FACT CHECK | ‘ಜನೇಧಾರಿ ಬ್ರಾಹ್ಮಣ’ ರಾಹುಲ್ ಗಾಂಧಿಯ ಕೋಣೆಯಲ್ಲಿ ಕಂಡುಬಂದಿದ್ದು ಏಸು ಕ್ರಿಸ್ತನ ಚಿತ್ರ ಎಂಬುದು ಸುಳ್ಳು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಮೇ 25 ರಂದು (ಇಂದು ಶನಿವಾರ) ದೆಹಲಿಯಲ್ಲಿ ಲೋಕಸಭೆ ಚುನಾವಣೆಯ 6 ನೇ ಹಂತದ ಮತದಾನದಲ್ಲಿ ಮತ ಚಲಾಯಿಸಿದರು. ಇದರ ನಂತರ, ತಾಯಿ-ಮಗ ಜೋಡಿಯು ತಮ್ಮ ಶಾಹಿ ಹಚ್ಚಿದ ಬೆರಳುಗಳನ್ನು ತೋರಿಸುವ ಸೆಲ್ಫಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರ ಹಿಂದೆ ಇರುವ ಪೋಸ್ಟರ್ ಯೇಸುಕ್ರಿಸ್ತನನ್ನು ಚಿತ್ರಿಸುತ್ತದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ. ಈ ಚಿತ್ರವನ್ನು ರಾಹುಲ್ ಗಾಂಧಿಯವರು ತಮ್ಮ ಕೋಣೆಯಲ್ಲಿ ಯೇಸುವಿನ ಚಿತ್ರವನ್ನು ಹೊಂದಿದ್ದಾರೆ. ಅದೇ ಕೋಣೆಯಲ್ಲಿ ಹಿಂದೂ ದೇವರುಗಳ ಚಿತ್ರಕ್ಕೆ ಜಾಗವಿಲ್ಲ ಚೆನ್ನಾಗಿದೆ ಎಂದು ಎಕ್ಸ್‌ ಖಾತೆ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಬ್ರಾಹ್ಮಣ ರಾಹುಲ್ ಗಾಂಧಿ ಮನೆಯಲ್ಲಿ ಕ್ರಿಶ್ಚಿಯನ್ ಧರ್ಮದ ಫೋಟೋ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

 

‘MrSinha ಎಂಬ ಎಕ್ಸ್‌ ಖಾತೆ ಬಳಕೆದಾರರು ಇದೇ ಪೋಸ್ಟ್‌ಅನ್ನು ಹಂಚಿಕೊಂಡು “ಜನೇಧಾರಿ ಬ್ರಾಹ್ಮಣ” ರಾಹುಲ್ ಗಾಂಧಿ ಅವರ ಕೋಣೆಯಲ್ಲಿ ಯೇಸುವಿನ ಚಿತ್ರವಿದೆ. ಒಂದೇ ಕೋಣೆಯಲ್ಲಿ ಹಿಂದೂ ದೇವರುಗಳ ಚಿತ್ರವಿಲ್ಲ. ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಹಾಗಿದ್ದರೆ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ರಾಹುಲ್ ಮತ್ತು ಸೋನಿಯಾ ಗಾಂಧಿ ತಮ್ಮ ಮತ ಚಲಾವಣೆ ಮಾಡಿದನಂತರ ಸೆಲ್ಫಿಯೊಂದಿಗೆ ಹಂಚಿಕೊಂಡ ಫೋಟೊದ ಕೋಣೆಯಲ್ಲಿ ಏಸು ಚಿತ್ರ ಇದೆ ಎಂದು ಪ್ರತಿಪಾದಿಸಿ ಮಾಡಿದ ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, 1932ರಲ್ಲಿ ನಿಕೋಲಸ್ ರೋರಿಚ್ ಅವರು ರಚಿಸಿದ ವರ್ಣಚಿತ್ರ  ‘ಮಡೋನಾ ಒರಿಫ್ಲಮ್ಮ.’ ಎಂಬ ಅಂಶ ತಿಳಿದುಬಂದಿದೆ. ಅದರ ಮೂಲ ಚಿತ್ರವನ್ನು ಇಲ್ಲಿ ಸ್ಪಷ್ಟವಾಗಿ ನೋಡಬಹುದು.

