ಸ್ಮಶಾನದ ಮುಂದೆಯೂ ಹೌಸ್‌ಫುಲ್‌ ಬೋರ್ಡ್‌; ಬೆಂಗಳೂರಿನಲ್ಲಿ ಸಂಸ್ಕಾರಕ್ಕೂ ಪ್ರಿ-ಬುಕಿಂಗ್‌!

ಚಿತ್ರಮಂದಿರಗಳ ಮುಂದೆ ಕಾಣಸಿಗುತ್ತಿದ್ದ ಹೌಸ್‌ಫುಲ್‌ ಬೋರ್ಡುಗಳು ಇದೀಗ ಸ್ಮಶಾನಗಳ ಮುಂದೆಯೂ ಕಾಣುತ್ತಿದೆ. ಮೃತದೇಹಗಳನ್ನು ಹೊತ್ತ ಆಂಬುಲೆನ್ಸ್‌ಗಳು ಸ್ಮಶಾನಗಳ ಮುಂದೆ ಸಾಲುಗಟ್ಟಿ ನಿಂತಿವೆ.

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದ ಚಾಮರಾಜಪೇಟೆಯಲ್ಲಿರುವ ಸ್ಮಶಾನದ ಗೇಟ್‌ನಲ್ಲಿ ಇಂದು ಹೌಸ್‌ಫುಲ್‌ ಎಂಬ ಬೋರ್ಡ್‌ ಕಂಡುಬಂದಿದೆ. ಇಂದು 19 ಮೃತದೇಹಗಳ ದಹನಕ್ಕೆ ಬುಕಿಂಗ್ ಆಗಿದೆ. ಇಲ್ಲಿ ದಿನಕ್ಕೆ 20 ಶವಗಳ ಅಂತ್ಯಕ್ರಿಯೆಗೆ ಅವಕಾಶ ಇದೆ. ಈಗಾಗಲೇ ಮೃತದೇಹ ದಹನದ ಬುಕಿಂಗ್ ಕಂಪ್ಲೀಟ್ ಆಗಿರುವ ಹಿನ್ನೆಲೆ ಚಿತಾಗಾರದ ಸಿಬ್ಬಂದಿ ಹೌಸ್ ಫುಲ್ ಬೋರ್ಡ್ ಹಾಕಿದ್ದಾರೆ.

ಇನ್ನು ಮಾಗಡಿ ರಸ್ತೆಯ ತಾವರೆಕೆರೆಯಲ್ಲಿ ಬಯಲು ಚಿತಾಗಾರದ ಮುಂದೆ ಶವ ಹೊತ್ತು ತಂದ ಆಂಬುಲೆನ್ಸ್​ಗಳು ಸಾಲುಗಟ್ಟಿ ನಿಂತಿವೆ. ಈಗಾಗಲೇ 43 ಮೃತದೇಹಗಳ ಅಂತ್ಯಸಂಸ್ಕಾರ ಆಗಿದೆ. 50 ಶವಗಳ ಅಂತ್ಯಸಂಸ್ಕಾರಕ್ಕೆ ಸಿಬ್ಬಂದಿ ಟೋಕನ್ ವ್ಯವಸ್ಥೆ ಕಲ್ಪಿಸಿದ್ದಾರೆ. ಒಟ್ಟಾರೆ ಇಂದು 58 ಮೃತದೇಹ ಅಂತ್ಯಸಂಸ್ಕಾರ ಮಾಡಲಷ್ಟೆ ಸಾಧ್ಯ ಎಂದು ಹೇಳಿವೆ.

ಒಂದೆಡೆ, ಆಸ್ಪತ್ರೆಗಳ ಮುಂದೆ ಚಿಕಿತ್ಸೆಗಾಗಿ, ಬೆಡ್‌ಗಾಗಿ, ವೆಂಟಿಲೇಟರ್‌, ಆಕ್ಸಿಜನ್‌ಗಳಿಗಾಗಿ ಜನರು ಕ್ಯೂನಿಂತಿದ್ದಾರೆ. ಮೊತ್ತೊಂದೆಡೆ, ಕೊರೊನಾದಿಂದ ಸಾವನ್ನಪ್ಪಿದ್ದ ಮೃಹದೇಶಗಳ ಸಂಸ್ಕಾರಕ್ಕಾಗಿ ಸ್ಮಶಾನಗಳ ಮುಂದೆಯೇ ಶವಗಳನ್ನು ಹೊತ್ತ ಆಂಬುಲೆನ್ಸ್‌ಗಳು, ಮೃತರ ಕುಟುಂಬಸ್ಥರು ಕ್ಯೂನಲ್ಲಿ ನಿಂತಿದ್ದಾರೆ. ಭಾನುವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೇ 25ಕ್ಕೂ ಹೆಚ್ಚುನ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ‘ಬಿ’ ಕರಾಬು ಭೂಮಿ ಮಾರಾಟಕ್ಕೆ ಸರ್ಕಾರ ನಿರ್ಧಾರ?; ರಿಯಲ್‌ ಎಸ್ಟೇಟ್‌ಗೆ 21,000 ಎಕರೆ ಸರ್ಕಾರಿ ಭೂಮಿ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights