ್ತು, ಆದರೆ ಆ ರೀತಿಯ ಯಾವುದೇ ಸುದ್ದಿಗಳು ಕಂಡುಂದಿಲ್ಲ.

ಈ ಹಿನ್ನೆಲೆಯಲ್ಲಿ ನಾವು ಬೊಲಿವಿಯಾದ ಅಧಿಕೃತ ಭೂಕಂಪನ ಮೇಲ್ವಿಚಾರಣಾ ಸಂಸ್ಥೆಯಾದ ಸ್ಯಾನ್ ಕ್ಯಾಲಿಕ್ಸ್ಟೋ ವೀಕ್ಷಣಾಲಯದ ವರದಿಯನ್ನು ಪರಿಶೀಲಿಸಿದೆವು, ಈ ವರದಿಯಲ್ಲಿ ಪೊಟೊಸಿಯ ನಾರ್ ಲಿಪೆಜ್ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿ ಮಾಡಿದೆ. ಆದರೆ ಪ್ರಮುಖ ಸರ್ಕಾರಿ ಕಟ್ಟಡಗಳಿಗೆ ಹಾನಿ ಅಥವಾ ಯಾವುದೇ ಸಾವುನೋವುಗಳ ಬಗ್ಗೆ ಯಾವುದೇ ಉಲ್ಲೇಖವನ್ನು ಈ ವರದಿ ಮಾಡಿಲ್ಲ. ಹೀಗಾಗಿ ವೀಡಿಯೊವನ್ನು ಕೃತಕವಾಗಿ ರಚಿಸಿರುವ ಸಾಧ್ಯತೆ ಇರುವುದು ನಮಗೆ ಖಚಿತವಾಗಿತ್ತು.
#Sociedad | ⚠️ Durante este jueves 3 de julio se registró el sismo más fuerte del 2025, el Observatorio San Calixto reportó que fue de magnitud 5.4 en la escala de Richter con epicentro en la Provincia Nor Lípez, #Potosí.
Todos los detalles ⤵️https://t.co/WnccJnKetP— Bolivia Tv Oficial (@Canal_BoliviaTV) July 3, 2025

ವಿಡಿಯೋದ ಮೂಲವನ್ನು ಪರಿಶೀಲಿಸಲು, ವಿಡಿಯೋದ ಥಂಬ್‌ನೇಲ್‌ನ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಬೊಲಿವಿಯನ್ ಚೇಂಬರ್ ಆಫ್ ಡೆಪ್ಯೂಟೀಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ 2024-2025 ಶಾಸಕಾಂಗ ಅವಧಿಗೆ ಹೊಸ ಸಮಿತಿಗಳು ಮತ್ತು ಆಯೋಗಗಳ ಕುರಿತು ನವೆಂಬರ್ 2024 ರ ಪೋಸ್ಟ್ ಕಂಡು ಬಂದಿದೆ. ವೈರಲ್ ಪೋಸ್ಟ್‌ನಲ್ಲಿ ಬಳಸಲಾದ ಅದೇ ಆಯಾಮ ಈ ಫೋಟೋದಲ್ಲಿ ಕೂಡ ಕಂಡು ಬಂದಿದೆ. ಈ ಇದರಲ್ಲಿ ಯಾವುದೇ ಹಾನಿಯಾಗದಿರುವುದು ಸ್ಪಷ್ಟವಾಗಿದೆ. ಈ ವೈರಲ್ ಫೋಟೋವನ್ನು ಬಳಸಿಕೊಂಡಿರುವ ಕಿಡಿಗೇಡಿಗಳು ಕೃತಕ ವಿಡಿಯೋ ನಿರ್ಮಿಸಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ತೀವ್ರ ಪ್ರಮಾಣದ ಭೂಕಂಪದಿಂದ ಬೊಲಿವಿಯಾದ ಸಂಸತ್ತು ಕುಸಿದಿದೆ ಎಂದು ತಿರುಚಲಾದ ವಿಡಿಯೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಚಂದ್ರಶೇಖರ್ ಆಜಾದ್ ರಾವಣ ಬೆಂಬಲಿಗರನ್ನು ಬಂಧಿಸಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