ಇದು ರಷ್ಯಾದ ವರ್ಣಚಿತ್ರಕಾರ ನಿಕೋಲಸ್ ರೋರಿಚ್ ಅವರ ‘ಮಡೋನಾ ಒರಿಫ್ಲಾಮಾ’ ಎಂಬ ಶೀರ್ಷಿಕೆಯ ಚಿತ್ರವಾಗಿದ್ದು, ಅಲ್ಲಿ ಪೇಂಟಿಂಗ್‌ನಲ್ಲಿರುವ ಮಹಿಳೆಯು ಶಾಂತಿ ಸಂಕೇತದ ಬ್ಯಾನರ್ ಹಿಡಿದಿರುವುದು ಸ್ಪಷ್ಟವಾಗುತ್ತದೆ. ರಾಹುಲ್ ಮತ್ತು ಸೋನಿಯಾ ಗಾಂಧಿ ತಾಯಿ-ಮಗ ಜೋಡಿಯ ಹಿಂದಿನ ಪೋಸ್ಟರ್ ನಲ್ಲಿ ಇರುವುದು ಜೀಸಸ್ ಅಲ್ಲ. ಅದು 1932 ರಲ್ಲಿ ನಿಕೋಲಸ್ ರೋರಿಚ್‌ರವರು ರಚಿಸಿದ ‘ಮಡೋನಾ ಒರಿಫ್ಲಾಮಾ’ ಕಲಾಕೃತಿಯೇ ಹೊರತು ಜೀಸಸ್‌ದಲ್ಲ.

 

ವೈರಲ್ ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅವುಗಳ ಹಿಂದಿನ ಪೋಸ್ಟರ್‌ನಲ್ಲಿ ಬಿಳಿಯ ಬಟ್ಟೆಯ ಮೇಲೆ ಮೂರು ಕೆಂಪು ಚುಕ್ಕೆಗಳನ್ನು ನೋಡಬಹುದು. ಯೇಸುಕ್ರಿಸ್ತನ ಚಿತ್ರಗಳಲ್ಲಿ ಅಂತಹ ಸಂಕೇತಗಳು ಎಲ್ಲಿಯೂ ಕಾಣಸಿಗುವುದಿಲ್ಲ. ಮೂಲಚಿತ್ರ ಮತ್ತು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂದಿ ಹಂಚಿಕೊಂಡಿರುವ ಸೆಲ್ಫಿ ಚಿತ್ರಗಳ ನಡುವೆ ಹೋಲಿಕೆ ಮಾಡಿದಾಗ, ಇದು ಜೀಸಸ್‌ನ ಚಿತ್ರವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿಯವರ ಸೆಲ್ಫಿಯ ಫೋಟೊದ ಹಿಂಭಾಗದಲ್ಲಿ ಕಂಡುಬರುವ ಚಿತ್ರವು ಯೇಸುವಿನದ್ದಲ್ಲ. ಬದಲಿಗೆ ಅದು 1932 ರಲ್ಲಿ ನಿಕೋಲಸ್ ರೋರಿಚ್‌ರವರು ರಚಿಸಿದ ‘ಮಡೋನಾ ಒರಿಫ್ಲಾಮಾ’ ಕಲಾಕೃತಿ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಂಜಾಬ್ ಸಿಎಂ ಭಗವಂತ್ ಮಾನ್ ಮೇಲ್ ಸಾರ್ವಜನಿಕರಿಂದ ಹಲ್ಲೆ ನಡೆಯಿತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights